ನವ ದೆಹಲಿ. – ದೆಹಲಿಯ ಪ್ಲಾಸ್ಟಿಕ್ ದೊರೆ ಎಂದೇ ಖ್ಯಾತರಾಗಿರುವ ಸಿರಿವಂತ ಉದ್ಯಮಿ ಬನ್ವರ್ ಲಾಲ್ ರಘುನಾಥ್ ದೋಶಿ ತಮ್ಮ ಎಲ್ಲಾ ಆಸ್ತಿಯನ್ನು ಧಾರೆಯೆರದು ಸನ್ಯಾಸತ್ವ ಸ್ವೀಕರಿಸಿದ್ದಾರೆ
ರಾಜಸ್ಥಾನ ಮೂಲದ ಉದ್ಯಮಿ ಬನ್ವರ್ ಲಾಲ್ ರಘುನಾಥ್ ದೋಶಿ ಜವಳಿ ವ್ಯಾಪಾರಿಯಾದ ತಮ್ಮ ತಂದೆಯವರಿಂದ ಮೂವತ್ತು ಸಾವಿರ ರೂಪಾಯಿ ಪಡೆದು ದೆಹಲಿಗೆ ಬಂದವರು ಯಶಸ್ವಿ ಉದ್ಯಮವನ್ನು ಕಟ್ಟಿ ಬೆಳೆಸುವ ಮೂಲಕ ದೆಹಲಿಯ ಪ್ಲಾಸ್ಟಿಕ್ ದೊರೆ ಎಂದೇ ಖ್ಯಾತ ನಾಮರಾದರು.
DR International ಎಂಬ ವಾಣಿಜ್ಯ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ದೋಷಿ ಭಾರತದ ಅಗ್ರಮಾನ್ಯ ಸಿರಿವಂತರ ಪಟ್ಟಿಯಲ್ಲಿ ಸೇರ್ಪಡೆಯಾದರು.
ಅತ್ಯಂತ ಸಣ್ಣ ವಯಸ್ಸಿನಲ್ಲಿ ಯಶಸ್ವಿ ಮೆ ಉದ್ಯಮಿ ಎಂಬ ಹೆಸರು ಗಳಿಸಿದ ಇವರು ಕಳೆದ 2015ರಲ್ಲಿ ಧಾರ್ಮಿಕ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಂಡು ತಾವು ಗಳಿಸಿದ ಸಂಪತ್ತನ್ನು ದಾನ ಮಾಡುವ ಮೂಲಕ ಅಚ್ಚರಿ ಮೂಡಿಸಿದರು.
ಜೈನ ಧರ್ಮದ ಪ್ರವಚನ ಸಭೆಗಳಿಗೆ ನಿರಂತರವಾಗಿ ಹಾಜರಾಗುತ್ತಿದ್ದ ಇವರು ಸುರೇಶ್ವರ್ ಜಿ ಮಹಾರಾಜ್ ಅವರ ಪರಮ ಭಕ್ತರಾದರು ಇವರ ಪ್ರವಚನ ಸಭೆಗಳು ಎಲ್ಲಿಯ ನಡೆದರೂ ಅಲ್ಲಿಗೆ ತಪ್ಪದೆ ಹಾಜರಾಗುತ್ತಿದ್ದ ದೋಷಿ ಕ್ರಮೇಣ ಸನ್ಯಾಸತ್ವದತ್ತ ಒಲವು ಬೆಳೆಸಿಕೊಂಡರುಈಗ ತಾವು ಸನ್ಯಾಸಿಯಾಗುವುದಾಗಿ ಘೋಷಿಸಿದ್ದು ಇಲ್ಲಿವರೆಗೆ ತಾವು ಸಂಪಾದನೆ ಮಾಡಿದ್ದ 600 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನೆಲ್ಲ ದಾನ ಮಾಡಿದ್ದಾರೆ.
ಇವರ ಸನ್ಯಾಸತ್ವ ಸ್ವೀಕಾರ ಸಮಾರಂಭ ಗುಜರಾತ್‌ನ ಅಹ್ಮದಾಬಾದ್ ನಲ್ಲಿ ನಡೆಯುತ್ತಿದ್ದು ಸುಮಾರು ಮೂರು ವರೆ ಲಕ್ಷ ಜೈನ ಧರ್ಮದ ಅನುಯಾಯಿಗಳು, ಸನ್ಯಾಸಿಗಳು ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಂದಿರುವವರಿಗೆ ಆದಿತ್ಯ ನೀಡಲು ಒಂದುವರೆ ಲಕ್ಷ ಸ್ವಯಂಸೇವಕರನ್ನು ನೇಮಿಸಲಾಗಿದೆ.
ಬನ್ವಾರ ಲಾಲ್ ಅರ್ಜುನ ದೋಷಿ ಅವರ ಸನ್ಯಾಸತ್ವ ಸ್ವೀಕಾರ ಸಮಾರಂಭ ಅತ್ಯಂತ ಅದ್ದೂರಿಯಿಂದ ನಡೆಯುತ್ತಿದ್ದು ಎಲ್ಲ ದಾಖಲೆಗಳನ್ನು ಮುರಿಯಲಿದೆ ಎಂದು ಹೇಳಲಾಗುತ್ತಿದೆ.ಮೂರೂವರೆ ಲಕ್ಷ ಜೈನ ಧರ್ಮೀಯರು ಮೂರು ದಿನ ತಂಗಲು ವ್ಯವಸ್ಥೆ ಮಾಡಲಾಗಿದೆ ಅವರಿಗೆ ಊಟೋಪಚಾರದ ಜೊತೆಗೆ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲು ಎಲ್ಲಾ ವ್ಯವಸ್ಥೆ ಮಾಡಲಾಗಿದೆ