ಬೆಂಗಳೂರು, ಅ.24- ರಾಜ್ಯದ ಆಂತರಿಕ ಭದ್ರತಾ ವಿಭಾಗದ ಐಜಿಪಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್ (Roopa Moudgil) ಅವರು ನವರಾತ್ರಿ ಅಂಗವಾಗಿ ವಿಶೇಷ ಫೋಟೋ ಶೂಟ್ ಮಾಡಿಸಿದ್ದಾರೆ.
ದಸರಾ ಹಾಗೂ ನವರಾತ್ರಿ ಅಂಗವಾಗಿ ವಿಶೇಷ ಫೋಟೋ ಶೂಟ್ ಮಾಡಿಸಿದ ಐಜಿಪಿ ಡಿ. ರೂಪಾ ಮೌದ್ಗಿಲ್ ಅವರು ಥೇಟ್ ಮಹಾರಾಣಿಯಂತೆ ಕಂಗೊಳಿಸಿದ್ದಾರೆ. ಐಪಿಎಸ್ ಅಧಿಕಾರಿ ಡಿ. ರೂಪಾ ಖಡ್ಗವನ್ನು ಹಿಡಿದು ರಾಣಿಯಂತೆ ಪೋಸ್ ನೀಡಿ ಫೋಟೋ ಶೂಟ್ ಮಾಡಿಸಿಕೊಂಡ ಬಗ್ಗೆ ಪೋಸ್ಟ್ ಮಾಡಿಕೊಂಡಿರುವ ಫ್ಯಾಷನ್ ಡಿಸೈನರ್ ಭಾರ್ಗವಿ ಅವರು, ರೂಪಾ ಮೌದ್ಗಿಲ್ ಅವರು ಶಕ್ತಿ, ಅನುಗ್ರಹ ಮತ್ತು ಸಬಲೀಕರಣದ ಸಾಕಾರ ಎಂದು ಹೇಳಿದ್ದಾರೆ.
ರೂಪಾ ಮೌದ್ಗಿಲ್ ಅವರು ಪೋಸ್ಟ್ ಮಾಡಿದ ಪೋಟೋಗಳನ್ನು ನೋಡಿದರೆ ಶಿವಾಜಿ ಮಹಾರಾಜರ ತಾಯಿ ಜೀಜಾಭಾಯಿ ನೆನಪಾಗುತ್ತಿದೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ನಮ್ಮ ನಡೆ ನುಡಿ ಸತ್ಯವಾಗಿದ್ದಾಗ ಯಾವುದೇ ಕ್ಷೇತ್ರವನ್ನು ವಶಪಡಿಸಿಕೊಳ್ಳಬಹುದು. ನಮ್ಮ ನೈಜ ಜಗತ್ತಾಗಿರುವ ಆತ್ಮವನ್ನೂ ಗೆಲ್ಲಬಹುದು ಎಂದು ಭಾರ್ಗವಿ ಪೋಸ್ಟ್ ಮಾಡಿಕೊಂಡಿದ್ದಾರೆ.
ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್ ಅವರ ಫೋಟೋಗಳನ್ನು ನೋಡಿದ ನೆಟ್ಟಿಗರು ವಾಹ್… ಡಾಮಿನೇಟಿಂಗ್ ಬ್ಯೂಟಿ ಎಂದು ಕಮೆಂಟ್ ಮಾಡಿದ್ದಾರೆ.