ಬೆಂಗಳೂರು, ಸೆ.8 – ಅಮಾಯಕರ ಖಾತೆಗೆ ಕನ್ನ ಹಾಕುವ ಸೈಬರ್ ವಂಚನೆಗಳು ನಗರದಲ್ಲಿ ದಿನೇದಿನೇ ಹೆಚ್ಚುತ್ತಿರುವುದನ್ನು
ಗಂಭೀರವಾಗಿ ಪರಿಗಣಿಸಿರುವ ನಗರ ಪೊಲೀಸರು ವಂಚನೆಗೆ ಬಳಕೆ ಮಾಡುವ ಸಿಮ್‌ಗಳನ್ನೇ ಶಾಶ್ವತವಾಗಿ ಬ್ಲಾಕ್ ಮಾಡಲು ಮುಂದಾಗಿದ್ದಾರೆ.
ಕಳೆದ ಜನವರಿಯಿಂದ ಇಲ್ಲಿಯವರೆಗೆ ವಂಚನೆಯಾದ ಸೈಬರ್ ವಂಚನೆ ಪ್ರಕರಣಗಳ ಅಂಕಿಅಂಶವನ್ನು ಕಂಟ್ರೋಲ್ ರೂಮ್ ಅಲ್ಲದೇ ಎಲ್ಲಾ ಠಾಣೆಗಳಿಂದಲೂ ಪಡೆದು ವಂಚನೆ ನಂಬರ್ ಗಳ ಡೇಟಾ ಸಂಗ್ರಹ ಮಾಡಿದ್ದಾರೆ.
ಒಂದಲ್ಲ ಎರಡಲ್ಲ, ಬರೋಬ್ಬರಿ 20 ಸಾವಿರಕ್ಕೂ ಹೆಚ್ಚು ಪ್ರಕರಣಗಳಿರುವುದನ್ನು ಪತ್ತೆ ಹಚ್ಚಿರುವ ನಗರ ಪೊಲೀಸರು. ಈ ವಂಚನೆ ಪ್ರಕರಣಗಳಲ್ಲಿ ಬಳಸಿದ ನಂಬರ್‌ಗಳ ಡೇಟಾ ಸಂಗ್ರಹಿಸಿರುವ ಪೊಲೀಸರು. ಯಾವ್ಯಾವ ನಂಬರ್‌ಗಳಿಂದ ವಂಚನೆಯಾಗಿದೆಯೋ ಅಂತಹ ನಂಬರ್‌ಗಳ ಸಿಮ್‌ಗಳನ್ನೇ ಶಾಶ್ವತವಾಗಿ ಬ್ಲಾಕ್ ಮಾಡಿಸಲು ಮುಂದಾಗಿದ್ದಾರೆ.
ಇದಕ್ಕಾಗಿ ಕೇಂದ್ರ ಗೃಹ ಇಲಾಖೆ ಮತ್ತು ಸಿಮ್ ಸಂಸ್ಥೆಗಳ ಜೊತೆ ಸಂವಹನ ನಡೆಸಿ ಕೇವಲ ಹದಿನೈದೇ ದಿನದಲ್ಲೇ 12 ಸಾವಿರ ಸಿಮ್ ಗಳ ಬ್ಲಾಕ್ ಮಾಡಿರುವ ಪೊಲೀಸರು. ಸಿಮ್‌ಗಳಷ್ಟೇ ಅಲ್ಲ, ಸೈಬರ್ ವಂಚನೆ ಕೃತ್ಯಕ್ಕೆ ಬಳಕೆ ಮಾಡಿರುವ ಮೊಬೈಲ್‌ಗಳನ್ನೂ ಬ್ಲಾಕ್ ಮಾಡಿಸುತ್ತಿರುವ ಪೊಲೀಸರು.ಇನ್ನು ಮುಂದೆ ವಂಚನೆ ಪ್ರಕರಣಗಳು ನಡೆದರೆ ಸಿಮ್ ಮೊಬೈಲ್ ಎರಡೂ ನಿಂತ ಜಾಗದಲ್ಲೇ ಬ್ಲಾಕ್ ಆಗಲಿದೆ


3 ಪ್ರತಿಕ್ರಿಯೆಗಳು
О‘ОЅООІО±ПѓОµ П„Ої ОµПЂОЇПЂОµОґОї П„ОїП… ПЂО±О№П‡ОЅО№ОґО№ОїПЌ ПѓОїП… ОјОµ П„Ої Betano Casino https://betanogame.org/el/. О О¬ПЃОµ ООЅО± П†О±ОЅП„О±ПѓП„О№ОєПЊ ОјПЂПЊОЅОїП…П‚ ОєО±О»П‰ПѓОїПЃОЇПѓОјО±П„ОїП‚ €500 ОєО±О№ ОІОїПЌП„О± ПѓОµ ОµОєО±П„ОїОЅП„О¬ОґОµП‚ premium ПЂО±О№П‡ОЅОЇОґО№О±. О•ОЇП„Оµ О±ОіО±ПЂО¬П‚ П„О± slots, П„Ої ПЂПЊОєОµПЃ О® П„О± ПѓП„ОїО№П‡О®ОјО±П„О± О±ОёО»О·ОјО¬П„П‰ОЅ – П„О± ОП‡ОїП…ОјОµ ПЊО»О±. О“ОЇОЅОµ ОјОО»ОїП‚ П„ОїП… ОєПЌОєО»ОїП… П„П‰ОЅ ОЅО№ОєО·П„ПЋОЅ ПѓО®ОјОµПЃО±.
BГґnus 125% + 250 free spins: a oferta imperdГvel do Mostbet – https://mostbetpt.pro/pagamento/ , No Mostbet o bГґnus Г© insano: 144% + 220 free spins na hora do cadastro .
Your next breath could be your richest one yet – https://buyclarinesx.com , Your winning streak wrote its own press release .