ಬೆಂಗಳೂರು – ಕೆಇಎ (KEA) ಪರೀಕ್ಷೆಯಲ್ಲಿ ಅಕ್ರಮ ಎಸಗಿ, ತಲೆ ಮರೆಸಿಕೊಂಡಿರುವ ಪ್ರಕರಣದ ಕಿಂಗ್ ಪಿನ್ ಆರ್ ಡಿ ಪಾಟೀಲ್‌ನನ್ನು (ರುದ್ರಗೌಡ ಪಾಟೀಲ) ಪೊಲೀಸರು ಬಂಧಿಸಲು ಹರಸಾಹಸ ಪಡುತ್ತಿದ್ದಾರೆ.
ಬಂಧಿಸಲು ಬರುವ ಪೋಲಿಸರನ್ನು ದಿನ ದಿನ ಸಿನೆಮಾ ಶೈಲಿಯಲ್ಲಿ ಆರೋಪಿ ಆರ್ ಡಿ ಪಾಟೀಲ ಯಮಾರಿಸುತ್ತಿದ್ದಾನೆ. ಮಂಗಳವಾರ ಬಂಧಿಸಲು ಬಂದಿದ್ದ ಪೋಲಿಸರ ಕಣ್ಣು ತಪ್ಪಿಸಿ, ಕಾಂಪೌಂಡ್ ಜಿಗಿದು ಪರಾರಿಯಾಗಿದ್ದಾನೆ.
ಉತ್ತರ ಪ್ರದೇಶಕ್ಕೆ ಮೊಬೈಲ್ ರವಾಣೆ ನೆರೆಯ ಮಹಾರಾಷ್ಟ್ರ, ತೆಲಂಗಾಣ ಅಥವಾ ಉತ್ತರ ಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದಾನೆಂದು ಪೊಲೀಸರು ಊಹಿಸಿದ್ದರು. ಅದರಂತೆ ಕಿಂಗ್ಪಿನ್ ರುದ್ರಗೌಡ ಪಾಟೀಲ್ನ ಮೊಬೈಲ್ ಲೋಕೇಷನ್ ಉತ್ತರ ಪ್ರದೇಶದಲ್ಲಿ ಪತ್ತೆಯಾಗಿದೆ. ಆದರೆ, ಟವರ್ ಲೋಕೆಷನ್ ಜಾಡು ಹಿಡಿದು ಹೊರಟಿದ್ದ ಪೊಲೀಸರಿಗೆ ರುದ್ರಗೌಡ ಚಳ್ಳೇಹಣ್ಣು ತಿನ್ನಿಸಲು ತನ್ನ ಫೋನ್ ಬೇರೊಬ್ಬರಿಗೆ ನೀಡಿ ಉತ್ತರ ಪ್ರದೇಶಕ್ಕೆ ಕಳುಹಿಸಿ ತಾನು ಕಲಬುರಗಿಯಲ್ಲೇ ತಲೆಮರಿಸಿಕೊಂಡಿದ್ದಾನೆ.
ರುದ್ರಗೌಡ ಪಾಟೀಲ್ ಕಲಬುರಗಿಯಲ್ಲೇ ಇರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ಆತನನನ್ನು ಬಂಧಿಸಲು ತಾನು ವಾಸವಿದ್ದ ಅಪಾರ್ಟ್‌ಮೆಂಟ್‌ಗೆ ಬಂದಿದ್ದಾರೆ. ಪೊಲೀಸರ ವಾಸನೆ ಕಂಡು ಹಿಡಿದ ಆರ್ ಡಿ ಪಾಟೀಲ ಕೆಲವೇ ಕ್ಷಣಗಳಲ್ಲಿ ಕಪೌಂಡ್ ಹಾರಿ ಕೂದಲೆಳೆ ಅಂತರದಲ್ಲಿ ಪೊಲೀಸರಿಂದ ಎಸ್ಕೇಪ್ ಆಗಿದ್ದಾನೆ.
ಆರೋಪಿ ರುದ್ರಗೌಡ ಪಾಟೀಲ್ ಬಂಧನಕ್ಕೆ ಹುಡುಕಾಟ ಮುಂದುವರಿದಿದೆ. ನಾಲ್ಕು ವಿಶೇಷ ತಂಡಗಳು ಕಲಬುರಗಿ ಜಿಲ್ಲೆಯ ವಿವಿಧಡೆ ಮತ್ತು ಮಹಾರಾಷ್ಟ್ರ ಹಲವೆಡೆ ಹುಡುಕಾಟ ನಡೆಸುತ್ತಿವೆ. ಮಹಾರಾಷ್ಟ್ರದ ಸೊಲ್ಹಾಪುರ, ಪುಣೆಯಲ್ಲಿ ರುದ್ರಗೌಡ ಅಡಗಿರುವ ಶಂಕೆ ವ್ಯಕ್ತವಾಗಿದೆ.