ಬೆಂಗಳೂರು,ಜೂ.26:
ಮುಖ್ಯಮಂತ್ರಿ ಬದಲಾವಣೆ ಹಾಗೂ KPCC ಅಧ್ಯಕ್ಷರ ಬದಲಾವಣೆ ಕುರಿತಂತೆ ಚರ್ಚೆಗಳು ನಡೆದಿರುವ ಬೆನ್ನೆಲ್ಲೇ ಸಹಕಾರ ಮಂತ್ರಿ ಕೆ ಎನ್ ರಾಜಣ್ಣ ಕುತೂಹಲಕಾರಿ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾರೆ.
ರಾಜ್ಯದಲ್ಲಿ ಅಧಿಕಾರ ಕೇಂದ್ರಿತ ಸ್ಥಾನಗಳು ಹೆಚ್ಚಾಗಿವೆ. ಹೀಗಾಗಿ ಜಂಜಾಟಗಳು ಹೆಚ್ಚಾಗಿವೆ. ನವೆಂಬರ್ ವೇಳೆಗೆ ಮಹತ್ವದ ಬದಲಾವಣೆಯಾಗಲಿದ್ದು, ಎಲ್ಲವೂ ಸರಿಹೋಗಲಿದೆ ಎಂದು ತಿಳಿಸಿದರು
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿದ್ದರಾಮಯ್ಯ ಅವರು ಮೊದಲ ಅವಧಿಯಲ್ಲಿ ಮುಖ್ಯಮಂತ್ರಿ ಆಗಿದ್ದ ವೇಳೆ ಇದ್ದ ಖದರ್ ಮತ್ತು ವಾತಾವರಣ ಈಗ ಕಾಣುತ್ತಿಲ್ಲ ಅದಕ್ಕೆ ಪ್ರಮುಖ ಕಾರಣ ಪಕ್ಷ ಮತ್ತು ಸರ್ಕಾರದಲ್ಲಿ ಇರುವ ಪವರ್ ಸೆಂಟರ್ ಗಳು ಸದ್ಯದಲ್ಲಿಯೇ ಇವುಗಳು ಬದಲಾಗುತ್ತವೆ ಎಂದು ಹೇಳಿದರು
ಸರ್ಕಾರ ಮತ್ತು ಪಕ್ಷದಲ್ಲಿ ಜಂಜಾಟಗಳಿವೆ ಎಲ್ಲವನ್ನು ಸರಿದೂಗಿಸಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಹೋಗುತ್ತಿದ್ದಾರೆ ಇದೇ ರೀತಿ ಮುಂದುವರೆಯಲು ಸಾಧ್ಯವಿಲ್ಲ.ಹೈಕಮಾಂಡ್ ಎಲ್ಲವನ್ನೂ ಗಮನಿಸುತ್ತಿದ್ದು ಸೂಕ್ತ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು.
ಬರುವ ಆಗಸ್ಟ್ ನಿಂದ ನವಂಬರ್ ವೇಳೆಗೆ ಎಲ್ಲವೂ ಸರಿ ಹೋಗಲಿದೆ. ಇದರ ಸುಳಿ ಗಾಳಿ ಈಗಾಗಲೇ ಗೋಚರವಾಗಿದ್ದು ಸಾಕಷ್ಟು ಬದಲಾವಣೆಗಳು ಆಗಲಿವೆ ಎಂದು ಭವಿಷ್ಯ ನುಡಿದರು
Previous Articleವರ್ಷಾಂತ್ಯಕ್ಕೆ ಸರ್ಕಾರದಲ್ಲಿ ಬದಲಾವಣೆ ನಿಶ್ಚಿತ.
Next Article ಹುಲಿಗಳಿಗೆ ವಿಷವಿಕ್ಕಿದ ಪಾಪಿಗಳು.