ಬೆಂಗಳೂರು: ಕಳೆದೊಂದು ವಾರದಿಂದ ರಾಜ್ಯದಲ್ಲಿ ವ್ಯಾಪಕ ಚರ್ಚೆಯಲ್ಲಿರುವ ಸುದ್ದಿ ಸ್ಯಾಂಟ್ರೋ ರವಿ ಕುರಿತಾದದ್ದು,ರವಿ ಅವರ ಜೊತೆ ಒಡನಾಟ ಹೊಂದಿದ್ದ,ಇವರೊಂದಿಗೆ ನಂಟಿತ್ತು,ಅಲ್ಲಿ ಹಣಕಾಸು ವ್ಯವಹಾರವಿತ್ತು..ಹೀಗೆ ರಾಜ್ಯದ ಪ್ರಭಾವಿ ರಾಜಕಾರಣಿಗಳು, ಹಿರಿಯ ಅಧಿಕಾರಿಗಳ ಜೊತೆ ಅವನ ಹೆಸರು ತಳಕು ಹಾಕಿಕೊಳ್ಳುತ್ತಿದೆ.
ಮೈಸೂರಿನ ಪ್ರಕರಣವೊಂದರಲ್ಲಿ ಪೊಲೀಸರಿಗೆ ಬೇಕಾಗಿರುವ ಈ ವ್ಯಕ್ತಿ ಇಲ್ಲಿಯವರೆಗೆ ಸಿಕ್ಕಿಲ್ಲ.ತಕ್ಷಣಕ್ಕೆ ಸಿಗುವುದೂ ಇಲ್ಲ ಎನ್ನುತ್ತವೆ ಉನ್ನತ ಮೂಲಗಳು.
ಯಾಕೆ ಗೊತ್ತಾ ರವಿ ಹಲವರೊಂದಿಗೆ ಒಡನಾಟ ಹೊಂದಿದ್ದು ಅನೇಕರ ರಹಸ್ಯಗಳು, ಮಹತ್ವದ ದಾಖಲೆಗಳು ಈತನ ಬಳಿ ಇವೆ.ಅವೆಲ್ಲವನ್ನೂ ಆತ ಒಂದು ಲ್ಯಾಪ್‌ಟಾಪ್ ನಲ್ಲಿ ಭದ್ರವಾಗಿರಿಸಿದ್ದಾನೆ. ಈ ಲ್ಯಾಪ್‌ಟಾಪ್ ಯಾರಿಗಾದರೂ ಸಿಕ್ಕಿ ಅದರಲ್ಲಿರುವ ಮಾಹಿತಿ ಹೊರಬಿದ್ದರೆ ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಅಲ್ಲೋಲ ಕಲ್ಲೋಲವಾಗಲಿದೆ ಎನ್ನಲಾಗುತ್ತಿದೆ.ಹೀಗಾಗಿ ಲ್ಯಾಪ್‌ಟಾಪ್ ಸುರಕ್ಷಿತವಾಗುವವರೆಗೆ ಸ್ಯಾಂಟ್ರೋ ರವಿ ಪೊಲೀಸರಿಗೆ ಸಿಗೋದು ಡೌಟು ಎನ್ನಲಾಗುತ್ತಿದೆ.
ಅಂದಹಾಗೆ ಈ ಲ್ಯಾಪ್‌ಟಾಪ್ ಎಲ್ಲೆದೆ ಗೊತ್ತಾ ಅದನ್ನು ಹೇಳ್ತೀವಿ ಆದರೆ ಅದಕ್ಕೂ ಮೊದಲು ನಮ್ಮ ಚಾನಲ್ ಸಬ್ ಸ್ಕ್ರೈಬ್ ಮಾಡಿ ಷೇರ್ ಮಾಡಿ..
ಸ್ಯಾಂಟ್ರೋ ರವಿ ಸಂಗ್ರಹಿಸಿರುವ ಸ್ಪೋಟಕ ರಹಸ್ಯಗಳ ಲ್ಯಾಪ್‌ಟಾಪ್ ಆತನ ಬಳಿಯೂ ಇಲ್ಲ.ಅದಿರುವುದು ಆತನ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಆತನ ಎರಡನೇ ಪತ್ನಿಯ ಬಳಿ
ಹೀಗಾಗಿ
ಸ್ಯಾಂಟ್ರೋ ರವಿ ತನ್ನ ಎರಡನೇ ಪತ್ನಿಯ ಬಳಿ ಇರುವ ಲ್ಯಾಪ್‌ಟಾಪ್‌ನಲ್ಲಿ ಪಡೆದುಕೊಳ್ಳಲು ಸ್ಯಾಂಟ್ರೋ ರವಿ ಇನ್ನಿಲ್ಲದ ಪ್ರಯತ್ನ ನಡೆಸಿದ್ದಾನೆ.
ಈ ವಿವರ ಗೊತ್ತಾಗಬೇಕಾದರೆ ಸ್ವಲ್ಪ ಹಳೆಯ ಘಟನೆಯನ್ನ ನೋಡಬೇಕಿದೆ
ಸ್ಯಾಂಟ್ರೋ ರವಿಯ ಸ್ನೇಹಿತ ಮತ್ತು ಆತನ ಎರಡನೇ ಪತ್ನಿ ಸಂಬಂಧಿಕರು.ಇವರಿಬ್ಬರ ನಡುವೆ ಹಣಕಾಸು ವ್ಯವಹಾರವಿತ್ತು.ಈ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಕಳೆದ ನವೆಂಬರ್ 23ರಂದು ಬೆಂಗಳೂರಿನ ಕಾಟನ್‌ಪೇಟೆ ಠಾಣೆಯಲ್ಲಿ ದೂರು ದಾಖಲಾಗಿತ್ತು.ಗಮನಿಸಬೇಕಾದ ಸಂಗತಿ ಏನಂದರೆ ಇಲ್ಲಿಬರವಿ ತನ್ನ ಎರಡನೇ ಪತ್ನಿಯ ವಿರುದ್ಧವೇ ದೂರು ನೀಡಿದ್ದಾನೆ. ಅದಕ್ಕೆ ಲ್ಯಾಪ್‌ಟಾಪ್ ಪ್ರಮುಖ ಕಾರಣ ಎಂದು ಹೇಳಲಾಗಿದೆ. ಅದರಲ್ಲಿ ಹಲವು ವಿಡಿಯೋಗಳಿವೆ. ಕೆಲವರೊಂದಿಗೆ ಮಾತನಾಡಿರುವ ಆಡಿಯೋ ಸಂಭಾಷಣೆಗಳು ಲ್ಯಾಪ್‌ಟಾಪ್‌ನಲ್ಲಿ ಸಂಗ್ರಹವಾಗಿವೆ. ಜೊತೆ ರವಿಯ ಸಂಪರ್ಕಗಳು, ದಂಧೆಗಳ ಬಗ್ಗೆ ಕುರಿತು ಮಾಹಿತಿ ಇವೆ ಎನ್ನಲಾಗಿದೆ. ಈಗಾಗಲೇ ವೈರಲ್ ಆಗಿರುವ ಫೋಟೋಗಳು ಇದೇ ಲ್ಯಾಪ್ ಟಾಪ್ ನಲ್ಲಿ ಸಿಕ್ಕಿವೆ ಎನ್ನಲಾಗಿದೆ
ಈ ದೂರಿನ ಹಿನ್ನೆಲೆಯಲ್ಲಿ ರವಿಯ ಎರಡನೇ ಪತ್ನಿಯನ್ನು ಪೊಲೀಸರು ಬಂಧಿಸಿದ್ದರು.ಬಳಿಕ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿ ತನ್ನೆಲ್ಲಾ ಸಂಕಷ್ಟವನ್ನು ಒಡನಾಡಿಯ ಬಳಿ ಹೇಳಿಕೊಳ್ಳುತ್ತಾರೆ. ಬಳಿಕ ಅವರು ಮೈಸೂರಿನಲ್ಲಿ ಒಡನಾಡಿ ಸಂಘಟನೆ ನೆರವು ಪಡೆದು ರವಿ ವಿರುದ್ಧ ದೂರು ನೀಡಿದ್ದು, ಪ್ರಕರಣ ದಾಖಲು ಮಾಡಿದ್ದಾರೆ. ಈಗ ಸಂಕಷ್ಟಕ್ಕೆ ಸಿಲುಕಿರುವ ರವಿ ಲ್ಯಾಪ್‌ಟಾಪ್ ಗಾಗಿ ಹುಡುಕಾಟ ನಡೆಸಿದ್ದು.ಆಯಕಟ್ಟಿನಲ್ಲಿರುವ ಕೆಲವರು ಆತನಿಗೆ ಬೆಂಗಾವಲಾಗಿದ್ದಾರೆ ಎನ್ನಲಾಗಿದೆ ಹೀಗಾಗಿ ಲ್ಯಾಪ್‌ಟಾಪ್ ಸಿಗೋವರೆಗೆ ಸ್ಯಾಂಟ್ರೋ ರವಿ ಪೊಲೀಸರಿಗೆ ಸಿಗೋಲ್ಲಾ ಎನ್ನುತ್ತವೆ ಉನ್ನತ ಮೂಲಗಳು..