ಮೈಸೂರು.ಏ,6: ತಮ್ಮ ವಿಭಿನ್ನ ರಾಜಕೀಯ ಶೈಲಿಯಿಂದ ಗಮನ ಸೆಳೆದಿರುವ ಹಿರಿಯ ನಾಯಕ ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಇದೀಗ ಮತ್ತೊಂದು ಆಶ್ಚರ್ಯಕರ ನಿಲುವಿನ ಮೂಲಕ ಸುದ್ದಿ ಮಾಡಿದ್ದಾರೆ.
ಮೈಸೂರು ಲೋಕಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ರಾಜವಂಶಸ್ಥ ಯದುವೀರ ಚಾಮರಾಜ ದತ್ತ ಒಡೆಯರ್ ಅವಿರೋಧವಾಗಿ ಲೋಕಸಭೆಗೆ ಆಯ್ಕೆಯಾಗಬೇಕು ಎಂದು ಪ್ರತಿಪಾದಿಸಿದ್ದಾರೆ.
ಆಶ್ಚರ್ಯಕರ ಬೆಳವಣಿಗೆಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಕುಮಾರ ಸ್ವಾಮಿ ತಮ್ಮ ಬೆಂಬಲಿಗರೊಂದಿಗೆ ಎಚ್ ವಿಶ್ವನಾಥ್ ಅವರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದರು.
ಬಿಜೆಪಿಯಿಂದ ವಿಧಾನಪರಿಷತ್ ಸದಸ್ಯರಾಗಿ ನಾಮಕರಣಗೊಂಡಿರುವ ವಿಶ್ವನಾಥ್ ಅವರು ಇತ್ತೀಚೆಗೆ ಬಿಜೆಪಿಯಿಂದ ಅಂತರ ಕಾಯ್ದುಕೊಂಡು ಕಾಂಗ್ರೆಸ್ ಪಾಳಯದಲ್ಲಿ ಗುರುತಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದರು. ಇದೀಗ ಅವರು ಕುಮಾರಸ್ವಾಮಿ ಅವರ ಜೊತೆ ಕಾಣಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.
ಎಚ್ ವಿಶ್ವನಾಥ್ ಅವರು ಪ್ರತಿನಿಧಿಸುವ ಮೈಸೂರು ಜಿಲ್ಲೆಯ ಕೆಆರ್ ನಗರ ವಿಧಾನಸಭೆ ಕ್ಷೇತ್ರ ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ಬರಲಿ ಹೀಗಾಗಿ ಕುಮಾರಸ್ವಾಮಿ ಅವರು ವಿಶ್ವನಾಥ್ ಅವರನ್ನು ಭೇಟಿ ಮಾಡಿ ಬೆಂಬಲ ಯಾಚಿಸಿದರು. ಈ ವೇಳೆಗೆ ಮಾಜಿ ಸಚಿವರಾದ ಸಾರಾ ಮಹೇಶ್ ಜಿ ಟಿ ದೇವೇಗೌಡ ಪುಟ್ಟರಾಜು ಸಾಥ್ ನೀಡಿದ್ದರು.
ಈ ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್ ವಿಶ್ವನಾಥ್ ರಾಜಕೀಯ ಎನ್ನುವುದು ನಿಂತ ನೀರಲ್ಲ ಅದು ಸದಾ ಹರಿಯುವ ಗಂಗೆ ರಾಜಕಾರಣದಲ್ಲಿ ಮಾತು, ಸಂಘರ್ಷ ಎಲ್ಲವೂ ಸಹಜ ಇದನ್ನೆಲ್ಲ ಒಂದೊಂದು ಸಾರಿ ಸರಿಪಡಿಸಿಕೊಳ್ಳಬೇಕು ಎಂದು ಹೇಳಿದರು.
ತಮ್ಮ ಹಾಗೂ ಮಾಜಿ ಸಚಿವ ಸಾರಾ ಮಹೇಶ್ ನಡುವಿನ ಭಿನ್ನಾಭಿಪ್ರಾಯ ಚಾಮುಂಡಿ ಬೆಟ್ಟಕ್ಕೆ ತಲುಪಿತ್ತು ಈಗ ಅದನ್ನೆಲ್ಲ ಮರೆತು ಜೊತೆಯಾಗಿದ್ದೇವೆ ಈ ಹಿಂದೆ ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್ ಜೆಡಿಎಸ್ ಸರ್ಕಾರ ಪತನಗೊಳ್ಳುವಲ್ಲಿ ತಾವು ಪ್ರಮುಖ ಪಾತ್ರ ನಿರ್ವಹಿಸಿದೆ ಅದನ್ನು ಮರೆತು ಕುಮಾರಸ್ವಾಮಿ ನನ್ನ ಮನೆಗೆ ಬಂದಿದ್ದಾರೆ ಇದೆ ಅಲ್ಲವೇ ರಾಜಕಾರಣದ ಸೌಂದರ್ಯ ಎಂದು ಬಣ್ಣಿಸಿದರು.
ಮಾಜಿ ಪ್ರಧಾನಿ ದೇವೇಗೌಡರು ನನಗೆ ಸದಾ ಸ್ಮರಣೀಯರು ಅವರು ನನಗೆ ನೀಡಿದ ರಾಜಕೀಯ ಪುನರ್ಜನ್ಮವನ್ನು ಎಂದಿಗೂ ಮರೆಯುವುದಿಲ್ಲ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ ಮಂತ್ರಿಗಳು ತಮ್ಮ ಕುಟುಂಬರ 17 ಜನರನ್ನು ಲೋಕಸಭೆ ಚುನಾವಣೆಗೆ ಕಣಕ್ಕಿಳಿದಿದ್ದಾರೆ ಹೀಗಾಗಿ ಇವರಾರು ದೇವೇಗೌಡರು ಮತ್ತು ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡಲು ಅರ್ಹರಲ್ಲ ಎಂದರು.
ದೇವೇಗೌಡರ ಕುಟುಂಬವನ್ನು ಸೋಲಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಡುತ್ತಿರುವ ದುರಹಂಕಾರದ ಮಾತುಗಳನ್ನು ನಿಲ್ಲಿಸಬೇಕು. ಅವರು ಮೈಸೂರಿನಿಂದ ತಮ್ಮ ಪುತ್ರ ಯತೀಂದ್ರ ನನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸಿದ್ದರು ಆದರೆ ಸಮೀಕ್ಷೆಯಲ್ಲಿ ಅವರ ವಿರುದ್ಧ ವರದಿ ಬಂದ ಹಿನ್ನೆಲೆಯಲ್ಲಿ ಲಕ್ಷ್ಮಣ್ ಅವರನ್ನು ಕಣಕ್ಕಿಳಿಸಿದ್ದಾರೆ ಎಂದು ತಿಳಿಸಿದರು.
ಮೈಸೂರಿನ ರಾಜ ಮನೆತನ ಕರ್ನಾಟಕಕ್ಕೆ ನೀಡಿದ ಕೊಡುಗೆಯನ್ನು ಯಾರು ಮರೆಯುವಂತಿಲ್ಲ ಅದರಲ್ಲೂ ಹಳೆ ಮೈಸೂರಿನ ಜನತೆಗೆ ಅವರು ಪ್ರಾತ:ಸ್ಮರಣೀಯರು ಇಂತಹ ಕುಟುಂಬದ ಸದಸ್ಯ ಯದುವೀರ್ ಅವರು ಮತದಾರರ ಮುಂದೆ ಹೋಗಿ ಮತ ಭಿಕ್ಷೆ ಕೇಳಬಾರದು ಅವರನ್ನು ಅವಿರೋಧವಾಗಿ ಸಂಸತ್ತಿಗೆ ಆಯ್ಕೆ ಮಾಡುವ ಮೂಲಕ ಆತ ಕುಟುಂಬಕ್ಕೆ ಗೌರವ ಸಲ್ಲಿಸಬೇಕು ಎಂದು ಹೇಳಿದರು.
4 ಪ್ರತಿಕ್ರಿಯೆಗಳು
Вывод из запоя в Алматы на дому Вывод из запоя в Алматы на дому .
оригинальные идеи для бизнеса оригинальные идеи для бизнеса .
поиск телефона по номеру телефона поиск телефона по номеру телефона .
клиника принудительного лечения алкоголизма [url=xn—–7kcablenaafvie2ajgchok2abjaz3cd3a1k2h.xn--p1ai]xn—–7kcablenaafvie2ajgchok2abjaz3cd3a1k2h.xn--p1ai[/url] .