ನವದೆಹಲಿ
ಕರ್ನಾಟಕದವರಾದ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ (c)ಸೇರಿದಂತೆ ಹದಿಮೂರು ಹೊಸ ರಾಜ್ಯಪಾಲರನ್ನು ಮತ್ತು ಲೆಫ್ಟಿನೆಂಟ್ ಗವರ್ನರ್‌ಗಳನ್ನು (Governor and Lieutenant Governor) ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ನೇಮಕ ಮಾಡಿದ್ದಾರೆ.
ನಿವೃತ್ತ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ಕರ್ನಾಟಕದಲ್ಲಿ ಹಿರಿಯ ವಕೀಲರಾಗಿ ಕೆಲಸ ಮಾಡಿ ನಂತರ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. ಆನಂತರ ಸುಪ್ರೀಂ ಕೋರ್ಟ್ ಗೆ ತೆರಳಿದ್ದ ಅವರು ರಾಮ ಜನ್ಮ ಭೂಮಿ ವಿವಾದ ಸೇರಿದಂತೆ ಕೆಲ ಐತಿಹಾಸಿಕ ಪ್ರಕರಣಗಳ ವಿಚಾರಣೆ ನಡೆಸಿದ್ದರು.
ಎಸ್. ಅಬ್ದುಲ್ ನಜೀರ್ ಅವರನ್ನು ಆಂಧ್ರಪ್ರದೇಶ (Andhra Pradesh) ರಾಜ್ಯದ ರಾಜ್ಯಪಾಲರಾಗಿ ನೇಮಕ ಮಾಡಲಾಗಿದೆ.
BJP ಬಿಜೆಪಿ ನಾಯಕರಾದ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರನ್ನು ಸಿಕ್ಕಿಂ ರಾಜ್ಯಪಾಲರಾಗಿ (Lakshman Prasad Acharya, Sikkim),
ಜಾರ್ಖಂಡ್ ರಾಜ್ಯಪಾಲರಾಗಿ ಸಿ.ಪಿ.ರಾಧಾಕೃಷ್ಣನ್ (C. P. Radhakrishnan, Jharkhand),
ಹಿಮಾಚಲ ಪ್ರದೇಶಕ್ಕೆ ಶಿವ ಪ್ರತಾಪ್ ಶುಕ್ಲಾ (Shiv Pratap Shukla, Himachal Pradesh) ಮತ್ತು
ರಾಜಸ್ಥಾನದ ವಿರೋಧ ಪಕ್ಷದ ನಾಯಕ ಗುಲಾಬ್ ಚಂದ್ ಕಟಾರಿಯಾ ಅವರನ್ನು ಅಸ್ಸಾಂ ರಾಜ್ಯಪಾಲರನ್ನಾಗಿ (Gulab Chand Kataria , Assam) ನೇಮಕ ಮಾಡಲಾಗಿದೆ.
ಮಹಾರಾಷ್ಟ್ರಕ್ಕೆ ರಮೇಶ್ ಬೈಸ್ (Ramesh Bais , Maharashtra ),
ಅರುಣಾಚಲ ಪ್ರದೇಶಕ್ಕೆ ಕೆ.ಟಿ.ಪರ್ನಾಯಕ್ (K T Parnaik, Arunachal Pradesh) ಅವರನ್ನು ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ.
ಲಡಾಖ್‌ಗೆ ಲೆಫ್ಟಿನೆಂಟ್ ಗವರ್ನರ್ ಆಗಿ ಬಿ.ಡಿ ಮಿಶ್ರಾ (BD Mishra, Ladakh) ಅವರನ್ನು ನೇಮಿಸಲಾಗಿದೆ.
ಈ ಹಿಂದೆ ರಮೇಶ್ ಬೈಸ್ ಅವರು ಜಾರ್ಖಂಡ್, ಬಿ.ಡಿ.ಮಿಶ್ರಾ ಅವರು ಅರುಣಾಚಲ ಪ್ರದೇಶದ ರಾಜ್ಯಪಾಲರಾಗಿದ್ದರು.