ಬೆಂಗಳೂರು,ಫೆ.4-
ರಾಜ್ಯ ಸಾರಿಗೆ ಇಲಾಖೆಯ ಮೋಟಾರ್ ವೆಹಿಕಲ್ ಇನ್ಸ್‌ಪೆಕ್ಟರ್ (Motor Vehicle Inspector) ಹುದ್ದೆಯ ನೇಮಕಾತಿಯಲ್ಲಿ ಅಕ್ರಮ ನಡೆದಿದ್ದು, ಅಭ್ಯರ್ಥಿಗಳು ನಕಲಿ ಸರ್ಟಿಫಿಕೇಟ್ ನೀಡಿ ಕೆಲಸ ಗಿಟ್ಟಿಸಿಕೊಂಡಿರುವ ಆರೋಪ ಕೇಳಿಬಂದಿದೆ. ಕಳೆದ 2016ರಲ್ಲಿ 150 ಮೋಟರ್ ವೆಹಿಕಲ್ ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಕೆಪಿಎಸ್‌ಸಿ (KPSC) ಪರೀಕ್ಷೆ ನಡೆದಿತ್ತು. ಸಾರಿಗೆ ಇಲಾಖೆ ಪರೀಕ್ಷೆಯ ನಂತರ ದಾಖಲೆಗಳ ಪರಿಶೀಲನೆ ಮಾಡಿದ್ದರು. ಈ ವೇಳೆ ಅಭ್ಯರ್ಥಿಗಳು ನಕಲಿ ಸರ್ಟಿಫಿಕೇಟ್ ನೀಡಿ ಒಂದೊಂದು ಪೋಸ್ಟ್ಗೂ ಒಂದೊಂದು ಕೋಟಿ ರೂ ಡೀಲ್ ಆಗಿರುವ ಆರೋಪ ಕೇಳಿಬಂದಿದೆ.
ಪರಿಶೀಲನಾ ಹಂತದಲ್ಲಿ ನಡೆದಿತ್ತು ಸಾಲು ಸಾಲು ಅಕ್ರಮಗಳು
ಸುಳ್ಳು ದಾಖಲೆಯನ್ನು ಸಾರಿಗೆ ಇಲಾಖೆಗೆ ನೀಡಿದ್ದ ಹಲವು ಅಭ್ಯರ್ಥಿಗಳು 2016ರಲ್ಲಿ ನಡೆದ ಪರೀಕ್ಷೆಗೆ 2019ರಲ್ಲಿ 129 ಸಂಭವನೀಯ ಪಟ್ಟಿ ಪ್ರಕಟಿಸಲಾಗಿತ್ತು. ಪಟ್ಟಿಯಲ್ಲಿ ಅಕ್ರಮ ಎಸಗಿದ್ದ ಅಭ್ಯರ್ಥಿಗಳ ಹೆಸರೇ ಇತ್ತು. ಈ ಹಿನ್ನೆಲೆಯಲ್ಲಿ ನೊಂದ ಅಭ್ಯರ್ಥಿಗಳು 2019ರಲ್ಲೇ ಕೆಎಟಿ (KAT) ಗೆ ಹಾಗೂ ಹೈಕೋರ್ಟ್ ಗೆ ಹೋಗಿದ್ದರು. 2021ರಲ್ಲಿ ಹೈಕೋರ್ಟ್ ಅಭ್ಯರ್ಥಿಗಳ ಕೋರಿಕೆಯಂತೆ ಲಿಸ್ಟ್ ವಾಪಸ್ ಪಡೆಯುವಂತೆ ಆದೇಶ ಹೊರಡಿಸಿತ್ತು. ಕೋರ್ಟ್ ಆದೇಶದನ್ವಯ ಸಾರಿಗೆ ಇಲಾಖೆ ಪಟ್ಟಿ ವಾಪಸ್ ಪಡೆದಿತ್ತು.
ಅಕ್ರಮ ಆಗಿದ್ದು ಹೇಗೆ:
ಹುದ್ದೆಗಳನ್ನು ಅಲಂಕರಿಸಲು ಕಡ್ಡಾಯವಾಗಿದ್ದ ಕೆಲ ಷರತ್ತುಗಳು.
22.10.2013ರಲ್ಲಿನ ವೃಂದ ಮತ್ತು ನೇಮಕಾತಿ ನಿಯಮದನ್ವಯ ಅಭ್ಯರ್ಥಿ ಬಸ್ಸು, ಲಾರಿ ಇವುಗಳನ್ನು ರಿಪೇರಿ ಮಾಡಲು ಕಡ್ಡಾಯವಾಗಿ ಕಲಿತಿರಬೇಕು. ಯಾವುದಾದರೂ ಸರ್ವೀಸ್ ಸ್ಟೇಷನ್ ಅಥವಾ ಗ್ಯಾರೇಜ್‌ನಲ್ಲಿ ಕೆಲಸ ಮಾಡಿರಬೇಕು. ಕನಿಷ್ಟ 1 ವರ್ಷವಾದರೂ ಸೇವಾನುಭವ ಪಡೆದಿರಬೇಕು ಎಂದು ನಿಯಮವಿದೆ.
ಆದರೆ 2019ರಲ್ಲಿ ಬಿಡುಗಡೆ ಮಾಡಲಾದ 129 ಅಭ್ಯರ್ಥಿಗಳಿಗೆ ಸೇವಾನುಭವ ಇರಲಿಲ್ಲ. ಸೇವಾನುಭವ ಇರೋದಾಗಿ ಸುಳ್ಳು ದಾಖಲೆ ಸೃಷ್ಟಿ ಮಾಡಿಕೊಂಡಿದ್ರಾ? ನಕಲಿ ಸ್ಯಾಲರಿ ಸರ್ಟಿಫಿಕೇಟ್, ನಕಲಿ ಹಾಜರಾತಿ, ನಕಲಿ ಗ್ಯಾರೇಜ್ ಸರ್ಟಿಫಿಕೇಟ್ಗಳನ್ನು ವಾಮ ಮಾರ್ಗದಲ್ಲಿ ಮಾಡಿಸಿಕೊಳ್ಳಲಾಗಿತ್ತು. ಇದೇ ಸುಳ್ಳು ದಾಖಲೆಗಳನ್ನು ನೀಡಿ ಸಾರಿಗೆ ಇಲಾಖೆಯನ್ನು ವಂಚಿಸಲಾಗಿತ್ತು. ಸಾರಿಗೆ ಇಲಾಖೆಯ ಅಧಿಕಾರಿಗಳೂ ಇದಕ್ಕೆ ಸಾಥ್ ನೀಡಿದ್ದರು ಎಂಬ ಅನುಮಾನ ಮೂಡಿದೆ.
ಕೋರ್ಟ್ ಆದೇಶದ ನಂತರ ಮತ್ತೊಂದು ಸಂಭವನೀಯ ಪಟ್ಟಿ ಬಿಡುಗಡೆ ಮಾಡಲಾಯ್ತು. 2021ರಲ್ಲಿ ಕೆಪಿಎಸ್‌ಸಿ (KPSC) ಯಿಂದ 141 ಜನರ ಮತ್ತೊಂದು ಸಂಭವನೀಯ ಪಟ್ಟಿ ಬಿಡುಗಡೆ ಮಾಡಲಾಗಿತ್ತು. ಈ ಪಟ್ಟಿಯಲ್ಲೂ ಸುಳ್ಳು ದಾಖಲೆ ನೀಡಿದ್ದವರ ಹೆಸರುಗಳೇ ಮುಂದುವರೆದಿದ್ದವು. 1ನೇ ಪಟ್ಟಿಯಲ್ಲಿ ಸುಳ್ಳು ದಾಖಲೆ ನೀಡಿದ್ದವರೇ 2ನೇ ಪಟ್ಟಿಯಲ್ಲೂ ಸ್ಥಾನ ಪಡೆದರು. 103ಕ್ಕೂ ಹೆಚ್ಚು ಅಭ್ಯರ್ಥಿಗಳು ಬಹುತೇಕ ನಕಲಿ ದಾಖಲೆಗಳನ್ನು ನೀಡಿದ್ದಾರೆ ಎನ್ನಲಾಗುತ್ತಿದೆ. ಇಂತಹ 20 ಅಭ್ಯರ್ಥಿಗಳ ದಾಖಲೆ ಸಮೇತ ಮಾಹಿತಿ ಲಭ್ಯವಾಗಿದೆ. ಬೆಂಗಳೂರು, ಮೈಸೂರು, ಕೋಲಾರ, ಶಿವಮೊಗ್ಗ, ವಿಜಯಪುರ, ಹಾಸನ ಹಾಗೂ ಮಂಡ್ಯ ಜಿಲ್ಲೆಗಳ ಅಭ್ಯರ್ಥಿಗಳ ನಕಲಿ ದಾಖಲೆಗಳು ಲಭ್ಯವಾಗಿವೆ.
14 ಪ್ರತಿಕ್ರಿಯೆಗಳು
clomid generic can you buy clomiphene without insurance buying generic clomiphene without prescription order clomid without rx clomiphene tablets price uk where to get cheap clomid pill order generic clomiphene without a prescription
Thanks an eye to sharing. It’s top quality.
Thanks on sharing. It’s outstrip quality.
brand zithromax – azithromycin 250mg sale order flagyl generic
propranolol us – buy plavix 75mg generic methotrexate 10mg tablet
buy amoxicillin tablets – buy valsartan generic order ipratropium 100mcg generic
buy azithromycin pill – order zithromax 500mg without prescription bystolic without prescription
order augmentin pill – atbioinfo buy acillin online cheap
buy generic esomeprazole over the counter – anexamate.com buy nexium 40mg pill
coumadin 2mg pills – https://coumamide.com/ buy cozaar without a prescription
meloxicam cost – moboxsin buy mobic 15mg pill
ed pills no prescription – medication for ed best male ed pills
forcan pills – on this site diflucan online order
escitalopram 20mg canada – https://escitapro.com/ buy lexapro online