ಬೆಂಗಳೂರು,ಜೂ.11-
ಮೆಡಿಕಲ್ ಸ್ಟೋರ್ ನಲ್ಲಿ ಕೆಲಸ ಮಾಡುತ್ತಿದ್ದ ರೇಣುಕಾಸ್ವಾಮಿ
ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೊತೆ ಅವರ ಗೆಳತಿ ನಟಿ ಪವಿತ್ರಗೌಡರನ್ನು ಬಂಧಿಸಲಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟಿ ಪವಿತ್ರಗೌಡರ ಪಾತ್ರವಿರುವುದು ತನಿಖೆಯಲ್ಲಿ ಪತ್ತೆಯಾದ ಬೆನ್ನಲ್ಲೇ ಆಕೆಯನ್ನು ಬಂಧಿಸಲಾಗಿದೆ.
ಕೊಲೆಯಾದ ಚಿತ್ರದುರ್ಗದ ರೇಣುಕಾಸ್ವಾಮಿ ಇನ್‌ಸ್ಟಾಗ್ರಾಮ್‌ನಲ್ಲಿ ಪವಿತ್ರಗೌಡರಿಗೆ ಅಶ್ಲೀಲವಾದ ಕಾಮೆಂಟ್ ಮತ್ತು ಮೇಸೆಜ್ ಹಾಕುತ್ತಿದ್ದ ಎನ್ನಲಾಗಿದೆ. ಇದರಿಂದ ಕೋಪಗೊಂಡ ಪವಿತ್ರಗೌಡ ದರ್ಶನ್ ಗೆ ಮಾಹಿತಿ ನೀಡಿದ್ದಾರೆ.
ಇದರಿಂದ ಆಕ್ರೋಶಗೊಂಡ ದರ್ಶನ್ ತನ್ನ ಹುಡುಗರಿಗೆ ಸೂಚನೆ ನೀಡಿದ್ದು,ಅದರಂತೆ ಆತನನ್ನು ಕರೆ ತಂದು ಹಲ್ಲೆ ಮಾಡಿದ ಬಳಿಕ, ಕೊಲೆ ಮಾಡಿ ಕಾಮಾಕ್ಷಿಪಾಳ್ಯದ ಬಳಿಯ ಮೋರಿ ಶವ ಎಸೆದು ಪರಾರಿಯಾಗಿದ್ದರು.
ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ ವೇಳೆಯಲ್ಲಿ ದರ್ಶನ್ ಮತ್ತು ಪವಿತ್ರಗೌಡ ಇರುವುದು ಪತ್ತೆಯಾದ ಹಿನ್ನಲೆಯಲ್ಲಿ ಪವಿತ್ರಗೌಡರನ್ನು ಬಂಧಿಸಲಾಗಿದೆ.
ಈ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್, ಅವರ ಗೆಳತಿ ಪವಿತ್ರಾಗೌಡ ಸೇರಿದಂತೆ ಹತ್ತು ಜನರನ್ನು ಬಂಧಿಸಲಾಗಿದೆ.
Previous Articleಕೊಲೆ ಆರೋಪದಲ್ಲಿ ನಟ ದರ್ಶನ್ ಬಂಧನ.
Next Article ಅಭಿಮಾನಿಯನ್ನೇ ಕೊಲೆ ಮಾಡಿಸಿದ್ರಾ ನಟ ದರ್ಶನ್.?
1 ಟಿಪ್ಪಣಿ
мелкий бизнес идеи http://www.biznes-idei13.ru/ .