ಮೈಸೂರು, ಅ.15- ನಾಡಹಬ್ಬ ದಸರಾ (Mysuru Dasara) ಮಹೋತ್ಸವ ಅಂಗವಾಗಿ 10 ದಿನ ನಗರದ ವಿವಿಧೆಡೆ ನಡೆಯುವ ಕಾರ್ಯಕ್ರಮಗಳು, ಜಂಬೂಸವಾರಿ, ಪಂಜಿನ ಕವಾಯತು ಭದ್ರತೆಗಾಗಿ 7 ಸಾವಿರ ಮಂದಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ನಗರದ ಸಿವಿಲ್ ಪೊಲೀಸರು, ಸಂಚಾರ ಪೊಲೀಸರು, ಸಿಎಆರ್, ಡಿಎಆರ್, ಕೆಎಸ್ಆರ್ ಪಿ, ಅಶ್ವಾರೋಹಿ ದಳ, ಗೃಹ ರಕ್ಷಕದ ದಳದ ಸಿಬ್ಬಂದಿ ಸೇರಿ 2000 ಮಂದಿ ಸ್ಥಳೀಯ ಪೊಲೀಸರು ಭದ್ರತೆಗೆ ನಿಯೋಜಿಸಲಾಗಿದೆ.
ಹೊರ ಜಿಲ್ಲೆಗಳಿಂದ 4200 ಮಂದಿ ಪೊಲೀಸರು ಹಾಗೂ ಸಶಸ್ತ್ರ ಪಡೆಗಳು ಸೇರಿದಂತೆ ಒಟ್ಟಾರೆ 7 ಸಾವಿರ ಮಂದಿ ಪೊಲೀಸರು ದಸರಾ (Mysuru Dasara) ಭದ್ರತೆಗೆ ಕಾರ್ಯ ನಿರ್ವಹಿಸಲಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ತಿಳಿಸಿದ್ದಾರೆ ಹೊರ ಜಿಲ್ಲೆಗಳಿಂದ 1 ಡಿಐಜಿ, 11 ಎಸ್ಪಿ, 410 ಇತರೆ ಪೊಲೀಸ್ ಅಧಿಕಾರಿಗಳು, 3778 ಸಿಬ್ಬಂದಿ ಸೇರಿದಂತೆ ಒಟ್ಟು 4200 ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಅಲ್ಲದೆ, 30 ಕೆಎಸ್ಆರ್ ಪಿ, 20 ಎಎಸ್ಪಿ, 2 ಬಿಡಿಡಿಎಸ್, 1 ಗರುಡಾ ಪಡೆ ಸಹ ನಿಯೋಜಿಸಲಾಗಿದೆ.
ದಸರಾ ಮಹೋತ್ಸವ ಅ.15 ರಿಂದ 24 ರವರೆಗೆ ನಡೆಯಲಿದ್ದು, ಚಾಮುಂಡಿಬೆಟ್ಟದಲ್ಲಿ ದಸರಾ ಉದ್ಘಾಟನೆ, ಅರಮನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ದಸರಾ ವಸ್ತುಪ್ರದರ್ಶನ, ಕುಸ್ತಿ, ಫಲಪುಷ್ಪ ಪ್ರದರ್ಶನ, ಆಹಾರ ಮೇಳ, ಪುಸ್ತಕ ಮೇಳ, ದೀಪಾಲಂಕಾರ, ಯುವ ದಸರಾ, ಏರ್ ಶೋ, ಜಂಬೂಸವಾರಿ ಮೆರವಣಿಗೆ, ಬನ್ನಿಮಂಟಪದಲ್ಲಿ ಪಂಜಿನ ಕವಾಯತು ಹಾಗೂ ನಗರದ ವಿವಿಧ ಸ್ಥಳಗಳಲ್ಲಿ ನಡೆಯುವ ಇತರೆ ಕಾರ್ಯಕ್ರಮಗಳಿಗೆ ಮತ್ತು ಅಗತ್ಯ ಬಂದೋಬಸ್ತ್ ವ್ಯವಸ್ಥೆ ಸಂಬಂಧ ರಾಜ್ಯದ ಹೊರ ಘಟಕಗಳಿಂದ ಅಧಿಕಾರಿ ಮತ್ತು ಸಿಬ್ಬಂದಿ ನಿಯೋಜಿಸಲಾಗಿದೆ.
ನಗರದ ಅಧಿಕಾರಿ ಮತ್ತು ಸಿಬ್ಬಂದಿ ಸೇರಿದಂತೆ ಹೊರ ಜಿಲ್ಲೆಗಳಿಂದ ಅಧಿಕಾರಿ ಮತ್ತು ಸಿಬ್ಬಂದಿ ಈ ಬಂದೋಬಸ್ತ್ ಕರ್ತವ್ಯಗಳಿಗೆ ನಿಯೋಜಿಸಲಾಗುತ್ತಿದ್ದು, ಹೊರ ಜಿಲ್ಲೆಗಳಿಂದ 4200 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ನೇಮಿಸಲಾಗಿದೆ. ಸಶಸ್ತ್ರ ಪಡೆಗಳ, ವಿಧ್ವಂಸಕ ಕೃತ್ಯ ಪತ್ತೆ ದಳಗಳು, ಬಾಂಬ್ ನಿಷ್ಕ್ರಿಯ ದಳ ಮತ್ತು ವಿಶೇಷ ಗರುಡಾ ಪಡೆ ಸಹ ಭದ್ರತೆಗಾಗಿ ನಿಯೋಜಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.


4 ಪ್ರತಿಕ್ರಿಯೆಗಳು
betmgm bet 10 get 200 betmgm-play bet mgm casino
Sweet Bonanza combines cute visuals with serious winning power — perfect for casual and sweet bonanza 1000 strategy high-rollers alike. Ante bet or bonus buy? You decide. Spin and win!
Why wait? Chumba Casino is giving new players macumba to kick things off. Enjoy huge variety of games and real cash prize potential today!
The casino that turned $0.20 into $2,000,000+ live on stake crash stream — multiple times. Anything can happen here.