ದೆಹಲಿಯಲ್ಲಿ ಮೈ ಕೊರೆಯುವ ಚಳಿ ದೆಹಲಿಯಲ್ಲಿ ಚಳಿ ದಿನೇ ದಿನೇ ಹೆಚ್ಚಾಗುತ್ತಿರುವಂತಿದೆ. ಶನಿವಾರದಂದು ದೆಹಲಿವಾಸಿಗಳು ವರ್ಷದ ಅತ್ಯಂತ ಕಡಿಮೆ ತಾಪಮಾನದ ದಿನಕ್ಕೆ ಸ್ವಾಗತ ಮಾಡಿ ಬೆಳಿಗ್ಗೆ ಗಂಟೆಯವರೆಗೆ ಕೊರೆಯುವ ಚಳಿಯಲ್ಲಿ ಒಂದಷ್ಟು ತಾಪಮಾನದ ಏರಿಕೆಗಾಗಿ ಕಾಯುತ್ತಾ ಕುಳಿತರು.
ಹವಾಮಾನ ಇಲಾಖೆಯ ಪ್ರಕಾರ ಇಂದು ಎಂದರೆ ಭಾನುವಾರ ಒಂದಷ್ಟು ತಾಪದ ಏರಿಕೆ ಯಾಗುವ ಸಂಭವ ಇತ್ತು ಆದರೆ ಭಾನುವಾರ ಬೆಳಿಗ್ಗೆ ಕೂಡ ತಾಪ ಮೂರು ಡಿಗ್ರಿ ಸೆಲ್ಸಿಯಸ್ ನ ಆಸುಪಾಸಲ್ಲಿ ಇದ್ದು ವಿಪರೀತ ಚಳಿ ದೆಹಲಿಗರ ಮೈಯನ್ನು ಕೊರೆಯುತ್ತಿದೆ. ಬಡವರು ವಸತಿಹೀನರು ಈ ಚಳಿಯಲ್ಲಿ ವಿಪರೀತ ಕಷ್ಟ ಅನುಭವಿಸುತ್ತಿದ್ದು ಯಾರೂ ಕೂಡ ಅವರ ನೆರವಿಗೆ ಹೋಗುತ್ತಿರುವಂತೆ ಕಂಡು ಬರುತ್ತಿಲ್ಲ. ಈ ಬಾರಿ ಉತ್ತರ ಭಾರತದಾದ್ಯಂತ ಚಳಿ ವಿಪರೀತವಿದ್ದು ಮೋಡ ಇಲ್ಲದ ಕಾರಣದಿಂದಾಗಿ ಚಳಿ ತುಸು ಹೆಚ್ಚಾಗಿಯೇ ಕಾಡುತ್ತಿದೆ ಎಂದು ಹೇಳಲಾಗಿದೆ.
ಅನೇಕ ಶಾಲಾ ಕಾಲೇಜುಗಳಿಗೆ ಈಗಾಗ್ಲೇ ರಜೆ ನೀಡಲಾಗಿದ್ದು ಅನೇಕರು ಆಫೀಸ್ ಮತ್ತು ಇತರೆಡೆ ಹೋಗುವುದನ್ನು ನಿಲ್ಲಿಸಿಬಿಟ್ಟಿದ್ದಾರೆ. ಅದಲ್ಲದೆ ಬೆಳಗ್ಗಿನ ಮಂಜಿನ ಕಾರಣದಿಂದಾಗಿ ವಾಹನ ಚಲಾಯಿಸುವುದು ಕೂಡ ಕಷ್ಟ ವಾಗಿ ಅನೇಕರು ರಜೆಗೆ ಶರಣಾಗಿದ್ದಾರೆ.