ಬೆಂಗಳೂರು : ಮೊಸರು, ಮಂಡಕ್ಕಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯೇರಿಕೆಗೆ ಕಾಂಗ್ರೆಸ್ ನಾಯಕರು ಕೆಂಡಾಮಂಡಲರಾಗಿದ್ದಾರೆ. ಜಂಟಿ ಸುದ್ದಿಗೋಷ್ಠಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಮಂತ್ರಿಗಳಾದ ಜಿ.ಪರಮೇಶ್ವರ್, ದಿನೇಶ್ ಗುಂಡೂರಾವ್, ಯು.ಟಿ ಖಾದರ್ ಸೇರಿದಂತೆ ಹಲವರು ಬೆಲೆ ಏರಿಕೆಗೆ ತೀವ್ರ ಆಕ್ರೋಶ ವ್ಯಕ್ತ ಪಡಿಸಿದರು.
ಅಗತ್ಯ ವಸ್ತುಗಳ ಮೇಲೆ ಜಿಎಸ್‌ಟಿ ಹೆಚ್ಚಳ ಮಾಡಿರುವುದು ಪ್ರಧಾನಿ ನರೇಂದ್ರ ಮೋದಿ ಅವರು ಭರವಸೆ ನೀಡಿದ್ದ ಅಚ್ಛೇ ದಿನಗಳ ಭಾಗವೇ? ಎಂದು ಪ್ರಶ್ನಿಸಿದರು.
ಮೊಸರು, ಮಂಡಕ್ಕಿ ಸೇರಿದಂತೆ ಬಡವರು, ಮಧ್ಯಮ ವರ್ಗದ ಜನರು ಬಳಸುವ ವಸ್ತುಗಳ ಮೇಲೆ ಜಿಎಸ್‌ಟಿ ಹೇರುವ ಅಗತ್ಯ ಏನಿತ್ತು? ಶ್ರೀಮಂತರ ಮೇಲಿನ ತೆರಿಗೆ ಕಡಿಮೆ ಮಾಡಿ ಬಡವರ ಮೇಲೆ ತೆರಿಗೆ ಹೆಚ್ಚಿಸುವುದು ಯಾವ ನ್ಯಾಯ’ ಎಂದು ಕೇಳಿದರು.
ತೆರಿಗೆ ಹೆಚ್ಚಿಸುವ ಮೂಲಕ ಬಡವರ ಕತ್ತು ಹಿಸುಕುವ ಕೆಲಸವನ್ನು ಕೇಂದ್ರದ ಬಿಜೆಪಿ ಸರ್ಕಾರ ಮಾಡುತ್ತಿದೆ. ರಾಜ್ಯದ ಬಿಜೆಪಿ ಸರ್ಕಾರ ಅದಕ್ಕೆ ಸಹಕಾರ ನೀಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
‘ಅಚ್ಛೇ ದಿನ ತರುತ್ತೇನೆ ಎಂಬ ಭರವಸೆ ನೀಡಿ ಮೋದಿ ಅಧಿಕಾರಕ್ಕೆ ಬಂದಿದ್ದರು. ಎಲ್ಲಿ? ಯಾರಿಗೆ ಅಚ್ಛೇ ದಿನ ಬಂದಿದೆ ಎಂಬುದನ್ನು ತೋರಿಸಲಿ’ ಎಂದು ಸವಾಲು ಹಾಕಿದರು.
ಇದೀಗ ಮೊಸಲು, ಮಜ್ಜಿಗೆ, ಲಸ್ಸಿ, ಪನ್ನೀರು ದರ ಹೆಚ್ಚಳವಾಗಿದೆ. ಅಕ್ಕಿ, ಗೋದಿ, ಬಾರ್ಲಿ ಮೇಲೆ ಶೇ.5 ರಷ್ಟು ದರ ಹೆಚ್ಚಿದೆ. ಸೋಲಾರ್, ಎಲ್ಇಡಿ ಬಲ್ಬ್ ಗಳಿಗೆಲ್ಲಾ ಜಿಎಸ್ಟಿ ಹಾಕಲಾಗಿದೆ ಬಡವರು, ಮಧ್ಯಮವರ್ಗದವರು ಬಳಸುವ ವಸ್ತುಗಳು, ಹೆಚ್ಚಿಸಲಾಗಿದೆ. ರೈತರು, ಕೂಲಿ ಕಾರ್ಮಿಕರ ಮಾತ್ರ ಆದಾಯ ಹೆಚ್ಚಾಗಿಲ್ಲ ಎಂದು ವಿಷಾದಿಸಿದರು.
ದೇಶಕ್ಕೆ ಒಳ್ಳೆಯ ದಿನ ಬರುತ್ತೆ ಅಂತಾ ಮೋದಿ ಹೇಳಿ ಅಧಿಕಾರಕ್ಕೆ ಬಂದ ಮೋದಿ ಎಂಟು ವರ್ಷಗಳನ್ನ ಪೂರೈಸಿದ್ದಾರೆ. ಸಂಭ್ರಮಾಚರಣೆ ದೇಶದೆಲ್ಲೇಡೆ ಮಾಡಿದ್ದಾರೆ.
ಕರ್ನಾಟಕಕ್ಕೆ ವಿವಿಧ ಯೋಜನೆಗಳಿಗೆ 129766 ಕೋಟಿ ಹಣ ಕೊಟ್ಟಿದ್ದೇವೆ ಅಂತಾ ಜಾಹೀರಾತು ಕೊಟ್ಟಿದ್ದಾರೆ. ರಾಜ್ಯದಿಂದಲೇ ಒಟ್ಟು 19 ಲಕ್ಷ ಕೋಟಿ ಸಂಗ್ರಹವಾಗಿದೆ. ಇಡೀ ದೇಶದಲ್ಲಿ ತೆರಿಗೆ ಕೊಡೋದ್ರಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿದೆ. ಆದರೂ ಜನಪರ ವಾಗಿ ಸರ್ಕಾರವಿಲ್ಲ ಎಂದು ಆಪಾದಿಸಿದರು.
Previous ArticlePSI ಹಗರಣದಲ್ಲಿ ಇನ್ನೂ ದೊಡ್ಡ ದೊಡ್ಡ ತಿಮಿಂಗಿಲ ಇದ್ದಾವೆ..!
Next Article ಬಿಎಸ್ ವೈ ರಾಜ್ಯ ಪ್ರವಾಸಕ್ಕೆ ಅಸ್ತು.. ಆದರೂ..!