ಬೆಂಗಳೂರು, ಅ.27- ಖ್ಯಾತ ಫ್ಯಾಶನ್ ಡಿಸೈನರ್ ಪ್ರಸಾದ್ ಬಿದ್ದಪ ಅವರ ಪುತ್ರ ಆ್ಯಡಂ ಬಿದ್ದಪ (Adam Bidappa) ಕಂಠಪೂರ್ತಿ ಕುಡಿದು ವಾಹನ ಚಲಾಯಿಸಿ ರಸ್ತೆಯಲ್ಲಿ ಗಲಾಟೆ,ರಂಪಾಟ ಮಾಡಿ ಯಲಹಂಕ ಉಪನಗರ ಪೊಲೀಸರಿಂದ ಬಂಧಿತನಾಗಿದ್ದಾನೆ.
ಕಳೆದ ಅ.26 ರ ರಾತ್ರಿ ಯಲಹಂಕದ ರಸ್ತೆಯಲ್ಲಿ ಕಂಠಪೂರ್ತಿ ಕುಡಿದು ಕಾರಿನಲ್ಲಿ ಬಂದು ರಂಪಾಟ ಮಾಡುತ್ತಿದ್ದ ಆ್ಯಡಂ ಬಿದ್ದಪ. ಕಾನೂನು ಸುವ್ಯವಸ್ಥೆ ಹಾಗೂ ಸಂಚಾರ ಎರಡೂ ವಿಭಾಗದ ಪೊಲೀಸರು ಬಂದರೂ ಈತನನ್ನು ಹತೋಟಿಗೆ ತರಲು ಸಾಧ್ಯವಾಗಿಲ್ಲ.
ಆ್ಯಡಂ ಬಿದ್ದಪ (Adam Bidappa) ಕಂಠಪೂರ್ತಿ ಕುಡಿದು ಅಡ್ಡಾದಿಡ್ಡಿ ವಾಹನ ಚಲಾಯಿಸುತ್ತಿದ್ದರು. ಈ ವೇಳೆ ಹಿಂದಿನಿಂದ ರಾಹುಲ್ ಎಂಬವರು ದಾರಿ ಬಿಡುವಂತೆ ಕಾರ್ ಹಾರನ್ ಮಾಡಿ ಕೇಳಿದ್ದಾರೆ. ಅಷ್ಟಕ್ಕೇ ರಸ್ತೆ ಬ್ಲಾಕ್ ಮಾಡಿ ಆ್ಯಡಂ ಗಲಾಟೆ ಎಬ್ಬಿಸಿದ್ದಾನೆ. ಕೂಡಲೇ ರಾಹುಲ್ ಪೊಲೀಸ್ ತುರ್ತು ಸಂಖ್ಯೆ 112ಕ್ಕೆ ಕರೆ ಮಾಡಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರ ಜೊತೆ ಸಹ ಅ್ಯಡಂ ಬಿದ್ದಪ ಕೂಗಾಡಿದ್ದಾರೆ. ಯಲಹಂಕ ಸಂಚಾರ ಪೊಲೀಸರು ಸ್ಥಳಕ್ಕೆ ಬಂದಿದ್ದು, ಪರಿಶೀಲಿಸಲಾಗಿ ಆ್ಯಡಂ ಕಂಠಪೂರ್ತಿ ಕುಡಿದಿರುವುದು ಪತ್ತೆಯಾಗಿದೆ. ಈ ವೇಳೆ ಯಲಹಂಕ ಸಂಚಾರ ಪೊಲೀಸರು ಆತನ ಕಾರ್ ಸೀಜ್ ಮಾಡಿದ್ದಾರೆ.
ಬಳಿಕ ಆ್ಯಡಂನನ್ನು ಯಲಹಂಕ ನ್ಯೂಟೌನ್ ಪೊಲೀಸರು ಬಂಧಿಸಿ ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.
ರಾಹುಲ್ ದೂರಿನ ಹಿನ್ನೆಲೆಯಲ್ಲಿ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದುರ್ವರ್ತನೆ ದೂರು ದಾಖಲಾಗಿದೆ. ಮದ್ಯ ಸೇವಿಸಿ ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿದ ಪ್ರಕರಣ ಸಂಚಾರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಆ್ಯಡಂನನ್ನು ವೈದ್ಯಕೀಯ ತಪಾಸಣೆ ಮಾಡಿಸಲಾಗಿದೆ.
ಕಳೆದ ವರ್ಷ ಈತ ಕನ್ನಡ ಚಿತ್ರನಟಿಯೊಬ್ಬರಿಗೆ ಅಶ್ಲೀಲ ಸಂದೇಶಗಳನ್ನು ಕಳಿಸಿದ್ದು ಸುದ್ದಿಯಾಗಿತ್ತು. ಆಕೆ ಕೇಸು ದಾಖಲಿಸಿದ್ದು, ಪೊಲೀಸರು ಆಡಂನನ್ನು ಬಂಧಿಸಿದ್ದರು. ನಂತರ ಈತ ಜಾಮೀನಿನ ಮೇಲೆ ಹೊರಗೆ ಬಂದಿದ್ದ.


1 ಟಿಪ್ಪಣಿ
Entre no Mostbet e deixe a diversГЈo tomar conta de tudo – https://mostbetpt.pro/ , No Mostbet cada novo dia traz mais emoГ§ГЈo e mais recompensas .