ಬೆಂಗಳೂರು, ನ.18- ರಾಜ್ಯದಲ್ಲಿ ಆಡಳಿತ ನಢಸುತ್ತಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರ, ಶೇಕಡಾ 60% ಕಮಿಷನ್ ಸರ್ಕಾರ ಎಂಬುದು ಜಗಜ್ಜಾಹಿರವಾಗಿದೆ. ಇಂತಹ ಸರ್ಕಾರದ ವಿರುದ್ಧ ಬೆಳಗಾವಿ ವಿಧಾನ ಮಂಡಲ ಅಧಿವೇಶನದಿಂದ ಸಮರ ಆರಂಭಿಸಲಾಗುವುದು ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ (R Ashok) ಘೋಷಿಸಿದ್ದಾರೆ.
ಪ್ರತಿಪಕ್ಷ ನಾಯಕರಾಗಿ ಆಯ್ಕೆಯಾದ ನಂತರ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವರನ್ನು ಭೇಟಿ ಮಾಡಿ,ಪಕ್ಷದ ಕಚೇರಿಗೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಸರ್ಕಾರದಲ್ಲಿ ವರ್ಗಾವಣೆ ದಂಧೆ ಈಗಲೂ ಎಗ್ಗಿಲ್ಲದೆ ನಡೆಯುತ್ತಿದೆ. ನಮ್ಮ ಸರ್ಕಾರವನ್ನು 40% ಕಮಿಷನ್ ಸರ್ಕಾರ ಎಂದು ಇದೇ ಕಾಂಗ್ರೆಸ್‍ನಾಯಕರು ಆರೋಪಿಸಿದ್ದರು. ಅಂದು ಯಾವುದೇ ದಾಖಲೆಗಳನ್ನು ಇಟ್ಟುಕೊಂಡು ಆರೋಪ ಮಾಡಿರಲಿಲ್ಲ. ಈಗ ಇವರ ವರ್ಗಾವಣೆ ದಂಧೆಗೆ ದಾಖಲೆಗಳೇ ಬಹಿರಂಗಗೊಂಡಿವೆ. ನನ್ನ ಪ್ರಕಾರ ಇದು 60% ಕಮಿಷನ್ ಸರ್ಕಾರ ಎಂದು ಆಪಾದಿಸಿದರು ಬೆಳಗಾವಿ ಅಧಿವೇಶನದಿಂದಲೇ ಸರ್ಕಾರದ ವಿರುದ್ಧ ನಮ್ಮ ಹೋರಾಟ ಆರಂಭವಾಗಲಿದೆ. ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನವನ್ನು ಗೆಲ್ಲುವುದೇ ನಮ್ಮ ಮುಂದಿರುವ ಸವಾಲು. ಅದನ್ನು ನಾವು ಮೆಟ್ಟಿ ನಿಲ್ಲುತ್ತೇವೆ ಎಂಬ ವಿಶ್ವಾಸವಿದೆ ಎಂದರು.
ವಿರೋಧ ಪಕ್ಷವಾಗಿ ನಾವು ಎಲ್ಲವನ್ನು ವಿರೋಧ ಮಾಡುವುದೇ ನಮ್ಮ ಕೆಲಸವಲ್ಲ. ನಾಡಿನ ಪ್ರಚಲಿತ ಸಮಸ್ಯೆಗಳ ಬಗ್ಗೆ ಜನರ ದನಿಯಾಗಿ ಸದನದಲ್ಲಿ ಹೋರಾಟ ಮಾಡುತ್ತೇವೆ. ಸರ್ಕಾರ ತಪ್ಪು ಮಾಡಿದಾಗ ಕಿವಿ ಹಿಂಡುತ್ತೇವೆ. ಅದಕ್ಕೂ ಬಗ್ಗದಿದ್ದಾಗ ಸರ್ಕಾರವನ್ನೇ ಕಿತ್ತೆಸೆಯಲು ಹಿಂದೆಮುಂದೆ ನೋಡುವುದಿಲ್ಲ ಎಂದು ಎಚ್ಚರಿಸಿದರು.
ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಎಂದೂ ಕೂಡ ಯಾವುದೇ ಹುದ್ದೆಗೆ ಲಾಬಿ ಮಾಡಿದವನಲ್ಲ. ವರಿಷ್ಠರು ನನ್ನ ಮೇಲೆ ಯಾವ ವಿಶ್ವಾಸ ಇಟ್ಟುಕೊಂಡು ಉನ್ನತ ಸ್ಥಾನ ನೀಡಿದ್ದಾರೋ ಅವರ ಗೌರವಕ್ಕೆ ಚ್ಯುತಿ ಬರದಂತೆ ಕೆಲಸ ಮಾಡುತ್ತೇನೆ. ಪಕ್ಷದೊಳಗೆ ಏನೇ ಅಸಮಾಧಾನ ಇದ್ದರೂ ಅಸಮಾಧಾನವಿದ್ದರೂ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮರ್ಥ ವಿರೋಧ ಪಕ್ಷವಾಗಿ ಹೊರಹೊಮ್ಮಲಿದ್ದೇವೆ ಎಂದರು.
ಒಂದು ರಾಜಕೀಯ ಪಕ್ಷವೆಂದ ಮೇಲೆ ಸಣ್ಣಪುಟ್ಟ ವ್ಯತ್ಯಾಸಗಳು ಇದ್ದೇ ಇರುತ್ತವೆ. ಒಬ್ಬರಿಗೆ ಒಂದು ಸ್ಥಾನ ಸಿಕ್ಕಾಗ ಕೈ ತಪ್ಪಿದವರು ಅಸಮಾಧಾನಗೊಳ್ಳುವುದು ಸಹಜ. ಆದರೆ ನಮ್ಮ ವರಿಷ್ಠರ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿ ಇರಲಿದ್ದಾರೆ ಎಂದು ಹೇಳಿದರು.
7 ಪ್ರತಿಕ್ರಿಯೆಗಳು
скорая наркологическая москва скорая наркологическая москва .
наркологическая скорая бесплатная наркологическая скорая бесплатная .
топ бизнес идей biznes-idei12.ru .
идеи малого бизнеса идеи малого бизнеса .
Вывести из запоя http://www.fizioterapijakeskic.com/ .
интересный бизнес https://biznes-idei13.ru .
Закодировать от алкоголя в Алматы Закодировать от алкоголя в Алматы .