ಬೆಂಗಳೂರು, ಏ.11: ಕಾಲ್ ಗರ್ಲ್ ಗಾಗಿ ಕರೆ ಮಾಡಿ ಎಂದು ತನ್ನ ಪತ್ನಿಯ ಫೋಟೊ ಮತ್ತು ಅವರು ಮೊಬೈಲ್ ನಂಬರನ್ನು ಸಾಮಾಜಿಕ ಜಾಲತಾಣದಲ್ಲಿ ಪೊಸ್ಟ್ ಮಾಡಿದ ಪತಿರಾಯ.
ಬೆಂಗಳೂರಿನ 40 ವರ್ಷದ ವ್ಯಕ್ತಿ ಹಾಗೂ 37 ವರ್ಷದ ಮಹಿಳೆ 2019ರಲ್ಲಿ ಪ್ರೀತಿಸಿ ಮದುವೆಯಾಗಿದ್ದಾರೆ. ತದನಂತರ ಇವರಿಬ್ಬರ ನಡುವೆ ಮನಸ್ತಾಪವುಂಟಾಗಿ, ಜಗಳವಾಗಿದ್ದು, ಪತಿಯಿಂದ ಮಹಿಳೆ ಪ್ರತ್ಯೇಕವಾಗಿ ವಾಸವಾಗಿದ್ದಾರೆ. ಅಷ್ಟೇ ಅಲ್ಲ ಇದೀಗ ವಿಚ್ಚೇದನ ಕೋರಿ ಇಬ್ಬರೂ ಕೋರ್ಟ್ ಮೊರೆ ಹೋಗಿದ್ದಾರೆ.
ಈ ನಡುವೆ ಆ ಮಹಿಳೆಯ ಮೊಬೈಲ್ ಗೆ ಕಾಲ್ ಗರ್ಲ್ ಬಗ್ಗೆ ವಿಚಾರಿಸಿ ಹಲವಾರು ಕರೆಗಳು ಬರುತೊಡಗಿದವು. ಅಷ್ಟೇ ಅಲ್ಲ ಆಕೆಯ ಸೋದರನ ಮೊಬೈಲ್ ಗೂ ಇದೇ ರೀತಿಯಲ್ಲಿ ಕರೆಗಳು ಬರ ತೊಡಗಿದವು.
ಇದು ಯಾಕೆ ಎಂದು ಅವರಿಬ್ಬರೂ ಪರಿಶೀಲಿಸಿದಾಗ ಸಾಮಾಜಿಕ ಜಾಲತಾಣದಲ್ಲಿ ಆ ಮಹಿಳೆಯ ಫೋಟೋ ಮತ್ತು ಅದರ ಕೆಳಗೆ ನಂಬರ್ ನಮೂದಿಸಿ ಕಾಲ್ ಗರ್ಲ್ ಬೇಕಾಗಿದ್ದರೆ ಸಂಪರ್ಕಿಸಿ ಎಂದು ಉಲ್ಲೇಖಿಸಲಾಗಿದೆ.
ಇದನ್ನು ಕಂಡು ಆತಂಕಗೊಂಡ ಅವರು ನಂದಿನಿ ಲೇಔಟ್ ಠಾಣೆಯ ಪೊಲೀಸರಿಗೆ ದೂರು ನೀಡಿದರು.
ಆ ದೂರಿನ ಬೆನ್ನು ಹತ್ತಿ ತನಿಖೆ ನಡೆಸಿದ ಪೊಲೀಸರಿಗೆ ಈ ರೀತಿಯ ಪೋಸ್ಟ್ ಹಾಕಿದ್ದು ಬೇರೆ ಯಾರು ಅಲ್ಲ ಮಹಿಳೆಯ ಪತಿ ಎಂದು ಗೊತ್ತಾಗಿದೆ. ವಿಚ್ಛೇದನ ಕೋರಿ ತನ್ನ ಪತ್ನಿ ಅರ್ಜಿ ಸಲ್ಲಿಸಿರುವುದರಿಂದ ಕೋಪಗೊಂಡು ಸೇಡು ತೀರಿಸಿಕೊಳ್ಳುವ ಸಲುವಾಗಿ ಈಕೆಯ ಪತಿ ಸಾಮಾಜಿಕ ಜಾಲತಾಣದಲ್ಲಿ ನಕಲಿ -ಫೇಸಬುಕ್ ಖಾತೆ ತೆರೆದು ಕಾಲ್ ಗರ್ಲ್ ಬೇಕಾದಲ್ಲಿ ಈ ನಂಬರ್ ಗೆ ಸಂಪರ್ಕಿಸಿ ಎಂದು ತನ್ನ ಪತ್ನಿಯ ಫೋಟೋ ಮತ್ತು ಮೊಬೈಲ್ ನಂಬರ್ ಹಾಕಿದ್ದಲ್ಲದೇ, ಆಕೆಯ ಸಹೋದರನ ಮೊಬೈಲ್ ಸಂಖ್ಯೆ ಸಹ ಪೊಸ್ಟ್ ಮಾಡಿದ್ದಾನೆ.
ಈ ರೀತಿ ಪತ್ನಿ ವಿರುದ್ಧವೇ ಪೊಸ್ಟ್ ಮಾಡಿರುವ ಆರೋಪಿ ವಿದೇಶಕ್ಕೆ ಪರಾರಿಯಾಗಿದ್ದಾನೆಂಬುದು ಗೊತ್ತಾಗಿದೆ.