ಗುವಾಹಟಿ: ಮದುವೆಯಾದ ಬಳಿಕ ಪತಿ ಮತ್ತು ಪತ್ನಿ ಮಧ್ಯೆ ಭಿನ್ನಾಭಿಪ್ರಾಯ ಮೂಡಬಾರದು ಎಂಬ ಕಾರಣಕ್ಕೆ ಮದುವೆಗಿಂತ ಮೊದಲು ಕೆಲವು ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ. ಇದನ್ನು ಮದುವೆಯ ಬಳಿಕ ಇಬ್ಬರೂ ಪಾಲಿಸಬೇಕಾಗಿದೆ. ಇದಕ್ಕೆ ಬದ್ದವಾಗಿರಬೇಕಾಗಿದೆ.
ಅಸ್ಸಾಂನಲ್ಲಿ ನಡೆದ ಮದುವೆ ವೇಳೆ ವರ ಮಿಂಟು ಮತ್ತು ವಧು ಶಾಂತಿ ಈ ರೀತಿಯ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಜಿಮ್ ಗೆ ಹೋಗುವುದರಿಂದ ಹಿಡಿದು ಶಾಪಿಂಗ್ ವೇಳೆ ಅನುಸರಿಸಬೇಕಾದ ಕ್ರಮಗಳನ್ನು ಈ ಕರಾರು ಪತ್ರ ಒಳಗೊಂಡಿದೆ.
ಇದರಲ್ಲಿ ವರ ಮಿಂಟು ವಿಶೇಷವಾಗಿ ಒಂದು ಅಂಶ ಪ್ರಸ್ತಾಪಿಸಿದ್ದಾನೆ. ವಧು ಪ್ರತಿದಿನ ಸೀರೆ ಉಡಬೇಕು ಎಂದು ಹೇಳಿದ್ದಾನೆ. ಇನ್ ಸ್ಟಾಗ್ರಾಂ ನಲ್ಲಿ ಮದುವೆ ಒಪ್ಪಂದದ ಅಂಶಗಳು ಹರಿದಾಡುತ್ತಿದ್ದು, ನೆಟ್ಟಿಗರ ಕಮೆಂಟ್ ಸುರಿಮಳೆಯೇ ಸುರಿದಿದೆ.