ಬೆಂಗಳೂರು,ಏ.26- ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ (Bengaluru-Mysuru expressway) ಹೆದ್ದಾರಿ ದೇಶದಲ್ಲೇ ಅತ್ಯುತ್ತಮ ರಸ್ತೆ ಎನ್ನುವ ಹೆಸರು ಪಡೆದಿರುವ ಬೆನ್ನಲ್ಲೇ ಈ ರಸ್ತೆಯಲ್ಲಿ ಸಂಭವಿಸುತ್ತಿರುವ ಸರಣಿ ಅಪಘಾತಗಳು ಕೂಡ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ.
ಎಕ್ಸ್‌ಪ್ರೆಸ್ (Bengaluru-Mysuru expressway) ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ಸರಾಸರಿ ವೇಗ ಪ್ರತಿ ಗಂಟೆಗೆ 120 ರಿಂದ 140 ಕಿ.ಮೀ ವರೆಗಿದೆ. ಇದರಿಂದ ಅಪಘಾತದ ಪ್ರಮಾಣಗಳು ಹೆಚ್ಚಾಗುತ್ತಿದೆ. ಈ ಅಪಘಾತಗಳಿಗೆ ರಸ್ತೆಯಲ್ಲಿ ಸಂಚರಿಸುವ ದ್ವಿಚಕ್ರ ವಾಹನಗಳು ಟ್ರ್ಯಾಕ್ಟರ್ ಮತ್ತು ಆಟೋರಿಕ್ಷಾ ಗಳು ಕಾರಣ ಎಂಬ ವರದಿಗಳು ಬಂದಿವೆ.
ಅಪಘಾತ ಪ್ರಕರಣಗಳ ತನಿಖೆ ನಡೆಸಿದ ಸಂಚಾರಿ ಪೊಲೀಸರು ಇಂತಹ ವಾಹನಗಳು ಅಡೆತಡೆ ಇಲ್ಲದೆ ಸಂಚರಿಸುತ್ತಿರುವ ಪರಿಣಾಮವಾಗಿ ಅತ್ಯಂತ ವೇಗವಾಗಿ ಬರುತ್ತಿರುವ ವಾಹನಗಳು ನಿಯಂತ್ರಣ ತಪ್ಪಿ ಅಪಘಾತ ಸಂಭವಿಸುತ್ತಿವೆ ಎಂಬ ವರದಿಗಳನ್ನು ನೀಡಿದ್ದಾರೆ.

ಇದರ ಬೆನ್ನಲ್ಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಇದೀಗ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ದ್ವಿಚಕ್ರವಾಹನ, ಆಟೋ ರಿಕ್ಷಾ, ಟ್ರಾಕ್ಟರ್ ಸೇರಿದಂತೆ ಕೃಷಿ ಸಂಬಂಧಿತ ವಾಹನಗಳಿಗೆ ನಿಷೇಧ ಹೇರಲು ಪ್ರಸ್ತಾವನೆ ಸಲ್ಲಿಸಿದೆ.
ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿ ಉದ್ಘಾಟನೆಯಾದ ಬಳಿಕ ಸರ್ವೀಸ್ ರಸ್ತೆ ಹಾಗೂ ಕೆಲ ಫ್ಲೈ ಓವರ್ ಕಾಮಾಗಾರಿ ಬಾಕಿ ಉಳಿದಿತ್ತು. ಹೀಗಾಗಿ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಎಲ್ಲಾ ವಾಹನಗಳಿಗೂ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. (Bengaluru-Mysuru expressway)
ಈಗ ಸರ್ವೀಸ್ ರಸ್ತೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿರಸ್ತೆ ನಿಯಮಗಳ ಪ್ರಜ್ಞೆ ಇಲ್ಲದಂತಾಗಿ ನಿಯಮ ಉಲ್ಲಂಘಿಸುತ್ತಿರುವ ಕಾರಣ ಸರಣಿ ಅಪಘಾತಕ್ಕೆ ಕಾರಣವಾಗುತ್ತಿದೆ. ಹೀಗಾಗಿ ದ್ವಿಚಕ್ರವಾಹನ, ಆಟೋ ರಿಕ್ಷಾ ಹಾಗೂ ಕೃಷಿ ಸಂಬಂಧಿತ ವಾಹನಗಳಿಗೆ ನಿಷೇಧ ಹೇರಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ. ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರದಲ್ಲೇ ಅಧಿಸೂಚನೆ ಹೊರಬೀಳಲಿದೆ. ಎಂದು ಹೇಳಲಾಗುತ್ತಿದೆ.
ಎಕ್ಸ್‌ಪ್ರೆಸ್ (Bengaluru-Mysuru expressway) ಹೆದ್ದಾರಿಯ ಎಡ ಭಾಗದಲ್ಲಿರುವ ಲೇನ್‌ನಲ್ಲಿ ಟ್ರಕ್ ಹಾಗೂ ಭಾರಿ ಗಾತ್ರದ ವಾಹನಗಳ ಸಂಚರಿಸಬೇಕು. ಮಧ್ಯದ ಲೇನ್‌ನಲ್ಲಿ 80 ಕಿ.ಮೀಗಿಂತ ವೇಗದಲ್ಲಿ ಸಂಚಿರುವ ಕಾರುಗಳು ಸಂಚರಿಸಬೇಕು. ಬಲಭಾಗದ ಲೇನ್ ಓವರ್ ಟೇಕ್ ಮಾಡಲು ಖಾಲಿ ಇರಬೇಕು. ಆದರೆ ಚಾಲಕರು ಇದ್ಯಾವುದನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ ಅಪಘಾತಗಳು ಹೆಚ್ಚಾಗುತ್ತಿದೆ ಎಂದು ಪ್ರಾಧಿಕಾರ ತಿಳಿಸಿದೆ.
Also read.


2 ಪ್ರತಿಕ್ರಿಯೆಗಳು
Gjør lykken din om til formue på Betano Casino. Nye medlemmer får opptil €500 bonus og free spins på toppslots. Spill https://betanogame.org/no/mobile-app/ når som helst, hvor som helst med vår smidige mobilapp. Spenningen ved seier er bare et klikk unna.
Mostbet te dГЎ o empurrГЈo que faltava para ganhar muito – https://mostbetpt.pro/bonus/ , Entre no Mostbet e sinta na hora o que Г© jogar com vantagens reais .