ವೂಟ್ ಸೆಲೆಕ್ಟ್ ನಿಂದ ಕನ್ನಡದ ಹೊಸ ವೆಬ್ ಸರಣಿ, `ಹನಿಮೂನ್’ ಪ್ರಸಾರ, ಟ್ರೈಲರ್ ಬಿಡುಗಡೆ! ಕನ್ನಡದ ಹೊಸ ವೆಬ್ ಸರಣಿ `ಹನಿಮೂನ್’ ಟ್ರ್ರೈಲರ್ ಬಿಡುಗಡೆಯಾಗಿದ್ದು, ನಟ ನಾಗಭೂಷಣ, ಸಂಜನಾ ಆನಂದ್, ಪವನ್ ಕುಮಾರ್, ಅಪೂರ್ವ ಭಾರದ್ವಾಜ್, ಆನಂದ್ ನೀನಾಸಂ ಮತ್ತು ಅರ್ಚನಾ ಕೊಟಿಗೆ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇದು ಲಘುಹಾಸ್ಯದ ಅಸಾಂಪ್ರದಾಯಿಕ ಭಾರತೀಯ ವಿವಾಹದ ಕಥೆಯಾಧಾರಿತವಾಗಿದ್ದು, ಸದ್ಯದಲ್ಲೇ ವೂಟ್ ಸೆಲೆಕ್ಟ್ನಲ್ಲಿ ಪ್ರಸಾರವಾಗಲಿದೆ. ಆರು ಕಂತುಗಳ ಹನಿಮೂನ್ ವೆಬ್ ಸೀರೀಸ್ ಅನ್ನು ಖ್ಯಾತ ನಟ ಶಿವರಾಜ್ ಕುಮಾರ್ ಅರ್ಪಿಸುತ್ತಿದ್ದಾರೆ. ಇದೇ ಮೇ 20ರಂದು ಬಿಡುಗಡೆಯಾಗಲಿರುವ ಈ ಹಾಸ್ಯಪ್ರಧಾನ ಪ್ರೇಮಕತೆಯನ್ನು ನೀವು ವೂಟ್ ಸೆಲೆಕ್ಟ್ನಲ್ಲಿ ನೋಡಿ ಆನಂದಿಸಬಹುದು