ಬೆಂಗಳೂರು,ಜು.2-ಚನ್ನಪಟ್ಟಣ, ರಾಮನಗರದಲ್ಲಿ ಅಬಕಾರಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ 50 ಲಕ್ಷ ಮೌಲ್ಯದ 900 ಗ್ರಾಂ ಅಫೀಮನ್ನು ವಶಪಡಿಸಿಕೊಂಡಿದ್ದಾರೆ.
ಅಕ್ರಮವಾಗಿ ಅಫೀಮು ಸಾಗಿಸುತ್ತಿದ್ದ ಖಚಿತವಾದ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆ ಕೈಗೊಂಡ ಬೆಂಗಳೂರು ದಕ್ಷಿಣದ ಜಂಟಿ ಆಯುಕ್ತ ನಾಗೇಶ್ ಮತ್ತು ಅಬಕಾರಿ ಅಧೀಕ್ಷಕ ವಿವೇಕ್ ನೇತೃತ್ವದ ತಂಡವು ಇಬ್ಬರು ಆರೋಪಿಗಳನ್ನು ಬಂಧಿಸಿದೆ. ಬಂಧಿತ ಆರೋಪಿಗಳು ಸಾಗಿಸುತ್ತಿದ್ದ 50 ಲಕ್ಷ ಮೌಲ್ಯದ 900 ಗ್ರಾಂ ಅಫೀಮನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ.
Previous Articleಚಿನ್ನ ಬಲು ದುಬಾರಿ: 10 ಗ್ರಾಮ್‌ಗೆ 1,310 ರೂ. ಹೆಚ್ಚಳ
Next Article ಆನೆ ದಾಳಿಗೆ ರೈತ ಬಲಿ