Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಪತಿಯ ಅಸಹಜ ನಡವಳಿಕೆ-ಠಾಣೆ ಮೆಟ್ಟಿಲೇರಿದ ಪತ್ನಿ | Bangalore News
    ಕಾನೂನು

    ಪತಿಯ ಅಸಹಜ ನಡವಳಿಕೆ-ಠಾಣೆ ಮೆಟ್ಟಿಲೇರಿದ ಪತ್ನಿ | Bangalore News

    vartha chakraBy vartha chakraಅಕ್ಟೋಬರ್ 16, 20231 ಟಿಪ್ಪಣಿ2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಬೆಂಗಳೂರು, ಅ.16- ತನ್ನ ಸ್ನೇಹಿತರ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವಂತೆ ಪತಿರಾಯನೊಬ್ಬ ಪತ್ನಿಗೆ ಒತ್ತಾಯಿಸಿದ್ದು ಇದರಿಂದ ಅಘಾತಕ್ಕೊಳಗಾದ ಪತ್ನಿ ಅಮೃತಹಳ್ಳಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
    ತನ್ನ ಮೂರು ಜನ ಸ್ನೇಹಿತರ ಜೊತೆ ಲೈಂಗಿಕ ಸಂಪರ್ಕ ಬೆಳೆಸುವಂತೆ ಪತಿ ಒತ್ತಾಯಯಿಸಿದ್ದಾನೆ ಎಂದು ಪತ್ನಿ (ಮಂಗಳೂರು ಮೂಲದ ಮಹಿಳೆ) ಆರೋಪಿಸಿ ದೂರು ಸಲ್ಲಿಸಿದ್ದಾರೆ.
    ಅಲ್ಲದೇ ಈ ಹಿಂದೆ ಪತಿಯ ವಾಟ್ಸಪ್ ಚೆಕ್ ಮಾಡಿದಾಗ ಅನೇಕ ಅಶ್ಲೀಲ ಮೆಸೇಜ್ ಹಾಗೂ ಲೈಂಗಿಕ ಕಾರ್ಯಕರ್ತೆಯರ ಬೆಲೆ ಬಗ್ಗೆ ಚಾಟ್ ಗಳಿದ್ದವು.

    ಇದನ್ನು ಪ್ರಶ್ನಿಸಿದಾಗ ಬೆದರಿಕೆ ಹಾಕಿದ್ದ ಎಂದು ಮಹಿಳೆ ಆರೋಪಿಸಿದ್ದಾಳೆ. ಸದ್ಯ ಈ ಬಗ್ಗೆ ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
    ಹಲವು ವರ್ಷಗಳ ಹಿಂದೆಯೇ ವಿವಾಹವಾಗಿದ್ದ ಈ ದಂಪತಿಗೆ 11 ವರ್ಷದ ಪುತ್ರ ಸೇರಿ ಇಬ್ಬರು ಮಕ್ಕಳಿದ್ದಾರೆ. ಈ ನಡುವೆ ಪತಿರಾಯನ ಅಸಹಜ ನಡವಳಿಕೆ ಶುರುವಾಗಿದ್ದು ಈಗ ತನ್ನ ಸ್ನೇಹಿತರೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಬೇಡಿಕೆ ಇಟ್ಟಿದ್ದಾನೆ. ಇದಕ್ಕೆ ನಿರಾಕರಿಸಿದ ಹಿನ್ನಲೆಯಲ್ಲಿ ತನಗೆ ಬೆದರಿಕೆ ಹಾಕಿದ್ದಾರೆ ಅಷ್ಟೇ ಅಲ್ಲ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

    ಮಹಿಳೆ ಕೊಟ್ಟ ದೂರು:
    ದೂರುದಾರ ಮಹಿಳೆಗೆ ಕಳೆದ 2007 ರ ಮೇ.10 ರಂದು ಮಂಗಳೂರು ಮೂಲದ ವ್ಯಕ್ತಿಯೊಂದಿಗೆ ಮದುವೆಯಾಗಿದ್ದು, ವಿಕ್ರಮ್ ಹಾಗೂ ತಾನ್ಯ ಎನ್ನುವ ಎರಡು ಮಕ್ಕಳಿವೆ. ಮಂಗಳೂರಿನಲ್ಲಿ ವಾಸವಿದ್ದು, ಗಂಡ ಮನೆಯಲ್ಲಿ ಚಿಕ್ಕಪುಟ್ಟ ವಿಚಾರಕ್ಕೆ ಗಲಾಟೆ ಮಾಡುತ್ತಿದ್ದರು. ನನಗೆ ಸರಿಯಾದ ಸಮಯ ಕೊಡದೇ ಕಿರಿಕಿರಿ ಮಾಡುತ್ತಿದ್ದರು.
    ನಾನು ಕೆಲಸದ ಒತ್ತಡದಲ್ಲಿ ಇರುತ್ತಾರೆಂದು ಹೊಂದಿಕೊಂಡು ಹೋಗುತ್ತಿದ್ದೆ. ನಂತರ ನಾನು ನನ್ನ ಪತಿ ಹಾಗೂ ಮಕ್ಕಳು ಮಂಗಳೂರಿನ ಡಿಸಿ ಬಂಗಲೆ ಹತ್ತಿರದ ಮನೆಯೊಂದಕ್ಕೆ ಶಿಫ್ಟ್ ಆಗಿದ್ದೆವು.
    ಆ ಸಂದರ್ಭದಲ್ಲಿ ನನ್ನ ಪತಿ ತನ್ನ ಐ ಫೋನ್ ಅನ್ನು ಮಕ್ಕಳಿಗೆ ಆಟವಾಡಲು ಕೊಟ್ಟಿದ್ದರು. ಇನ್ನು ನನ್ನ ಫೋನ್ ಹಾಳಾಗಿದ್ದರಿಂದ ಗಂಡನ ಇನ್ನೊಂದು ಫೋನ್ ಉಪಯೋಗಿಸುತ್ತಿದ್ದೆ. ಆ ವೇಳೆ ವಾಟ್ಸಪ್ ಚಾಟ್ ತೆಗೆದು ನೋಡಿದಾಗ ತನ್ನ ಸ್ನೇಹಿತರಾದ ಬಾಬು, ಅನಂತ ಕುಮಾರ್ ಹಾಗೂ ವಿರೇಂದ್ರ ಎಂಬುವರೊಂದಿಗೆ ನನ್ನ ಜೊತೆ ದೈಹಿಕ ಸಂಬಂಧ ಹೊಂದಿರುವ ಬಗ್ಗೆ ಹೇಳಿಕೊಂಡಿರುವುದು ಕಂಡುಬಂದಿದೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

    ಅಲ್ಲದೇ ಬೇರೆ ಬೇರೆ ಸೆಕ್ಸ್ ವರ್ಕರ್ಗಳೊಂದಿಗೆ ಬೆಲೆ ಬಗ್ಗೆ ಮಾತನಾಡಿರುವ ಚಾಟಿಂಗ್ ಮಾಡಿರುವುದನ್ನು ಕಂಡು ನಾನು ಈ ಬಗ್ಗೆ ಪತಿಯನ್ನು ಕೇಳಿದ್ದೆ. ಆದರೆ, ನನ್ನ ಗಂಡ ಗಲಾಟೆ ಮಾಡಿ ಅದು ನನ್ನ ಇಷ್ಟ. ಏನಾದರೂ ಮಾಡಿಕೊಳ್ಳುತ್ತೇನೆ. ಈ ಬಗ್ಗೆ ಯಾರಿಗಾದರೂ ಹೇಳಿದರೆ ನಿನ್ನ ಸಾಯಿಸಿ ಬಿಡುತ್ತೇನೆ ಎಂದು ಬೆದರಿಕೆ ಹಾಕಿ ಹೊಡೆದಿದ್ದಾರೆ. ಹಾಗೇ ಇದನ್ನು ಪಬ್ಲಿಕ್ ಮಾಡಿದರೆ ನಿನಗೆ ನಿನ್ನ ಮಕ್ಕಳಿಗೆ ಯಾವುದೇ ಜೀವನಾಂಶ ಕೊಡುವುದಿಲ್ಲ. ಆಗ ನೀನು ನಿನ್ನ ಮಕ್ಕಳು ಬೀದಿಗೆ ಬೀಳುತ್ತೀರಾ ಎಂದು ಹೆದರಿಸಿದ್ದಾರೆ.

    ಆದರೂ ಸಹ ಈ ಬಗ್ಗೆ ನಮ್ಮ ತಂದೆ-ತಾಯಿ ಹೇಳಿದ್ದೆ. ಅವರು ಎಲ್ಲರನ್ನೂ ಸೇರಿಸಿ ಬುದ್ಧಿವಾದ ಹೇಳಿದ್ದರು. ಆದರೂ ಅವರು ಮೊದಲಿನಂತೆ ಮತ್ತೆ ಹಳೇ ಚಾಳಿ ಮುಂದುವರೆಸಿ ನನ್ನ ಸರಿಯಾಗಿ ನೋಡಿಕೊಳ್ಳದೇ ಕಡೆಗಣಿಸಿದ್ದು, ಆಗ ನಾನು ನನ್ನ ಮಕ್ಕಳನ್ನು ಕರೆದುಕೊಂಡು ಬೆಂಗಳೂರಿಗೆ ಬಂದು ನಮ್ಮ ತಂದೆ-ತಾಯಿಯೊಂದಿಗೆ ವಾಸವಿದ್ದೆ. ಆ ಸಮಯದಲ್ಲಿ ಮತ್ತೆ ಹಿರಿಯರೆಲ್ಲ ಸೇರಿ ರಾಜಿ ಪಂಚಾಯಿತಿ ಮಾಡಿಸಿದ್ದರು. ಬಳಿಕ ಬೆಂಗಳೂರಿನ ಆರ್ಎಂ ಜೆಡ್ ಲ್ಯಾಟಿಟ್ಯೂಡ್ನಲ್ಲಿ ಪ್ಲ್ಯಾಟ್ ಖರಿದೀಸಿ ಅಲ್ಲಿಗೆ ಕರೆದುಕೊಂಡು ಹೋಗಿದ್ದ. ಆದರೂ ಸಹ ಗಂಡ ನನ್ನೊಂದಿಗೆ ಸರಿಯಾಗಿ ಸಂಸಾರ ಮಾಡದೇ ಆಗಾಗ ಮನೆಗೆ ಬಂದು ನೀನು ನನ್ನ ಇತರೆ ಸ್ನೇಹಿತರೊಂದಿಗೆ ಲೈಂಗಿಕ ಸಂಪರ್ಕ ಮಾಡುವಂತೆ ಹೇಳಿದ್ದ. ಇದಕ್ಕೆ ನಾನು ಒಪ್ಪದೇ ಇದ್ದಾಗ ನನ್ನೊಂದಿಗೆ ಗಲಾಟೆ ಮಾಡಿ ಮಾನಸಿಕ ದೈಹಿಕ ಕಿರುಕುಳ ನೀಡಿದ್ದಾರೆ. ಅಲ್ಲದೇ ನಿನ್ನ ಜೀವನಕ್ಕೆ ಯಾವುದೇ ಹಣಕಾಸಿನ ಸಹಾಯ ಮಾಡುವುದಿಲ್ಲ ಎಂದು ಹದರಿಸಿ ನನಗೆ ಜೀವ ಬೆದರಿಕೆ ಹಾಕಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

    Verbattle
    Verbattle
    Verbattle
    Bangalore bangalore news Karnataka News Trending ಮದುವೆ
    Share. Facebook Twitter Pinterest LinkedIn Tumblr Email WhatsApp
    Previous Articleಸುಧಾ ಮೂರ್ತಿ ಹೆಸರಲ್ಲಿ ವಂಚಿಸಿದ ಅರ್ಚಕ | Sudha Murthy
    Next Article ATM ಸರ್ಕಾರದ ಸಾರಥಿ ಸಿದ್ದರಾಮಯ್ಯ? | ATM Sarkara
    vartha chakra
    • Website

    Related Posts

    ಸತ್ತವಳು ಎದ್ದು ಬಂದಾಗ!

    ಫೆಬ್ರವರಿ 15, 2026

    ಕಪ್ಪೆ ವಿಷದಿಂದ ಪ್ರತಿಪಕ್ಷ ನಾಯಕನ ಹತ್ಯೆ!

    ಫೆಬ್ರವರಿ 15, 2026

    ಬೆಂಗಳೂರಿನಲ್ಲಿ ಬಡ ವಿದ್ಯಾರ್ಥಿಗಳ ಹಾಸ್ಟೆಲ್‌ಗೆ ಜಾಗ ಮಂಜೂರು: ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ

    ಫೆಬ್ರವರಿ 14, 2026

    Leave A Reply Cancel Reply

    Verbattle
    ವಿಭಾಗಗಳು
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಮಹಾಶಿವರಾತ್ರಿ ವಿಶೇಷ: ‘ಶಿವ’ ಎಂದರೆ ಶೂನ್ಯವೂ ಹೌದು, ಅನಂತವೂ ಹೌದು!

    ಸತ್ತವಳು ಎದ್ದು ಬಂದಾಗ!

    ಕಪ್ಪೆ ವಿಷದಿಂದ ಪ್ರತಿಪಕ್ಷ ನಾಯಕನ ಹತ್ಯೆ!

    ಬೆಂಗಳೂರಿನಲ್ಲಿ ಬಡ ವಿದ್ಯಾರ್ಥಿಗಳ ಹಾಸ್ಟೆಲ್‌ಗೆ ಜಾಗ ಮಂಜೂರು: ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • LarryCax ರಲ್ಲಿ ಬೆಂಗಳೂರಿನಲ್ಲಿ ಡ್ರಗ್ಸ್ ಕಾರ್ಖಾನೆಗಳು!
    • https://aprenderfotografia.online/usuarios/codevip1xbet2026/profile/ ರಲ್ಲಿ ಟೊಮ್ಯಾಟೋ ಸಾಲಕ್ಕಾಗಿ ಲ್ಯಾಪ್ ಟಾಪ್ ಕದ್ದ.
    • LinwoodGah ರಲ್ಲಿ ವಿಬಿಜಿ ರಾಮ್ ಜಿ ಗೆ ವಿಶೇಷ ಅಧಿವೇಶನ
    Latest Kannada News

    ಮಹಾಶಿವರಾತ್ರಿ ವಿಶೇಷ: ‘ಶಿವ’ ಎಂದರೆ ಶೂನ್ಯವೂ ಹೌದು, ಅನಂತವೂ ಹೌದು!

    ಫೆಬ್ರವರಿ 15, 2026

    ಸತ್ತವಳು ಎದ್ದು ಬಂದಾಗ!

    ಫೆಬ್ರವರಿ 15, 2026

    ಕಪ್ಪೆ ವಿಷದಿಂದ ಪ್ರತಿಪಕ್ಷ ನಾಯಕನ ಹತ್ಯೆ!

    ಫೆಬ್ರವರಿ 15, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.