ಬೆಂಗಳೂರು,ಆ.28- ಡ್ಯಾನಿಷ್ ರಾಜಧಾನಿ ಕೋಪೇನ್‌ಹೇಗನ್‌ನಲ್ಲಿ ನಡೆದ ಪ್ರತಿಷ್ಠಿತ ಐರನ್ ಮ್ಯಾನ್ ಟೈಫ್ಲಾನ್ ಸ್ಪರ್ಧೆಯನ್ನು ರಾಜ್ಯ ಮೀಸಲು ಪಡೆ(ಕೆಎಸ್ ಆರ್ ಪಿ)ಯ ಪೊಲೀಸ್ ಮಹಾನಿರೀಕ್ಷಕ(ಐಜಿಪಿ)
ಸಂದೀಪ್ ಪಾಟೀಲ್ ಯಶಸ್ವಿ ಯಾಗಿ ಪೂರೈಸಿ ರಾಜ್ಯ ಪೊಲೀಸ್ ಇಲಾಖೆಗೆ ಕೀರ್ತಿ ತಂದಿದ್ದಾರೆ.
ಟೈಫ್ಲಾನ್‌ನಲ್ಲಿ 3.8 ಕಿ.ಮೀ. ಸಮುದ್ರದಲ್ಲಿ ಈಜುವಿಕೆ, 180 ಕಿ.ಮೀ. ಸೈಕ್ಲಿಂಗ್ ಮತ್ತು 42 ಕಿ.ಮೀ. ಮ್ಯಾರಥಾನ್ ಒಳಗೊಂಡಂತೆ ಐಜಿಪಿ ಸಂದೀಪ್ ಪಾಟೀಲ್ ಅವರು 14 ಗಂಟೆ 45 ನಿಮಿಷಗಳಲ್ಲಿ ಈ ಸ್ಪರ್ಧೆಗಳನ್ನು ಯಶಸ್ವಿಯಾಗಿ ಪೂರೈಸಿ ಅಸಾಧಾರಣ ಸಾಧನೆ ಮಾಡಿದ್ದಾರೆ.
ಅಪ್ರತಿಮ ಸಾಧನೆ ಮಾಡಿರುವ ಸಂದೀಪ್ ಪಾಟೀಲ್ ಅವರನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂಎ ಸಲೀಂ ಕೆಎಸ್ ಆರ್ ಪಿ ಎಡಿಜಿಪಿ ಉಮೇಶ್ ಕುಮಾರ್ ಸೇರಿ ಹಿರಿಯ ಅಧಿಕಾರಿಗಳು ಅಭಿನಂದಿಸಿದ್ದಾರೆ.