ಬೆಂಗಳೂರು, ಸೆ.5-ನಗರದಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಎರಡನೇ ಬಾರಿ ಪ್ರವಾಹ ಉಂಟಾಗಿದ್ದು, ಹೊರವರ್ತುಲ ರಸ್ತೆಯಲ್ಲಿ ವಾಹನದಲ್ಲಿ ಹೋಗುವಾರ ಎಚ್ಚರಿಕೆ ವಹಿಸುವಂತೆ ಸಂಚಾರ ಪೊಲೀಸರು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.
ಹೊರವರ್ತುಲ ರಸ್ತೆಯಲ್ಲಿ ಬೆಳ್ಳಂದೂರಿನಿಂದ ಸಿಲ್ಕ್ ಬೋರ್ಡ್ ವರೆಗೆ ಅಲ್ಲಿಂದ ಕೆಆರ್ ಪುರಂ ವರೆಗೆ ಅಗತ್ಯವಿದ್ದರೆ ಮಾತ್ರ ವಾಹನ ಸಂಚಾರ ನಡೆಸಲು ಮನವಿ ಮಾಡಿದ್ದಾರೆ.
ಹೊರವರ್ತುಲ ರಸ್ತೆಯಲ್ಲಿ ಬೆಳ್ಳಂದೂರಿನಿಂದ ಸಿಲ್ಕ್ ಬೋರ್ಡ್, ಕೆಆರ್ ಪುರಂ ವರೆಗೆ ಅಪಾರ ಪ್ರಮಾಣದ ನೀರು ಮಳೆಯಿಂದ ತುಂಬಿದ್ದು ದ್ವಿಚಕ್ರ ವಾಹನ ಸವಾರರು ಸಂಚಾರ ಕಡಿಮೆ ಮಾಡಲು ಮನವಿ ಮಾಡಲಾಗಿದೆ ಎಂದು ಡಿಸಿಪಿ ಕಲಾ ಕೃಷ್ಣಸ್ವಾಮಿ ಅವರು ತಿಳಿಸಿದ್ದಾರೆ.
ಮಳೆ ಹೆಚ್ಚಾದ ವೇಳೆ ಹೊರವರ್ತುಲ ರಸ್ತೆಯನ್ನು ಬಿಟ್ಟು ಪರ್ಯಾಯ ರಸ್ತೆಯಲ್ಲಿ ಸಂಚರಿಸಬೇಕು ರಾತ್ರಿ ವೇಳೆ ಮಳೆ ಹೆಚ್ಚಾದರೆ ಯಾವುದೇ ಕಾರಣಕ್ಕೂ ಹೊರವರ್ತುಲ ರಸ್ತೆಗೆ ಬರದಂತೆ ಮನವಿ ಮಾಡಿಕೊಳ್ಳಲಾಗಿದೆ ಎಂದರು.
ಹೊರ ವರ್ತುಲ ರಸ್ತೆ ಮತ್ತೊಮ್ಮೆ ನಿನ್ನೆ ನೀರಿನಲ್ಲಿ ಮುಳುಗಿದ್ದು, ಹಲವು ಪ್ರದೇಶಗಳಲ್ಲಿ ಮೊಣಕಾಲಿನವರೆಗೂ ನೀರು ನಿಂತಿದೆ ಇದರಿಂದಾಗಿ ದ್ವಿಚಕ್ರ ವಾಹನಗಳು ನೀರು ಕಡಿಮೆಯಾಗುವವರೆಗೆ ರಸ್ತೆಗೆ ಇಳಿಯಬಾರದು ಎಂದರು.
ಹವಾಮಾನ ಇಲಾಖೆಯ ಅಂಕಿಅಂಶಗಳ ಪ್ರಕಾರ ಸಂಪಂಗಿರಾಮನಗರ ಪ್ರದೇಶದಲ್ಲಿ ನಿನ್ನೆ ರಾತ್ರಿ 148 ಮಿಮೀ ಮಳೆಯಾಗಿದೆ. ನಗರದ ಮಾರತ್ತಹಳ್ಳಿ, ದೊಡ್ಡನೆಕ್ಕುಂದಿ, ವರ್ತೂರು, ಎಚ್‌ಎಎಲ್ ರಸ್ತೆಯಲ್ಲಿ ಭಾನುವಾರ ರಾತ್ರಿ 100ಮಿ.ಮೀ.ಗೂ ಹೆಚ್ಚು ಮಳೆಯಾಗಿದೆ.
Previous Articleರಿಷಿ ಸುನಕ್ ಬ್ರಿಟನ್ ಪ್ರಧಾನಿಯಾಗಲಿಲ್ಲ
Next Article Bangalore drowned by the commission