ಹಾಸನ,ಫೆ.15- ಮದ್ಯದ ಪಾರ್ಟಿ ವೇಳೆ ಕೇವಲ ಐವತ್ತು ರೂಗಾಗಿ ಉಂಟಾದ ಜಗಳ ಓರ್ವನ ಕೊಲೆಯಲ್ಲಿ(Murder) ಅಂತ್ಯವಾಗಿರುವ ದುರ್ಘಟನೆ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಹೋಬಳಿಯ ಅರುವನಹಳ್ಳಿಯಲ್ಲಿ ನಡೆದಿದೆ.
ಅರುವನಹಳ್ಳಿಯ ರಾಮಚಂದ್ರ ಸಂಜೀವಪ್ಪನವರ (42) ಕೊಲೆಯಾದವರು, ಕೃತ್ಯ ನಡೆಸಿದ ರುದ್ರಯ್ಯ ಕೊಂಗವಾಡ ರಾಮಚಂದ್ರನನ್ನು ಬಂಧಿಸಲಾಗಿದೆ.
ರುದ್ರಯ್ಯ ಹಾಗೂ ರಾಮಚಂದ್ರ ಬಾಗಲಕೋಟೆ ಜಿಲ್ಲೆ, ಬಾದಾಮಿ ಪಟ್ಟಣದ, ಕಳ್ಳಿಪೇಟೆ ಓಣಿಯ ನಿವಾಸಿಗಳಾಗಿದ್ದು, ಅವರಿಬ್ಬರೂ ಎರಡು ವಾರಗಳ ಹಿಂದೆ ಇಟ್ಟಿಗೆ ಕಾರ್ಖಾನೆಯಲ್ಲಿ ಕೂಲಿ ಕೆಲಸಕ್ಕೆ ಬಂದಿದ್ದರು. ಜತೆಯಾಗಿಯೇ ಕೆಲಸ ಮಾಡುವ ಉತ್ಸಾಹದಿಂದ ಅವರಿಬ್ಬರೂ ಅರುವನಹಳ್ಳಿ ಗ್ರಾಮದ ಕೆಪಿಐ ಇಟ್ಟಿಗೆ ಕಾರ್ಖಾನೆಗೆ ಬಂದಿದ್ದರು. ಕೆಲಸವನ್ನೂ ಮಾಡುತ್ತಿದ್ದರು.
ಈ ನಡುವೆ ನಿನ್ನೆ ರಾತ್ರಿ ಅವರಿಬ್ಬರೂ ಜತೆಯಾಗಿ ಕುಳಿತು ಕುಡಿಯಲು ಆರಂಭ ಮಾಡಿದ್ದಾರೆ. ಹಿಂದಿನಿಂದಲೂ ಗೆಳೆಯರಾಗಿದ್ದರಿಂದ ಹಲವಾರು ವಿಚಾರಗಳ ಬಗ್ಗೆ ಚರ್ಚೆ ನಡೆದಿದೆ. ಈ ನಡುವೆ, ಕುಡಿದ ಮತ್ತಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವೆ ಜಗಳ ಆರಂಭವಾಗಿದೆ. ಯಾವತ್ತೋ ತೆಗೆದುಕೊಂಡ 50 ರೂ. ವಿಚಾರದಲ್ಲಿ ಅವರಿಬ್ಬರೂ ಜಗಳ ಶುರು ಮಾಡಿದ್ದಾರೆ.
ಜಗಳ ವಿಕೋಪಕ್ಕೆ ರಾಮಚಂದ್ರನ ಮೇಲೆ ರುದ್ರಯ್ಯ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ರಾಮಚಂದ್ರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಶ್ರವಣಬೆಳಗೊಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
6 ಪ್ರತಿಕ್ರಿಯೆಗಳು
ремонт стиральных машин дома на выезде https://centr-remonta-stiralnyh-mashin.ru/ .
озвучание или озвучивание http://www.ozvuchivanie-pomeshhenij.ru .
Релокация в Испанию Релокация в Испанию .
Диплом вуза купить официально с упрощенным обучением в Москве
промокод продамус на 5000 http://www.promokod-prod.ru .
купить диплом в ярославле