ಬೆಂಗಳೂರು – ರಾಜ್ಯ ಬಿಜೆಪಿಯಲ್ಲಿ ವಿದ್ಯಮಾನಗಳು ತೀವ್ರಗೊಂಡಿವೆ.ವಿಧಾನಸಭೆ ಪ್ರತಿಪಕ್ಷ ನಾಯಕ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಭಾರಿ ಪೈಪೋಟಿ ಉಂಟಾಗಿದೆ.
ಆರ್.ಅಶೋಕ್, ಸಿ.ಟಿ.ರವಿ,ಡಾ.ಅಶ್ವಥ್ ನಾರಾಯಣ್, ಸುನಿಲ್ ಕುಮಾರ್,ಬಸವರಾಜ ಬೊಮ್ಮಾಯಿ,ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿವೆ.ಈ ನಡುವೆ ಮಾಜಿ ಸಚಿವ ವಿ.ಸೋಮಣ್ಣ ಮತ್ತು ಸಂಸದ ರಮೇಶ್ ಜಿಗಜಿಣಗಿ ತಾವೂ ಕೂಡ ಆಕಾಂಕ್ಷಿ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ.
ಇದೀಗ ಈ ಸಾಲಿಗೆ ಮಾಜಿ ಸಚಿವ ರೇಣುಕಾಚಾರ್ಯ ಸೇರ್ಪಡೆಯಾಗಿದ್ದಾರೆ.ನನಗೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಬೇಕು ಎಂದು ಕೇಳಿದ್ದಾರೆ.
ನಾನು ದೈಹಿಕ ಮಾನಸಿಕವಾಗಿ ಗಟ್ಟಿಯಾಗಿದ್ದೇನೆ. ನಾನು ರಾಜ್ಯಾದ್ಯಂತ ಪ್ರವಾಸ ಮಾಡಿದ್ದೇನೆ. ಜನರ ಜೊತೆ ಇದ್ದು ರಾಜಕಾರಣ ಮಾಡಿದವನು ನಾನು. ಜಿಲ್ಲಾ ಮಟ್ಟ, ತಾಲೂಕು ಮಟ್ಟದಲ್ಲಿ ನನಗೆ ಜನರ ಪರಿಚಯವಿದೆ. ರಾಜ್ಯದ ಜನರ ಜೊತೆ ನನಗೆ ಉತ್ತಮ ಒಡನಾಟವಿದೆ. ನನಗೂ ಪಕ್ಷ ಕಟ್ಟುವ ಸಾಮರ್ಥ್ಯ ಇದೆ ಎಂದು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಯಬೇಕು ಅಂತ ಕಾರ್ಯಕರ್ತರ ಒತ್ತಡವಿದೆ. ನೂರಕ್ಕೆ ನೂರರಷ್ಟು ನಾನು ಲೊಕಸಭಾ ಚುನಾವಣೆ ಪ್ರಬಲ ಟಿಕೆಟ್ ಆಕಾಂಕ್ಷಿ. ಪಕ್ಷ ತೀರ್ಮಾನ ಮಾಡಿ ಸರ್ವೇ ಮಾಡಿಸಲಿ. ಇದು ರೇಣುಕಾಚಾರ್ಯನ ಒಬ್ಬನ ನಿರ್ಧಾರ ಅಲ್ಲ. ನಾನು ಸೋತಾಗಿಂದ ಕಾರ್ಯಕರ್ತರು ಮುಖಂಡರು ಲೋಕಸಭಾ ಚುನಾವಣೆಗೆ ನಿಲ್ಲಬೇಕು ಅಂತ ಒತ್ತಾಯಿಸುತ್ತಿದ್ದಾರೆ. ಹೊನ್ನಾಳಿ, ನ್ಯಾಮತಿ, ಹರಪನಹಳ್ಳಿ, ಸೇರಿ ಅನೇಕ ಕಡೆ ಕಾರ್ಯಕರ್ತರು ಕರೆ ಮಾಡಿ ಒತ್ತಾಯ ಮಾಡುತಿದ್ದಾರೆ. ಈ ಬಗ್ಗೆ ಪಕ್ಷ ನಿರ್ಧಾರ ಮಾಡಲಿ ಎಂದು ಹೇಳಿದರು.
Previous Article488 ರೂಪಾಯಿಗೆ ಡಬಲ್ ಮರ್ಡರ್
Next Article ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ Two-wheeler Ban