ಭಾನುವಾರ ಅಕ್ಟೋಬರ್ 27 ರಂದು ತಮಿಳುನಾಡಿನ ವಿಕ್ರವಾಂಡಿಯಲ್ಲಿ ಟಿವಿಕೆ ಪಕ್ಷದ ಮೊದಲ ರ್ಯಾಲಿಯಲ್ಲಿ ಸುಮಾರು ಐದರಿಂದ ಆರು ಲಕ್ಷ ಮಂದಿ ಭಾಗವಹಿಸಿದ್ದು ನಟ ವಿಜಯ್ ಅವರು ಈ ರ್ಯಾಲಿ ಮೂಲಕ ತಮ್ಮ ಪಕ್ಷದ ಪವರ್ ತೋರಿಸಿದ್ದಾರೆ.
ಈ ವೇಳೆ ಲಕ್ಷಾಂತರ ಜನರ ಎದುರು ಮಾತನಾಡಿದ ನಟ ದಳಪತಿ ವಿಜಯ್ ರವರು ಹಲವು ವಿಚಾರಗಳನ್ನು ಚರ್ಚಿಸಿದ್ದು ನನ್ನ ಕೆರಿಯರ್, ಸಂಭಾವನೆ ಎಲ್ಲ ಬಿಟ್ಟು ಬಂದಿದ್ದೇನೆ, ನಾನು ನಿಮ್ಮ ವಿಜಯ್! ನಿಮ್ಮನ್ನು ನಂಬಿದ್ದೇನೆ, ಎಂದು ಜನರ ಮುಂದೆ ತಮ್ಮ ಮನದಾಳದ ಮಾತು ಆಡಿದರು. ಜೊತೆಗೆ ಈ ವೇಳೆ ತಮ್ಮ ಭವಿಷ್ಯದ ಯೋಜನೆಗಳ ಬಗ್ಗೆಯೂ ತಿಳಿಸಿದರು.
ಮುಂದುವರೆದು ‘ವಿಜಯ್ ರಾಜಕೀಯದ ಯಾರ ಹೆಸರನ್ನು ಏಕೆ ತೆಗೆದುಕೊಂಡು ಮಾತನಾಡುವುದಿಲ್ಲ? ನಿಮಗೇನು ಭಯವೇ ಎಂಬ ಪ್ರಶ್ನೆಗೆ ಉತ್ತರಿಸಿದ್ದು ಯಾರ ಹೆಸರು ಹೇಳಿ ರಾಜಕೀಯ ಮಾಡಲು, ಮರ್ಯಾದೆ ಇಲ್ಲದೆ ಮಾತನಾಡಲು ನಾನು ಬಂದಿಲ್ಲ. ಡಿಸೆಂಟ್ ಆಗಿ ಮಾತನಾಡುತ್ತೇವೆ, ಡಿಸೆಂಟ್ ಆಗಿ ಅಪ್ರೋಚ್ ಮಾಡುತ್ತೇವೆ’ ಎಂದರು.
ತಮಿಳು ಸಿನಿಮಾ ರಂಗಕ್ಕೆ ಕಾಲಿಟ್ಟಾಗ ಎದುರಿಸಿದ ಎಲ್ಲ ಟೀಕೆಗಳನ್ನೂ, ಅವಮಾನಗಳನ್ನೂ ನೆನಪಿಸಿಕೊಂಡ ನಟ ವಿಜಯ್ ಅವರು ನನ್ನ ಸಿನಿಮಾ ಕೆರಿಯರ್ ನ ಆರಂಭದಲ್ಲಿ ನನ್ನ ಮುಖ ಚೆನ್ನಾಗಿಲ್ಲ. ನನ್ನ ಪರ್ಸನಾಲಿಟಿ ಚೆನ್ನಾಗಿಲ್ಲ, ನನ್ನ ಸ್ಟೈಲ್ ಚೆನ್ನಾಗಿಲ್ಲ, ನನ್ನ ಕೂದಲು, ನಡೆಯುವ ರೀತಿ ಯಾವುದೂ ಚೆನ್ನಾಗಿಲ್ಲ ಎಂದು ಅವಮಾನಿಸಿದ್ದರು. ಆದರೆ ಈ ಟೀಕೆಗಳು ನನ್ನ ಉತ್ಸಾಹವನ್ನು ಎಂದು ಕುಗ್ಗುವಂತೆ ಮಾಡಲಿಲ್ಲ. ಎಲ್ಲರೂ ಆಡಿದ ಅವಮಾನದ ಮಾತುಗಳನ್ನು ಸುಳ್ಳಾಗಿಸಿ ತನಗಾಗಿ ಒಂದು ಸ್ಥಾನ ಪಡೆಯಬೇಕೆಂದು ನಾನು ಶ್ರಮಿಸಿದೆ ಎಂದು ಹೇಳಿದ್ದು ‘ಈಗ ನಾನು ನನ್ನ ಕೆರಿಯರ್, ಸಂಭಾವನೆ ಎಲ್ಲ ಬಿಟ್ಟು ಇಲ್ಲಿ ಕೇವಲ ನಿಮ್ಮ ವಿಜಯ್ ಆಗಿ ಬಂದಿದ್ದೇನೆ, ನಿಮ್ಮೆಲ್ಲರ ಮೇಲೆ ನಂಬಿಕೆ ಇಟ್ಟು ಬಂದಿದ್ದೇನೆ’ ಎಂದು ನಟ ದಳಪತಿ ವಿಜಯ್ ಭಾಷಣದಲ್ಲಿ ಹೇಳಿದ್ದಾರೆ.
ಸೆಪ್ಟೆಂಬರ್ ನಲ್ಲಿ ನಟ ವಿಜಯ್ ಅವರು ಅತ್ಯಧಿಕ ಸಂಭಾವನೆ ಪಡೆಯುವ ನಟ ಎಂಬ ಸುದ್ದಿ ಬಂದಿತ್ತು. ನಟ ತಮ್ಮ ಮುಂಬವರುವ ಸಿನಿಮಾ ‘ದಳಪತಿ 69’ ಸಿನಿಮಾಗಾಗಿ ಬರೋಬ್ಬರಿ 275 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎಂದು ಹೇಳಲಾಗಿತ್ತು. ಆದರೆ ನಟ ಇಂಥಹ ಸಂಭಾವನೆ ಪಡೆಯೋ ಟೈಮ್ ನಲ್ಲೇ ಸಿನಿಮಾಗೆ ಬೈ ಬೈ ಹೇಳಿದ್ದಾರೆ. ಎಲ್ಲರಿಗೂ ಆಘಾತ ಉಂಟು ಮಾಡಿದೆ.


3 ಪ್ರತಿಕ್ರಿಯೆಗಳು
Betano dostarcza https://betanogame.org/pl/ ostatecznego dreszczyku. Nowi gracze zgarniają 100% do €500 + darmowe spiny. Kręć slotami Megaways lub obstawiaj na żywo swoje ulubione drużyny. Dołącz teraz.
No Mostbet a sorte encontra quem sabe aproveitar as melhores condiГ§Гµes – https://mostbetpt.pro/como-se-registrar/ , Mostbet – onde cada real depositado vale muito mais .
The night ends when your balance says so – https://gpdifluca.com/tikitaka-casino-bonus-2026/ , The only place where goosebumps pay real money .