ಸಾಕ್ಷಿ ಮಲ್ಲೀಕ್, ಭಜರಂಗ ಪೂನಿಯಾ, ವಿನಿಶಾ ಪೋಗಟ್ ದೇಶದ ಅತ್ಯಂತ ಪ್ರತಿಭಾವಂತ ಕುಸ್ತಿ ಪಟುಗಳು. ಪದಕಗಳ ಮೂಲಕ ಭಾರತದ ಕೀರ್ತಿ ಪತಾಕೆಯನ್ನು ಬಾನೆತ್ತರಕ್ಕೆ ಹಾರಿಸುವ ಮೂಲಕ ಇಡೀ ಜಗತ್ತು ಈ ಕ್ರೀಡಾಪಟುಗಳಿಂದಾಗಿ ನಮ್ಮತ್ತ ನೋಡುವಂತೆ ಮಾಡಿದರು.
ಭಾರತದ ಕೀರ್ತಿಪತಾಕೆಯನ್ನು ಹಾರಿಸಿದ ಈ ಕ್ರೀಡಾ ಪಟುಗಳಿಗೆ ಔತಣಕೂಟ ಏರ್ಪಡಿಸಿ ಅವರನ್ನು ಸತ್ಕರಿಸಿದ ಪ್ರಧಾನಿ ಇವರು ಭಾರತದ ಹೆಮ್ಮೆಯ ಮಕ್ಕಳು ಎಂದು ಕೊಂಡಾಡಿದರು.ಇಂತಹ ಮಕ್ಕಳ ಮೇಲೆ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಎಂಬ ಬಿಜೆಪಿ ಸಂಸದ ದೌರ್ಜನ್ಯವೆಸಗಿದ್ದಾನೆಂದು ಆಪಾದಿಸಿ,ಬೀದಿಗಿಳಿದ ಕ್ರೀಡಾ ಪಟುಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದರು. ದೇಶದ ಪ್ರಜ್ಞಾವಂತ ನಾಗರಿಕರು ಕ್ರೀಡಾ ಪಟುಗಳ ಬೆಂಬಲಕ್ಕೆ ನಿಂತರು.ಪ್ರತಿಪಕ್ಷಗಳು ಈ ಘಟನೆಯನ್ನು ಬಲವಾಗಿ ಖಂಡಿಸಿದವು.ಆದರೆ ಪದಕ ಗೆದ್ದ ಮಹಿಳಾ ಕುಸ್ತಿ ಪಟುಗಳನ್ನು ಭಾರತಾಂಬೆಯ ಹೆಮ್ಮೆಯ ಕುಡಿಗಳೆಂದು ಗುಣಗಾನ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಈ ಬಗ್ಗೆ ಚಕಾರವೆತ್ತಲಿಲ್ಲ.
ಅದೇ ರೀತಿ ಮಣಿಪುರದಲ್ಲಿ ನಡೆದ ವಿದ್ಯಮಾನಗಳ ಕುರಿತು ಪ್ರಧಾನಿ ಅವರ ಮೌನ ಎಲ್ಲರಿಗೂ ಗೊತ್ತಿರುವ ಸಂಗತಿ.ಇಂತಹ ಮಹಾ ಮೌನಿ ಪ್ರಧಾನಿ ನರೇಂದ್ರ ಮೋದಿ ಏಕಾಏಕಿ ಅಬ್ಬರಿಸಿ ಬೊಬ್ಬಿರಿದರು. ತಮಿಳುನಾಡಿನ ಯುವ ರಾಜಕಾರಣಿ ಉದಯ ನಿಧಿ ಸ್ಟಾಲಿನ್ ವಿರುದ್ಧ ಹಿಗ್ಗಾಮುಗ್ಗಾ ಪ್ರಹಾರ ನಡೆಸಿದ ಅವರು, ಉದಯನಿಧಿ ವಿರುದ್ಧ ವಾಗ್ದಾಳಿ ನಡೆಸುವಂತೆ ತಮ್ಮ ಪಕ್ಷದ ಸಂಸದರಿಗೆ ಕರೆ ನೀಡಿದರು.ಸನಾತನ ಧರ್ಮ ನಿರ್ಮೂಲ ಕುರಿತು
ಉದಯನಿಧಿ ನೀಡಿದ ಹೇಳಿಕೆ ಬೆಳಗಾಗುವಷ್ಟರಲ್ಲಿ ದೇಶಾದ್ಯಂತ ಸಂಚಲನ ಮೂಡಿಸಿ,ಪರ- ವಿರೋಧದ ಚರ್ಚೆಗೆ ಗ್ರಾಸವಾಯಿತು.
ಸನಾತನ ಧರ್ಮದ ಪರವಾದ ಸ್ವಾಮೀಜಿಯೊಬ್ಬರು ಉದಯನಿಧಿ ತಲೆ ಕಡಿದವರಿಗೆ ಹತ್ತು ಕೋಟಿ ರೂಪಾಯಿ ಇನಾಮು ಕೊಡುವುದಾಗಿ ಘೋಷಿಸುವ ಮೂಲಕ ತಮಿಳುನಾಡಿನ ಕಿರಿ ವಯಸ್ಸಿನ ರಾಜಕಾರಣಿ ಹಾಗೂ ಯುವ ನಟ ಎಲ್ಲರ ಗಮನ ಸೆಳೆದರು. ಅಷ್ಟೇ ಅಲ್ಲ ಈ ಒಂದು ಹೇಳಿಕೆಯ ಮೂಲಕ ರಾಜಕೀಯವಾಗಿ ಹಲವಾರು ಪ್ರಶ್ನೆಗಳಿಗೆ ಉತ್ತರ ಮತ್ತು ಸಂದೇಶ ರವಾನಿಸಿದರು. ಉದಯಿಸುವ ಸೂರ್ಯನ ಚಿನ್ಹೆ ಹೊಂದಿರುವ ತಮಿಳುನಾಡಿನ ಡಿಎಂಕೆ ಪಕ್ಷದ ಉತ್ತರಾಧಿಕಾರಿ ಉದಯನಿಧಿ ಸ್ಟಾಲಿನ್ ಎಂಬ ಬಲವಾದ ಸಂದೇಶ ರವಾನೆಯಾಯಿತು.
ಈ ಕುರಿತಂತೆ ಪರ ವಿರೋಧ ಚರ್ಚೆ ಆರಂಭವಾಗುತ್ತಿದ್ದಂತೆ ದೇಶಾದ್ಯಂತ ಯಾರು ಈ ಉದಯನಿಧಿ ಎಂಬ ಕುತೂಹಲ ಸೃಷ್ಟಿಯಾಯಿತು. ಆತನ ವಿವರಗಳಿಗಾಗಿ ಆಸಕ್ತರು ಸೋಷಿಯಲ್ ಮೀಡಿಯಾಗಳಲ್ಲಿ ಜಾಲಾಡಿದರು.ದಿನ ಕಳೆಯುವುದರೊಳಗೆ ಉದಯನಿಧಿ ಚಿರ ಪರಿಚಿತ ರಾಜಕಾರಣಿಯಾದರು.
ಅಂದ ಹಾಗೆ ಈ ಉದಯನಿಧಿ ತಮಿಳುನಾಡು ಮುಖ್ಯಮಂತ್ರಿ ಮೋಕಾ ಸ್ಟಾಲಿನ್ ಅವರ ಪುತ್ರ, ದೇಶದ ಪ್ರಭಾವಿ ನಾಯಕ ಹಾಗೂ ಪೆರಿಯಾರ್ ತತ್ವ ಪ್ರತಿಪಾದಕ ಹಾಗೂ ಡಿಎಂಕೆಯ ಪರಮೋಚ್ಚ ನಾಯಕ ಎಂ.ಕರುಣಾನಿಧಿ ಅವರ ಮೊಮ್ಮಗ.
ದಿವಂಗತ ಕರುಣಾನಿಧಿ ಅವರ ಅತ್ಯಂತ ಪ್ರೀತಿ ಪಾತ್ರ ಮೊಮ್ಮಗ ತನ್ನ ತಾತನ ಹೆಜ್ಜೆಜಾಡಲ್ಲಿ ಅಂಬೆಗಾಲಿಟ್ಟು ನಡೆಯತೊಡಗಿದ್ದಾರೆ.
ಕರುಣಾನಿಧಿ ಅವರು ತಮಿಳುನಾಡಿನಲ್ಲಿ ಸಂಚಲನ ಸೃಷ್ಟಿಸಿದ ಪೆರಿಯಾರ್ ತತ್ವಗಳ ಪ್ರಬಲ ಪ್ರತಿಪಾದಕರಾಗಿ ದಿವಂಗತ ಅಣ್ಣಾದೊರೈ ಮಾರ್ಗದರ್ಶನದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದರು.
ತಮಿಳು ಚಿತ್ರರಂಗದ ದಂತಕಥೆ ಎಂ.ಜಿ.ರಾಮಚಂದ್ರನ್, ಎಂ.ಕರುಣಾನಿಧಿ ಜೋಡಿ ಪೆರಿಯಾರ್ ತತ್ವಗಳನ್ನಿಡಿದು ಜೋಡೆತ್ತಿನಂತೆ ತಮಿಳುನಾಡಲ್ಲಿ ಸೃಷ್ಟಿಸಿದ ಮಿಂಚಿನ ಸಂಚಾರ ಭಾರತದಲ್ಲಿರಲಿ ಜಗತ್ತಿನ ಯಾವುದೇ ದೇಶ ಮತ್ತು ರಾಜಕೀಯದಲ್ಲಿ ಸೃಷ್ಟಿಸಲು ಸಾಧ್ಯವಾಗಿಲ್ಲ.
ನಟನೆ ಮೂಲಕ ಎಂ.ಜಿ.ಆರ್. ಜನರ ಮನಗೆದ್ದರೆ,ಅದಕ್ಕೆ ತಕ್ಕಂತೆ ಚಿತ್ರಕಥೆ, ಸಂಭಾಷಣೆ ಮತ್ತು ಗೀತೆಗಳ ಮೂಲಕ ಜನರನ್ನು ಸೂಜಿಗಲ್ಲಿನಂತೆ ಸೆಳೆದವರು ಕರುಣಾನಿಧಿ.ನಂತರದಲ್ಲಿ ಈ ಜೋಡೆತ್ತುಗಳು ಬೇರ್ಪಟ್ಟು ಮಾಡಿದ ರಾಜಕಾರಣ ಕೂಡ ಇತಿಹಾಸ.
ಎಂ.ಜಿ.ಆರ್ .ಅವರನ್ನು ಬೇರ್ಪಟ್ಟ ಕರುಣಾನಿಧಿ ತಮ್ಮ ಮೊನಚು ಭಾಷಣ,ಮೂಢನಂಬಿಕೆ, ಕಂದಾಚಾರಗಳ ವಿರುದ್ಧ ಬರೆದ ಕಥೆ,ಲೇಖನ,ಮಾಡಿದ ಸಿನಿಮಾಗಳು ಇವರನ್ನು ತಮಿಳುನಾಡಿನಲ್ಲಿ ಅತ್ಯಂತ ಉನ್ನತ ಸ್ಥಾನಕ್ಕೆ ಕೊಂಡೊಯ್ದವು.ಯಾವುದೇ ಪ್ರಬಲ ಜಾತಿಯ ಬಲವಿಲ್ಲದೆ ,ಕೇವಲ ಪೆರಿಯಾರ್ ತತ್ವಗಳನ್ನು ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಪ್ರತಿಪಾದಿಸಿದ್ದು, ಅವರನ್ನು ದಂತಕಥೆಯಾಗಿ ಮಾಡಿತು.
ತಮ್ಮ ಅತ್ಯಂತ ಇಳಿ ವಯಸ್ಸಿನಲ್ಲೂ ರಾಮಾನುಜಾಚಾರ್ಯರ ಕುರಿತು ಕರುಣಾನಿಧಿ ಅವರು ಮಾಡಿದ ಸಂಶೋಧನೆ, ಕಿರುತೆರೆಯಲ್ಲಿ ಹೊರತಂದ ಸೀರಿಯಲ್ ದೊಡ್ಡ ದಾಖಲೆ.
ತನ್ನ ತಾತನ ಇಂತಹ ದೈತ್ಯ ಪ್ರತಿಭೆ ದೃಷ್ಟಿಕೋನವನ್ನು ಅತ್ಯಂತ ಹತ್ತಿರದಿಂದ ನೋಡಿ ಬಲ್ಲ ಉದಯನಿಧಿ ಅವರದೆ ದಾರಿಯಲ್ಲಿ ಸಾಗುವ ಪ್ರಯತ್ನ ಮಾಡಿ ಸುಮಾರು ಹತ್ತು ವರ್ಷಗಳ ಹಿಂದೆ ‘ಒರು ಕಲ್, ಒರು ಕನ್ನಡಿ’ ಎನ್ನುವ ಮೊದಲ ಸಿನಿಮಾದಲ್ಲಿ ನಟಿಸಿದರು. ತಮ್ಮ ಮೊದಲ ಸಿನಿಮಾದಲ್ಲಿ, ಕ್ಯಾಮೆರಾ ಮುಂದೆ ದೊಡ್ಡ ವಾಕ್ಯಗಳ ಡೈಲಾಗ್ ಹೇಳಲು ಪರದಾಡಿದ ಉದಯನಿಧಿ ಅವರಿಗಾಗಿ ನಿರ್ದೇಶಕರು ಸಣ್ಣ ವಾಕ್ಯಗಳ ಡೈಲಾಗ್ ಗಳನ್ನುಹೇಳಿಕೆ ಪಡಿಸಬೇಕಾಯಿತು.ಮೊದಲ ಸಿನಿಮಾದಲ್ಲಿ ಅಂತಹ ದೊಡ್ಡ ಮಟ್ಟದ ಸುದ್ದಿ ಮಾಡದೆ ಹೋದರೂ ತಮಿಳು ಸಿನಿಮಾ ಪ್ರಿಯರ ಗಮನ ಸೆಳೆಯುವಲ್ಲಿ ಯಶಸ್ವಿಯಾದರು.ಅಷ್ಟೇ ಅಲ್ಲ ಈ ಸಿನಿಮಾದ ನಟನೆಗಾಗಿ ಫಿಲಂಫೇರ್ ಪ್ರಶಸ್ತಿ ಕೂಡ ಇವರ ಮುಡಿಗೇರಿತು.
ಇದಾದ ನಂತರ ಅವರ ಅಭಿನಯದ ಮನಿದನ್, ಕಣ್ಣೇ ಕಲೈಮಾಣೆ,ನಿಂಜಕ್ಕೂ ನೀಧಿ ಕಲಗ ತಲೈವನ್ ಮೊದಲಾದ ಸಿನಿಮಾಗಳು ಗಮನ ಸೆಳೆದವು.
ಕೇವಲ ನಟನಾಗಿ ಮಾತ್ರವಲ್ಲದೆ ರೆಡ್ ಜೈಂಟ್ ಮೂವೀಸ್ ಎಂಬ ನಿರ್ಮಾಣ ಸಂಸ್ಥೆಯ ಮೂಲಕ
ಆದವನ್, 7ಒಮ್ ಅರಿವು,ಮದ್ರಾಸ್ ಪಟ್ಟಿಣಂ ಸೇರಿದಂತೆ ಹಲವು ಸಿನಿಮಾ ನಿರ್ಮಿಸದರು.
ಪುದಿಯ ದಳಪತಿ ವಿಜಯ್ ಸೇರಿದಂತೆ ಹಲವು ಖ್ಯಾತನಾಮರ ಸಿನಿಮಾ ನಿರ್ಮಿಸಿ ಸೈ ಎನಿಸಿಕೊಂಡ ಉದಯನಿಧಿ,ಸಿನಿಮಾ ವಿತರಕ,ಹಂಚಿಕೆದಾರರಾಗಿ ಗಮನ ಸೆಳೆದರು.
ಬಣ್ಣದ ಲೋಕದಲ್ಲಿ ಯಶಸ್ಸಿನ ಮೆಟ್ಟಿಲುಗಳನ್ನು ಹತ್ತಿ ವೇಗವಾಗಿ ಸಾಗುತ್ತಿದ್ದ ಅವರ ಈ ಅಂಶಗಳನ್ನು ಗಮನಿಸಿದಾಗ ಅವರು, ರಾಜಕೀಯ ಪ್ರವೇಶಿಸುವ ಯಾವ ಸುಳಿವೂ ಇರಲಿಲ್ಲ.ಸಿನಿಮಾದ ಯಶಸ್ವಿನ ಹಿನ್ನೆಲೆಯಲ್ಲಿ ಅಭಿಮಾನಿಗಳ ಪಡೆ ಸೃಷ್ಟಿಯಾಯಿತು. ಇದನ್ನು ರಾಜಕೀಯಕ್ಕೆ ಯಾಕೆ ಬಳಸಬಾರದು ಎಂದು ಚಿಂತಿಸಿದ ಡಿ.ಎಂ.ಕೆ.ಯ ಚಿಂತಕರ ಚಾವಡಿ ಉದಯನಿಧಿ ಅವರನ್ನು ಡಿಎಂಕೆ ಪಕ್ಷದ ಯುವ ಘಟಕದ ಅಧ್ಯಕ್ಷನಾಗಿ ನೇಮಿಸಿತು.
ಪಕ್ಷದ ಮುಂಚೂಣಿ ಘಟಕದ ಅಧ್ಯಕ್ಷನಾಗಿ ಕೆಲವೊಂದು ಜವಾಬ್ದಾರಿ ನಿಭಾಯಿಸುತ್ತಿದ್ದ ಯವ ನಾಯಕನ ಚಟುವಟಿಕೆಗಳನ್ನು ಗಮನಿಸಿದವರಿಗೆ ಈತ ಶಾಸಕನಾಗುತ್ತಾನೆಂಬ ಯಾವ ಸುಳಿವೂ ಸಿಗಲಿಲ್ಲ.
ಆದರೆ ವಿಧಾನಸಭೆ ಚುನಾವಣೆ ಘೋಷಣೆಯಾದಾಗ ತನ್ನ ತಾತ ಮುತ್ತುವೇಲ್ ಕರುಣಾನಿಧಿ ಅವರು ಸ್ಪರ್ಧಿಸುತ್ತಿದ್ದ ಚಿಪಾಕ್ ಕ್ಷೇತ್ರದಿಂದ ಕಣಕ್ಕಿಳಿಯಲು ಪಕ್ಷದ ನಾಯಕತ್ವ ತೀರ್ಮಾನಿಸಿ ಟಿಕೆಟ್ ಘೋಷಿಸಿತು.ಆಗ ಅಚ್ಚರಿಗೊಳಗಾಗುವ ಸರದಿ ಪಕ್ಷದ ನಾಯಕರದ್ದಾಗಿತ್ತು.
ಈ ವೇಳೆ ತಮಿಳುನಾಡು ರಾಜಕಾರಣದ ದಂತಕಥೆ, ಡಿಎಂಕೆ ಯ ಧೃವತಾರೆ ಕರುಣಾನಿಧಿ ಅವರು ಸ್ಪರ್ಧಿಸುತ್ತಿದ್ದ ಚಿಪಾಕ್ ಕ್ಷೇತ್ರದಿಂದ ಉದಯನಿಧಿ ಕಣಕ್ಕಿಳಿಯುತ್ತಿದ್ದಂತೆ ಡಿಎಂಕೆ ಯ ಉತ್ತರಾಧಿಕಾರಿ ಪಟ್ಟಕ್ಕೆ ಟವೆಲ್ ಹಾಕಿಕೊಂಡು ಕಾದು ಕುಳಿತಿದ್ದ ಕರುಣಾನಿಧಿ ಅವರ ಕುಟುಂಬದ ಅಳಗಿರಿಯೂ ಸೇರಿದಂತೆ ಇತರೆ ನಾಯಕರ ಎದೆಯಲ್ಲಿ ಅವಲಕ್ಕಿ ಕುಟ್ಟಿದ ಅನುಭವವಾಯಿತು.
ಚುನಾವಣೆಗೆ ಸ್ಪರ್ಧಿಸಿರಬಹುದು.ಆದರೆ ಆತ ಆಯ್ಕೆ ಆಗುವುದಿಲ್ಲ ಎಂದೇ ಇವರೆಲ್ಲರೂ ಲೆಕ್ಕಾಚಾರ ಹಾಕಿದ್ದರು.ಆದರೆ, ಈ ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗಾಗಿ ಮಾಡಿದ ಉದಯನಿಧಿ ಶಾಸಕನಾಗಿ ಆಯ್ಕೆಯಾಗುವ ಮೂಲಕ ರಾಜಕೀಯದ ಅಧ್ಯಾಯದಲ್ಲಿ ತನ್ನ ಪುಟ ತೆರೆದ.ಆನಂತರ ಮಂತ್ರಿಯೂ ಆಗುವ ಮೂಲಕ ರಾಜಕೀಯದಲ್ಲಿ ಬೇರು ಬಿಡಲಾರಂಭಿಸಿದ.
ಜೊತೆ ಜೊತೆಗೆ ಸಿನಿಮಾ ಜಗತ್ತಿನ ನಂಟೂ ಕೂಡಾ ಮುಂದುವರೆದಿತ್ತು. ಈ ಸಮಯದಲ್ಲಿ ತಮಿಳು ಸಿನಿಮಾದ ಯಶಸ್ವಿ ನಿರ್ದೇಶಕ ಮಾರಿ ಸೆಲ್ವರಾಜ್, ಮಾಮಣ್ಣನ್ ಎಂಬ ಚಿತ್ರಕತೆಯನ್ನು ಹಿಡಿದು ಉದಯನಿಧಿ ಬಳಿ ಬಂದು ಕಥೆ ಹೇಳಿದರು.ಅಲ್ಲದೆ ಈ ಸಿನಿಮಾದಲ್ಲಿ ಪಾತ್ರ ಮಾಡುವಂತೆ ಮನವಿ ಮಾಡಿದರು.
ಮೇಲ್ವರ್ಗ ಮತ್ತು ಕೆಳವರ್ಗದ ಮುಖಾಮುಖಿ ದಾಳಿಗಳನ್ನು ವಿವರಿಸುವ ಸಿನಿಮಾದ ಕಥೆ ಕೇಳಿದ ಉದಯನಿಧಿ ತಮ್ಮ ಪಾತ್ರ ಎನು ಎಂದು ವಿಚಾರಿಸದೆ ನಟಿಸಲು ಒಪ್ಪಿಕೊಂಡರು. ತಮಿಳಿನ ಖ್ಯಾತ ಹಾಸ್ಯನಟ ವಡಿವೇಲು ಈ ಚಿತ್ರದ ಪ್ರಮುಖ ಪಾತ್ರಧಾರಿ.
ಮಾಮಣ್ಣನ್ ಸಿನಿಮಾ ತಮಿಳು ಚಿತ್ರರಂಗದಲ್ಲಿ ಮಾತ್ರವಲ್ಲ, ತಮಿಳುನಾಡಿನ ರಾಜಕೀಯ ರಂಗದಲ್ಲೂ ತೀವ್ರ ಸಂಚಲನ ಉಂಟು ಮಾಡಿತು.
ಪೆರಿಯಾರ್ ಚಿಂತನೆಯ ದ್ರಾವಿಡ ತತ್ವದ ಈ ಸಿನಿಮಾದಲ್ಲಿ ಉದಯನಿಧಿ ಪಾತ್ರ ಹಾಗೂ ನಟನೆ ತನ್ನ ಗಾಂಭೀರ್ಯದಿಂದ ಎಲ್ಲರ ಗಮನ ಸೆಳೆಯಿತು. ಈ ಸಿನಿಮಾದ ನಟನೆಯೊಂದಿಗೆ ಉದಯನಿಧಿ ಅವರು ಸಾಗುವ ರಾಜಕೀಯದ ಹಾದಿ ಕೂಡ ಬಹುತೇಕ ನಿರ್ಧಾರಿತವಾಗಿತ್ತು.
ಮಾಮಣ್ಣನ್ ಸಿನಿಮಾ ಶೂಟಿಂಗ್ ಸಮಯದಲ್ಲೇ ಉದಯನಿಧಿ ಮೇರು ನಟ ಕಮಲ ಹಾಸನ್ ನಿರ್ಮಾಣದ ಹೊಸ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದರು. ಹೊಸ ಸಿನಿಮಾದ ಶೂಟಿಂಗ್
ಇನ್ನೇನು ಶುರುವಾಗಬೇಕು ಎನ್ನುವಾಗಲೇ ಶಾಸಕ ಉದಯನಿಧಿಯನ್ನು ಮುಖ್ಯಮಂತ್ರಿ ಸ್ಟಾಲಿನ್ ತಮ್ಮ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡರು.
ಇಲ್ಲಿಗೆ ಉದಯನಿಧಿ ಸಾಗಬೇಕಾದ ದಾರಿ ಸಂಪೂರ್ಣ ನಿರ್ಧಾರವಾಯಿತು.ಯಾರ ಅರಿವಿಗೂ ಬಾರದೆ ಉದಯನಿಧಿ ಡಿಎಂಕೆ ಯ ಉತ್ತರಾಧಿಕಾರಿ ಪಟ್ಟ ಅಲಂಕರಿಸುವತ್ತ ದಾಪುಗಾಲಿಟ್ಟರು.
ರಾಜಕೀಯದ ತಮ್ಮ ನಿರ್ಧಾರ ಯಾವಾಗ ಸುಸ್ಪಷ್ಟವಾಯಿತೋ ಆಗ ಕೊಂಚವೂ ತಡ ಮಾಡದ ಉದಯನಿಧಿ ನೇರವಾಗಿ ಕಮಲಹಾಸನ್ ಅವರಲ್ಲಿಗೆ ತೆರಳಿ,ತಮ್ಮ ಸಿನಿಮಾದಲ್ಲಿ ನಟಿಸಲಾರೆ ಎಂದು ಹೇಳಿ,ಇದಕ್ಕಾಗಿ ಕೋರಿದರು.ಅಷ್ಟೇ ಅಲ್ಲ ಇನ್ನು ಮುಂದೆ ನಾನು ಯಾವುದೇ ಸಿನಿಮಾದಲ್ಲಿ ನಟಿಸಲಾರೆ ಮಾಮಣ್ಣನ್ ನನ್ನ ಜೀವನದ ಕಟ್ಟಕಡೆಯ ಸಿನಿಮಾ” ಎಂದು ಘೋಷಿಸಿದರು. ಇಲ್ಲಿಗೆ ಅವರ ದಾರಿ ಸ್ಪಷ್ಟವಾಯಿತು.
ಮೊದಲು ಸಿನಿಮಾ ಬಳಿಕ ಪಕ್ಷ ಸಂಘಟನೆ ಅಧ್ಯಕ್ಷ, ನಂತರ ಶಾಸಕ, ಬಳಿಕ ಮಂತ್ರಿ ಈಗ ರಾಷ್ಟ್ರದ ಗಮನ ಸೆಳೆದ ರಾಜಕಾರಣಿ.
ತಮಿಳುನಾಡು ರಾಜಕಾರಣದಲ್ಲಿ ಉತ್ತರಾಧಿಕಾರಿ ಪಟ್ಟ ಅಷ್ಟು ಸುಲಭವಾಗಿ ಯಾರಿಗೂ ಒಲಿಯುವುದಿಲ್ಲ ಎನ್ನುವುದು ಆ ರಾಜ್ಯದ ರಾಜಕೀಯ ಇತಿಹಾಸ ನೋಡಿದರೆ ಸು ಸ್ಪಷ್ಟವಾಗುತ್ತದೆ.ಅದರಲ್ಲೂ ದ್ರಾವಿಡ ಪಕ್ಷಗಳ ಉತ್ತರಾಧಿಕಾರಿ ಆಗುವುದು ಸುಲಭವಲ್ಲ.
ಅಣ್ಣಾದೊರೈ ನಂತರ ದ್ರಾವಿಡ ಪಕ್ಷದ ಉತ್ತರಾಧಿಕಾರಿಗಾಗಿ ದೊಡ್ಡ ಸಂಘರ್ಷ ನಡೆದು ಪಕ್ಷ ವಿಭಜನೆಯಾಯಿತು.
ನಂತರ ಅಣ್ಣಾ ಡಿಎಂಕೆ ಉತ್ತರಾಧಿಕಾರಿಗಾಗಿ ಇಬ್ಬರು ಮಹಿಳೆಯರ ನಡುವೆ ನಡೆದ ಕದನ ಪಕ್ಷ ವಿಭಜಿಸದರೆ,ಜಯಲಲಿತಾ ನಿಧನದ ನಂತರದಲ್ಲಿ ಉತ್ತರಾಧಿಕಾರಿ ಆಯ್ಕೆಗೆ ನಡೆಯುತ್ತಿರುವ ಕದನ ಇನ್ನೂ ನಿಂತಿಲ್ಲ.
ಡಿಎಂಕೆ ಉತ್ತರಾಧಿಕಾರಿಗಾಗಿ ಕುಟುಂಬದಲ್ಲಿ ನಡೆದ ಕದನ ಇದೀಗ ಮನೆ ಮಾತು.ಇಂತಹ ಉದಾಹರಣೆಗಳ ನಡುವೆ ಉದಯನಿಧಿ ಯಾವ ಸದ್ದು ಗದ್ದಲವೂ ಇಲ್ಲದೆ ಗದ್ದುಗೆ ಏರಿದ್ದು ಒಂದು ಸಿನಿಮಾದ ಚಿತ್ರಕತೆಯಂತೆಯೇ ಇದೆ.
ತನ್ನ ತಾತನ ವಿಧಾನಸಭೆ ಕ್ಷೇತ್ರದಿಂದ ಶಾಸಕನಾಗಿ ಆಯ್ಕೆಯಾಗಿ ಮಂತ್ರಿಯೂ ಆಗಿ,ಇದೀಗ ತನ್ನ ತಾತನಂತೆ ಪೆರಿಯಾರ್ ತತ್ವ ಆಧರಿಸಿ ಸನಾತನ ಧರ್ಮ ಕುರಿತ ಸಮರದ ಘೋಷಣೆ ಅವರನ್ನು ಬೇರೆಯದೇ ಆದ ದಿಕ್ಕಿನತ್ತ ಕೊಂಡೊಯ್ದಿದೆ.
ಪ್ರಧಾನಿ ಮೋದಿ ಮತ್ತವರಬಳಗ ಉದಯನಿಧಿ ವಿರುದ್ಧ ಮುಗಿ ಬಿದ್ದಿದೆ.
ರಾಷ್ಟ್ರೀಯ ಮಟ್ಟದಲ್ಲಿ ಇವರ ಹೇಳಿಕೆ ಪರ-ವಿರೋಧದ ಚರ್ಚೆಗೆ ಗ್ರಾಸವಾದರೆ, ತಮಿಳುನಾಡಿನಲ್ಲಿ ಮಾತ್ರ ವಿಭಿನ್ನ ಆಯಾಮವನ್ನೇ ನೀಡಿದೆ.
ತಮ್ಮ ವಿರುದ್ಧ ತೂರಿ ಬರುತ್ತಿರುವ ಅಸ್ತ್ರಗಳ ಬಗ್ಗೆ ತಲೆ ಕಡೆಸಿಕೊಳ್ಳದವಉದಯನಿಧಿ ತನ್ನ ಹೇಳಿಕೆಗೇ ಬಲವಾಗಿ ಅಂಟಿಕೊಂಡಿದ್ದಾರೆ.ಸರಕಾರದ ಬಗ್ಗೆ ನನಗೆ ಚಿಂತೆ ಇಲ್ಲ. ಪಕ್ಷದ ಸಿದ್ದಾಂತ ಮುಖ್ಯ. ಅದನ್ನು ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಈ ಮೂಲಕ ತಮಿಳುನಾಡಿನ ರಾಜಕೀಯ ದಿಗಂತದಲ್ಲಿ ಈಗ ಉದಯನಿಧಿ ಎಂಬ ಉದಯಸೂರ್ಯ ಮೇಲೆದ್ದಿದ್ದಾನೆ.
ಒಂದು ಹೇಳಿಕೆ ಉದಯನಿಧಿಯ ಮೊದಲ ಸಿನಿಮಾದ ಟೈಟಲ್ ಒರು ಕಲ್,ಅನ್ನು ನೆನಪಿಸುತ್ತದೆ.
ಒಂದು ಹೇಳಿಕೆ ಹಲವು ಉತ್ತರಗಳನ್ನು ರವಾನಿಸಿದೆ.
13 ಪ್ರತಿಕ್ರಿಯೆಗಳು
вывод из запоя воронеж https://vyvod-iz-zapoya-v-stacionare.ru/ .
вывод из запоя нижний новгород стационар вывод из запоя нижний новгород стационар .
капельницы на дому от запоя https://www.snyatie-zapoya-na-domu11.ru .
вывод запой нижний snyatie-zapoya-na-domu13.ru .
вывод из запоя самара стационар https://vyvod-iz-zapoya-v-stacionare-samara11.ru .
снятие ломки на дому снятие ломки на дому .
вывод из запоя в санкт-петербурге вывод из запоя в санкт-петербурге .
заказ саженцев rodnoisad.ru .
семена почтой дешево https://semenaplus74.ru/ .
интернет магазин семена россии каталог интернет магазин семена россии каталог .
[url=https://roberto-firmino-ar.biz]https://www.roberto-firmino-ar.biz[/url]
last news about roberto firmino
https://roberto-firmino-ar.biz
Как не попасть впросак при покупке диплома колледжа или ПТУ в России
ledeia.flybb.ru/viewtopic.php?f=2&t=282
купить диплом образования в волгограде [url=https://1oriks-diplom199.ru/]1oriks-diplom199.ru[/url] .