Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ದಂಡ ಪಾವತಿಗೆ ಮುಗಿಬಿದ್ದ ವಾಹನ ಸವಾರರು
    ಬೆಂಗಳೂರು

    ದಂಡ ಪಾವತಿಗೆ ಮುಗಿಬಿದ್ದ ವಾಹನ ಸವಾರರು

    vartha chakraBy vartha chakraಫೆಬ್ರವರಿ 4, 2023Updated:ಮಾರ್ಚ್ 20, 20231 ಟಿಪ್ಪಣಿ2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಬೆಂಗಳೂರು,ಫೆ.4-

    ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಬಾಕಿ ದಂಡದ ಮೊತ್ತ ಪಾವತಿಗೆ ಶೇ.50ರಷ್ಟು ರಿಯಾಯಿತಿ ನೀಡಿರುವ ಹಿನ್ನೆಲೆಯಲ್ಲಿ ದಂಡ ಪಾವತಿಗೆ ನಗರದಲ್ಲಿ ಸಾರ್ವಜನಿಕರು ಮುಗಿಬಿದ್ದಿದ್ದಾರೆ. ರಿಯಾಯಿತಿ ಆರಂಭಗೊಂಡ ‌ಮೊದಲ ದಿನವಾದ ನಿನ್ನೆ ಭಾರೀ ಸಂಖ್ಯೆಯಲ್ಲಿ ಸಾರ್ವಜನಿಕರು ನಗರದ ಸಂಚಾರ ಪೊಲೀಸ್‌ ಠಾಣೆಗಳಿಗೆ ತೆರಳಿ ಬಾಕಿ ದಂಡದ ಮೊತ್ತ ಪಾವತಿಸಿದ್ದು, ಮೊದಲ ದಿನವೇ 5.6 ಕೋಟಿ ಸಂಗ್ರಹವಾಗಿದ್ದು, ಅದು 10 ಕೋಟಿ ರೂ ಗಳಿಗಿಂತ ಹೆಚ್ಚಾಗುವ ನಿರೀಕ್ಷೆಯಿದೆ.

    ರಿಯಾಯಿತಿಯ ಪಾವತಿಗೆ ರಾಜ್ಯ ಸರ್ಕಾರ ಫೆ.11ರವರೆಗೆ ಅವಕಾಶ ನೀಡಿದ್ದು, ದಂಡ ಸಂಗ್ರಹವು 30 ಕೋಟಿಗೂ ಮಿಗಿಲಾಗುವ ಸಾಧ್ಯತೆಯಿದೆ. ನಗರದ ಸಂಚಾರ ಪೊಲೀಸ್‌ ಠಾಣೆಗಳು ಮಾತ್ರವಲ್ಲದೆ, ಇನ್ಫಾಂಟ್ರಿ ರಸ್ತೆ (Infantry Road) ಯಲ್ಲಿರುವ ಸಂಚಾರ ನಿರ್ವಹಣಾ ಕೇಂದ್ರ(TMC) ದಲ್ಲಿ ಕೌಂಟರ್‌ ತೆರೆದು ಬಾಕಿ ದಂಡದ ಮೊತ್ತ ಪಾವತಿಗೆ ಅವಕಾಶ ಕಲ್ಪಿಸಲಾಗಿರುವುದನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳತೊಡಗಿರುವುದರಿಂದ ದಂಡ ಪಾವತಿಗೆ ಭಾರಿ ಪ್ರಮಾಣದ ಜನಸಂದಣಿ ಉಂಟಾಗಿದೆ.

    ಇನ್ನು ಕರ್ನಾಟಕ ಒನ್‌ ವೆಬ್‌ಸೈಟ್‌ (Karnataka One Website) ಹಾಗೂ ಪೇಟಿಎಂ ಆ್ಯಪ್‌ (Paytm App) ನಲ್ಲಿ ಬಾಕಿ ದಂಡ ಪಾವತಿಗೆ ಅವಕಾಶ ನೀಡಲಾಗಿದೆ. ಇದರಲ್ಲಿ ವಾಹನ ನೋಂದಣಿ ಸಂಖ್ಯೆ ನಮೂದಿಸಿದರೆ, ಆ ವಾಹನದ ವಿರುದ್ಧ ದಾಖಲಾದ ಸಂಚಾರ ನಿಯಮ ಉಲ್ಲಂಘನೆಯ ಪ್ರಕರಣಗಳ ಸಂಖ್ಯೆ ಹಾಗೂ ರಿಯಾಯಿತಿ ದಂಡದ ಮೊತ್ತ ತೆರೆದುಕೊಳ್ಳಲಿದೆ. ಈ ವೇಳೆ ಆನ್‌ಲೈನ್‌ನಲ್ಲಿ ಸಾರ್ವಜನಿಕರು ಆ ದಂಡದ ಮೊತ್ತವನ್ನು ಪಾವತಿಸಬಹುದಾಗಿದೆ. ಸಂಚಾರ ಪೊಲೀಸ್‌ ಠಾಣೆಗಳು ಹಾಗೂ ಟಿಎಂಸಿ ಕಟ್ಟಡದಲ್ಲಿ ದಂಡ ಪಾವತಿಸುವವರ ಸಂಖ್ಯೆಗಿಂತ ಆನ್‌ಲೈನ್‌ನಲ್ಲಿ ಬಾಕಿ ದಂಡ ಪಾವತಿ ಮಾಡಿದವರ ಸಂಖ್ಯೆ ಹೆಚ್ಚಿತ್ತು.

    ಏಕಕಾಲಕ್ಕೆ ನಿನ್ನೆ ಭಾರೀ ಸಂಖ್ಯೆ ಜನರು ಬೆಂಗಳೂರು ಸಂಚಾರ ಪೊಲೀಸ್‌ ವೆಬ್‌ಸೈಟ್‌ ಮುಖಾಂತರ ಆನ್‌ಲೈನ್‌ನಲ್ಲಿ ಬಾಕಿ ದಂಡ ಪಾವತಿಗೆ ಮುಂದಾದ ಹಿನ್ನೆಲೆಯಲ್ಲಿ ವೆಬ್‌ಸೈಟ್‌ನ ಸರ್ವರ್‌ ಡೌನ್‌ ಆಗಿ ಕೊನೆಗೆ ವೆಬ್‌ ಪೇಜ್‌ ತೆರೆಯದಂತಾಗಿತ್ತು. ಈ ಬಗ್ಗೆ ಹಲವರು ಸಾಮಾಜಿಕ ಜಾಲತಾಣದಲ್ಲಿ ಪೊಲೀಸ್‌ ಇಲಾಖೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಎಚ್ಚೆತ್ತ ಸಂಚಾರ ಪೊಲೀಸರು, ಸರ್ವರ್‌ ದುರಸ್ತಿಗೆ ಕ್ರಮ ಕೈಗೊಂಡರು. ಆದರೂ ಸಂಜೆವರೆಗೂ ವೆಬ್‌ಸೈಟ್‌ನ ಸರ್ವರ್‌ ನಿಧಾನಗತಿಯಲ್ಲಿ ಕಾರ್ಯ ನಿರ್ವಹಿಸಿತು. ಇನ್ನು ಸಾಕಷ್ಟು ಮಂದಿ ಪೆಟಿಎಂ ಆ್ಯಪ್‌ನಲ್ಲಿ ಸಂಚಾರ ನಿಯಮ ಉಲ್ಲಂಘನೆಯ ಬಾಕಿ ದಂಡದ ಮೊತ್ತ ಪಾವತಿಸಿದ್ದು, ಇಂದು ಪಾವತಿಸುವ ಸಾರ್ವಜನಿಕರ ಸಂಖ್ಯೆ ದುಪ್ಪಟ್ಟು ಆಗಿದೆ.

    ಕೆಲವು ವಾಹನಗಳ ವಿರುದ್ಧ 10ರಿಂದ 15 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಬಾಕಿಯಿದ್ದು, ದಂಡದ ಮೊತ್ತವೇ .10 ಸಾವಿರಕ್ಕೂ ಅಧಿಕವಿರುತ್ತದೆ. ಭಾರೀ ಪ್ರಮಾಣದ ದಂಡ ಬಾಕಿ ಉಳಿಸಿಕೊಂಡಿರುವ ವಾಹನ ಸವಾರರಿಗೆ ಈ ಶೇ.50ರ ರಿಯಾಯಿತಿಯ ಅವಕಾಶ ವರದಾನವಾಗಿದೆ.

    ಈ ಹಿಂದೆ ಕೆಲ ವಾಹನ ಸವಾರರು 30, 40 ಸಾವಿರ ದಂಡದ ಮೊತ್ತ ಬಾಕಿ ಉಳಿಸಿಕೊಂಡು ಪೊಲೀಸರಿಗೆ ಸಿಕ್ಕಿಬಿದ್ದು ಪೇಚಿಗೆ ಸಿಲುಕಿದ ನಿದರ್ಶನಗಳು ಇವೆ. ಹೀಗಾಗಿ ಹೆಚ್ಚಿನ ದಂಡ ಮೊತ್ತ ಬಾಕಿ ಉಳಿಸಿಕೊಂಡಿರುವ ವಾಹನ ಸವಾರರು ಈ ರಿಯಾಯಿತಿ ಅವಕಾಶವನ್ನು ಹೆಚ್ಚಾಗಿ ಬಳಸಿಕೊಳ್ಳಬಹುದಾಗಿದೆ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್. ಅನುಚೇತ್ ತಿಳಿಸಿದ್ದಾರೆ.

    Verbattle
    Verbattle
    Verbattle
    Bangalore infantry road Karnataka m News paytm rebate road TMC Traffic rules ನಿಯಮ ಉಲ್ಲಂಘನೆ
    Share. Facebook Twitter Pinterest LinkedIn Tumblr Email WhatsApp
    Previous ArticleRTO ನೇಮಕಾತಿಯಲ್ಲಿ ಗೋಲ್ ಮಾಲ್ – ಇನ್ಸ್ಪೆಕ್ಟರ್ ಹುದ್ದೆಗೆ ಕೋಟಿ ರೂ. ಡೀಲ್?
    Next Article ಬೆಂಗಳೂರಲ್ಲಿ ಮೂರು ದಿನ ವಾಹನ ಸಂಚಾರ ವ್ಯವಸ್ಥೆ ಬದಲಾವಣೆ
    vartha chakra
    • Website

    Related Posts

    ಓಶೋ ರಜನೀಶ್: ವಿವಾದಗಳ ನಡುವಿನ ‘ಮಹಾನ್ ಸಮ್ಮೋಹಕ’ ಮತ್ತು ಅತಿಮಾನುಷ ಪ್ರಭೆ

    ಫೆಬ್ರವರಿ 11, 2026

    ಬೆಂಗಳೂರಿನಲ್ಲಿ ಸಖಿ ಆಟೋ

    ಫೆಬ್ರವರಿ 9, 2026

    ಮೆಟ್ರೋ ದರ ಏರಿಕೆ: ಕೇಂದ್ರದ ಸಮಿತಿಯದ್ದೇ ತೀರ್ಮಾನ, ನಮ್ಮ ಅಭಿಪ್ರಾಯ ಕೇಳಿಲ್ಲ – ಡಿ.ಕೆ. ಶಿವಕುಮಾರ್ ಸ್ಪಷ್ಟನೆ

    ಫೆಬ್ರವರಿ 8, 2026

    1 ಟಿಪ್ಪಣಿ

    1. Impvlp on ಫೆಬ್ರವರಿ 13, 2026 9:19 ಫೂರ್ವಾಹ್ನ

      mgm bet login betmgm-play betmgm Wisconsin

      Reply

    Leave A Reply Cancel Reply

    Verbattle
    ವಿಭಾಗಗಳು
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಮಹಾಶಿವರಾತ್ರಿ ವಿಶೇಷ: ‘ಶಿವ’ ಎಂದರೆ ಶೂನ್ಯವೂ ಹೌದು, ಅನಂತವೂ ಹೌದು!

    ಸತ್ತವಳು ಎದ್ದು ಬಂದಾಗ!

    ಕಪ್ಪೆ ವಿಷದಿಂದ ಪ್ರತಿಪಕ್ಷ ನಾಯಕನ ಹತ್ಯೆ!

    ಬೆಂಗಳೂರಿನಲ್ಲಿ ಬಡ ವಿದ್ಯಾರ್ಥಿಗಳ ಹಾಸ್ಟೆಲ್‌ಗೆ ಜಾಗ ಮಂಜೂರು: ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • LeonardReawn ರಲ್ಲಿ ವಿದ್ಯುತ್ ದರ ಹೆಚ್ಚಳಕ್ಕೆ ಮಂತ್ರಿ ಜಾರ್ಜ್ ಹೇಳಿದ್ದೇನು ಗೊತ್ತಾ?
    • LinwoodGah ರಲ್ಲಿ ಅಖಾಡದಲ್ಲಿ ಝಣ ಝಣ ಕಾಂಚಾಣ! #karnatakaelections2023 #bangalore
    • Elbertrom ರಲ್ಲಿ ಆಭರಣದಂಗಡಿ ದೋಚಿದ್ದ ಕಳ್ಳರ ಬಂಧನ | Robbery
    Latest Kannada News

    ಮಹಾಶಿವರಾತ್ರಿ ವಿಶೇಷ: ‘ಶಿವ’ ಎಂದರೆ ಶೂನ್ಯವೂ ಹೌದು, ಅನಂತವೂ ಹೌದು!

    ಫೆಬ್ರವರಿ 15, 2026

    ಸತ್ತವಳು ಎದ್ದು ಬಂದಾಗ!

    ಫೆಬ್ರವರಿ 15, 2026

    ಕಪ್ಪೆ ವಿಷದಿಂದ ಪ್ರತಿಪಕ್ಷ ನಾಯಕನ ಹತ್ಯೆ!

    ಫೆಬ್ರವರಿ 15, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.