ಯೂರೋಪ್: ಭಾರತದ ಗೋಧಿ ರಫ್ತು ನಿಷೇಧ ನಿರ್ಧಾರದ ಬಳಿಕ ಯುರೋಪ್ ರಾಷ್ಟ್ರಗಳಲ್ಲಿ ಸೋಮವಾರ(ಮೇ 16) ಗೋಧಿಯ ಬೆಲೆ ಗಗನಕ್ಕೇರಿದೆ.
ಯುರೋಪಿಯನ್ ಮಾರುಕಟ್ಟೆಯಲ್ಲಿ ಪ್ರತಿ ಟನ್ ಗೋಧಿಯ ಬೆಲೆ 435 ಯೂರೋಸ್ ($ 453)ಗೆ ಏರಿಕೆಯಾಗಿದೆ ಎಂದು ವರದಿಗಳು ಹೇಳಿವೆ. ಯುರೋಪ್ ರಾಷ್ಟ್ರಗಳಲ್ಲಿ ಈಗ ಪ್ರತಿ ಟನ್ ಗೋಧಿಗೆ 35,273 ರೂ. ಆಗಿದೆ.
ರಷ್ಯಾ-ಉಕ್ರೇನ್ ಯುದ್ಧ ಹಿನ್ನೆಲೆಯಲ್ಲಿ ಕಪ್ಪು ಸಮುದ್ರದ ವಲಯದಿಂದ ರಫ್ತು ಕಡಿಮೆಯಾಗಿದ್ದು, ಭಾರತದ ಮೇಲೆ ಗೋಧಿಯ ಅವಲಂಬನೆ ಯುರೋಪ್ ರಾಷ್ಟ್ರಗಳಲ್ಲಿ ಮತ್ತಷ್ಟು ಹೆಚ್ಚಾಗಿದೆ. ಹೀಗಾಗಿ ಭಾರತದ ನಿರ್ಧಾರ ಹಲವು ದೇಶಗಳ ಮೇಲೆ ಭಾರೀ ಪರಿಣಾಮ ಬೀರಿದೆ.
ಮಾರ್ಚ್ ವೇಳೆ ಉತ್ತರ ಭಾರತದಲ್ಲಿ ಬೀಸಿದ ಬಿಸಿ ಗಾಳಿಯಿಂದ ಭಾರೀ ಪ್ರಮಾಣದಲ್ಲಿ ಗೋಧಿ ಬೆಳೆ ನಷ್ಟವಾಗಿದೆ. ಇದರಿಂದಾಗಿ ಗೋಧಿ ಉತ್ಪಾದನೆಯ ಅಂದಾಜನ್ನು 111.3 ಟನ್‌ಗಳಿಂದ 105 ಮಿಲಿಯನ್ ಟನ್‌ಗಳಿಗೆ ಕಡಿತಗೊಂಡಿದೆ.
ಅಲ್ಲದೆ, ಏಪ್ರಿಲ್‌ನಲ್ಲಿ ಚಿಲ್ಲರೆ ಹಣದುಬ್ಬರವು 8 ವರ್ಷಗಳ ಗರಿಷ್ಠ ಮಟ್ಟ ಶೇ. 7.79ಕ್ಕೆ ಏರಿಕೆಯಾಗಿತ್ತು. ಹಣದುಬ್ಬರ ನಿಯಂತ್ರಿಸುವ ಉದ್ದೇಶದಿಂದ ಹಾಗು ಬೆಳೆ ನಷ್ಟ ಹಿನ್ನೆಲೆಯಲ್ಲಿ ಭಾರತ ಗೋಧಿ ರಫ್ತನ್ನು ನಿಷೇಧಿಸಿದೆ.
ಭಾರತದ ರಫ್ತು ನಿಷೇಧ ಎಫೆಕ್ಟ್: ಯುರೋಪ್‌ನಲ್ಲಿ ಗೋಧಿ ಬೆಲೆ ಗಗನಕ್ಕೆ
Previous Articleಹೊರಟ್ಟಿ ಇನ್ಮೇಲೆ ಬಿಜೆಪಿಗೆ…
Next Article ಭಾರತ ಮೂಲದ ದೇವಸಹಾಯಮ್‌ಗೆ ವ್ಯಾಟಿಕನ್ ಸಂತ ಪದವಿ