ಈ ವಿಡಿಯೋದಲ್ಲಿ ನೀವು ನೋಡುವುದು ಸ್ಯಾನ್ ಫ್ರಾನ್ಸಿಸ್ಕೊ ನಗರದಲ್ಲಿ ಬೀದಿ ಬದಿಯಲ್ಲಿ ಕಾಣುವ ಜನರ ಪಾಡು. ಅವರಲ್ಲಿ ಕೆಲವರು ಗೊಂದಲಕ್ಕೊಳಗದಂತೆ, ಇನ್ನು ಕೆಲವರು ಚಲಿಸಲು ಸಾಧ್ಯವಾಗದ ರೀತಿಯಲ್ಲಿ ಮತ್ತು ಇನ್ನಿತರರು ಅಮಲೇರಿದ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಕೆಲವರು ಬೇರೆಯವರ ಮೇಲೆ ಬೀಳುತ್ತಿದ್ದಾರೆ, ಇನ್ನು ಕೆಲವರು ನೆಲದ ಮೇಲೆ ಮಲಗಿದ್ದಾರೆ. ಈ ವಿಡಿಯೋ ಮಾಡಿದ ಭಾರತೀಯ ಇಶಾನ್ ಶರ್ಮಾ ಅವರು ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋ ನಗರವನ್ನು ಅವರು ಭೇಟಿ ನೀಡಿದ “ಅತ್ಯಂತ ಅಸುರಕ್ಷಿತ ನಗರ” ಎಂದು ಕರೆದಿದ್ದಾರೆ. “ಅರ್ಧದಷ್ಟು ಬೀದಿಗಳು ಮನೆಯಿಲ್ಲದ, ಮಾನಸಿಕವಾಗಿ ಅಸ್ಥಿರರಾದ ಜನರಿಂದ ಕೂಡಿದ, ಹೆಚ್ಚಿನ ಮಾದಕ ದ್ರವ್ಯಗಳು ತುಂಬಿರುವ ಇಲ್ಲ ಅದೆಲ್ಲದರ ಸಂಯೋಜನೆಯಂತೆ ಕಾಣುತ್ತದೆ” ಎಂದು ಆ ನಗರದ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಇದು “ಟೆಕ್ ಬಂಡವಾಳಶಾಹಿಯ ಸ್ವರ್ಗ” ಎಂದು ಜನ ಕರೆದಿದ್ದರ ವೈಫಲ್ಯವಾಗಿದೆ ಎಂದು ಅವರು ಹೇಳಿದ್ದಾರೆ. ಇಂಥಾ ನಗರದಲ್ಲಿ ಈ ಸಮಸ್ಯೆಗಳು ಏಕೆ ಮುಂದುವರಿದಿವೆ ಎಂದು ಆಶ್ಚರ್ಯ ವ್ಯಕ್ತ ಪಡಿಸಿದ್ದಾರೆ.
Previous Articleಅಧಿಕಾರ ಹಂಚಿಕೆ ಸೂತ್ರ ಬಹಿರಂಗಪಡಿಸಿದ ತನ್ವೀರ್ ಸೇಠ್.
Next Article ಬನ್ನೇರುಘಟ್ಟ ಸುತ್ತ ಮುತ್ತ ಚಿರತೆ ಹಾವಳಿ.