ಟೋಕಿಯೋ – ದುಷ್ಕರ್ಮಿಯ ಗುಂಡಿಗೆ ಬಲಿಯಾದ ಜಪಾನ್‌ನ ಮಾಜಿ ಪ್ರಧಾನಿ ಶಿಂಜೊ ಅಬೆ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಸುದೀರ್ಘ ಅವಧಿಯ ನಂತರ ಸೆಪ್ಟೆಂಬರ್ 27 ರಂದು ನಡೆಯಲಿದೆ. ಸಕಲಬಸರ್ಕಾರಿ ಗೌರವದೊಂದಿಗೆ ಮಾಜಿ ಪ್ರಧಾನಿ ಅಂತ್ಯಸಂಸ್ಕಾರಕ್ಕೆ ತೀರ್ಮಾನಿಸಲಾಗಿದ್ದು ಇದೀಗ ಅದು ದೊಡ್ಡ ವಿವಾದಕ್ಕೆ ಕಾರಣವಾಗಿದೆ.
ಅಂತ್ಯಸಂಸ್ಕಾರದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಶೋಕಾಚರಣೆಯನ್ನು ಆಚರಿಸಲು ಸಾರ್ವಜನಿಕರೂ ನಿರಾಕರಿಸಿದ್ದಾರೆ.
ಸರ್ಕಾರಿ ಅಂತ್ಯಕ್ರಿಯೆ ವಿರೋಧಿಸಿ ಟೋಕಿಯೋದ ಪ್ರಧಾನಿ ಕಚೇರಿ ಬಳಿ ವೃದ್ಧರೊಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಪ್ರಯತ್ನ ನಡೆಸಿದೆ
ಜಪಾನಿನಲ್ಲಿ ಸರ್ಕಾರೀ ಗೌರವಗಳೊಂದಿಗೆ ಮೃತ ಗಣ್ಯರ ಅಂತ್ಯ ಸಂಸ್ಕಾರ ನಡೆಸುವುದು ಬಹಳ ಅಪರೂಪ. ಶಿಂಜೋ ಅಬೆಯವರ ಅಂತಿಮ ವಿಧಿ ವಿಧಾನಗಳು ಹಾಗೆ ನಡೆಸಲು ನಿರ್ಧರಿಸಿದ್ದು ವಿವಾದಕ್ಕೀಡಾಗಿದೆ. ಜಪಾನಿನಲ್ಲಿ ನಡೆಸಲಾದ ಜನಮತವೊಂದರ ಪ್ರಕಾರ ಅರ್ಧಕ್ಕಿಂತ ಹೆಚ್ಚು ಜನ ಸಕಲ ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸುವುದನ್ನು ವಿರೋಧಿಸಿದ್ದಾರೆ.
ಶಿಂಜೋ ಅಬೆ ಅವರ ಅಂತ್ಯಕ್ರಿಯೆಗೆ ಸುಮಾರು 910 ಕೋಟಿ ರೂಪಾಯಿ ವೆಚ್ಚವಾಗಲಿದೆ.ಇದು ಅಲ್ಲಿನ ನಾಗರಿಕರ ಕಣ್ಣು ಕೆಂಪಗಾಗಿಸಿದೆ. ಟೋಕಿಯೊ ಕೋರ್ಟ್‌ನಲ್ಲಿ ರಾಜ್ಯ ಗೌರವವನ್ನು ನಿಷೇಧಿಸುವಂತೆ ಒತ್ತಾಯಿಸಿ ಅರ್ಜಿ ಕೂಡ ಬಂದಿದೆ.
ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರು ಸೆಪ್ಟೆಂಬರ್ ಸಂಸತ್ತಿನ ಚರ್ಚೆಯಲ್ಲಿ ಶಿಂಜೋ ಅಬೆ ಅಂತ್ಯ ಸಂಸ್ಕಾರಕ್ಕೆ 910 ಕೋಟಿ ರೂಪಾಯಿಯನ್ನು ಯಾವ ಕಾರಣಕ್ಕಾಗಿ ಖರ್ಚು ಮಾಡಲಾಗುತ್ತಿದೆ ಎನ್ನುವುದನ್ನು ವಿವರಿಸಿದ್ದಾರೆ. ಇದು ಇತ್ತೀಚೆಗೆ ನಡೆದ ಇಂಗ್ಲೆಂಡ್ ರಾಣಿಯ ಅಂತ್ಯ ಸಂಸ್ಕಾರಕ್ಕೆ ಮಾಡಿದ ವೆಚ್ಚಕ್ಕಿಂತ ಅಧಿಕ ಎನ್ನಲಾಗಿದೆ.
ಶಿಂಜೋ ಅಬೆ ಅವರ ಅಂತ್ಯ ಸಂಸ್ಕಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರೀಸ್ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳ ಗಣ್ಯರು ಭಾಗವಹಿಸುತ್ತಿರುವ ಹಿನ್ನೆಲೆಯಲ್ಲಿ ಭದ್ರತೆ ಸೇರಿದಂತೆ ಹಲವಾರು ಕಾರಣಗಳಿಂದ ಇಷ್ಟು ವೆಚ್ಚ ಮಾಡಬೇಕಾಗಿದೆ ಕಾರ್ಯಕ್ರಮದಲ್ಲಿ190 ದೇಶಗಳ 6,400 ಮಂದಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.ಎಂದು ಪ್ರಧಾನಿ ಕಿಶಿಡಾ ವಿವರಿಸಿದ್ದಾರೆ.
ಕಳೆದ 2011ರಲ್ಲಿ ಜಪಾನ್‌ಗೆ ಸುನಾಮಿ ಅಪ್ಪಳಿಸಿತ್ತು. ಈ ವೇಳೆ ಶಿಂಜೋ ಅಬೆ ಇಡೀ ದೇಶದ ಆರ್ಥಿಕತೆಗೆ ಒಂಚೂರು ಹಾನಿಯಾಗದಂತೆ ಕಾಪಾಡಿದ್ದರು. ಈ ಸಲುವಾಗಿ ಅವರ ಅಂತ್ಯ ಸಂಸ್ಕಾರವನ್ನು ಸರ್ಕಾರಿ ವಿಧಿ ವಿಧಾನದೊಂದಿಗೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ ಈ ವಿವರಣೆ ಒಪ್ಪಲು ನಾಗರಿಕರು ತಯಾರಿಲ್ಲ.ದೇಶ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ.ಟೋಕಿಯೋ ಒಲಂಪಿಕ್ ಗೆ ಸಾಕಷ್ಟು ವೆಚ್ಚ ಮಾಡಬೇಕಾದ ಅನಿವಾರ್ಯತೆ ಇದೆ ಇಂತಹ ಸಮಯದಲ್ಲಿ ಮಾಜಿ ಪ್ರಧಾನಿ ಅಂತ್ಯ ಸಂಸ್ಕಾರಕ್ಕೆ ಇಷ್ಟೊಂದು ವೆಚ್ಚ ಮಾಡುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತವಾಗಿದೆ.
ಜುಲೈ 8 ರಂದು ಅಬೆ ಹತ್ಯೆಯಾದ ನಂತರ ಕುಟುಂಬವು ಜುಲೈ 15 ರಂದು ಅಂತ್ಯಕ್ರಿಯೆಗಳನ್ನು ಮಾಡಲು ನಿರ್ಧರಿಸಲಾಗಿತ್ತು. ಆದರೆ, ಸರ್ಕಾರಿ ಅಂತ್ಯಕ್ರಿಯೆಯ ಕಾರಣ ಇದು ವಿಳಂಬವಾಗಿದೆ.