ನವದೆಹಲಿ/ಬೆಂಗಳೂರು: ದೇಶಾದ್ಯಂತ ಇಂಡಿಗೋ ವಿಮಾನ ಯಾನ ರದ್ದಾಗಿದ್ದು ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ ಎರಡು ದಿನಗಳಿಂದ ಇಂಡಿಗೋ ವಿಮಾನ ಹಾರಾಟ ರದ್ದುಗೊಂಡಿದ್ದು, ರದ್ದುಗೊಳ್ಳಲು ಕಾರಣಗಳೇನು ಎಂಬುದು ತಿಳಿದುಬಂದಿಲ್ಲ.
ದೆಹಲಿಯಲ್ಲಿ 77, ಹೈದರಾಬಾದ್ ನಲ್ಲಿ 99, ಬೆಂಗಳೂರಿನಲ್ಲಿ 100ಕ್ಕೂ ಹೆಚ್ಚು ಇಂಡಿಗೋ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ದೇಶಾದ್ಯಂತ ಒಟ್ಟು 500ಕ್ಕೂ ಹೆಚ್ಚು ಇಂಡಿಗೋ ವಿಮಾನಗಳು ಸೇವೆಯನ್ನು ರದ್ದುಗೊಳಿಸಿವೆ.
ಈ ಮಧ್ಯೆ ಇಂಡಿಗೋ ವಿಮಾನ ಸಂಸ್ಥೆ ಪ್ರತಿಕ್ರಿಯೆ ನೀಡಿದ್ದು, ಕಳೆದ ಎರಡು ದಿನಗಳಲ್ಲಿ ತನ್ನ ನೆಟ್ ವರ್ಕ್ ಗಮನಾರ್ಹವಾಗಿ ಅಡ್ಡಿಯಾಗಿದೆ. ಇದಕ್ಕಾಗಿ ಇಂಡಿಗೋ ಗ್ರಾಹಕರಲ್ಲಿ ಕ್ಷಮೆಯಾಚಿಸಿದೆ.
ಡಿಸೆಂಬರ್ 8ರಿಂದ ವಿಮಾನಗಳನ್ನು ಕಡಿತಗೊಳಿಸುವುದಾಗಿ ವಿಮಾನಯಾನ ಸಂಸ್ಥೆ ಡಿಜಿಸಿಎಗೆ ತಿಳಿಸಿದೆ. ಫೆಬ್ರವರಿ 10, 2026ರ ವೇಳೆಗೆ ಸ್ಥಿರ ಕಾರ್ಯಾಚರಣೆಗಳನ್ನು ಸಂಪೂರ್ಣವಾಗಿ ಪುನರ್ ಸ್ಥಾಪಿಸುವ ನಿರೀಕ್ಷೆ ಇದೆ. ಎರಡನೆ ಹಂತದ ಎಫ್ ಡಿಟಿಎಲ್ ಮಾನದಂಡಗಳನ್ನು ಅನುಷ್ಠಾನಗೊಳಿಸುವಲ್ಲಿ ತಪ್ಪು ನಿರ್ಧಾರ ಕೈಗೊಳ್ಳಲಾಗಿದೆ. ಯೋಜನಾ ಅಂತರವು ವ್ಯಾಪಕ ಅಡೆತಡೆಗಳಿಗೆ ಕಾರಣವಾಗಿದೆ ಎಂದು ಇಂಡಿಗೋ ವಿಮಾನಯಾನ ಸಂಸ್ಥೆ ಒಪ್ಪಿಕೊಂಡಿದೆ ಮಾಧ್ಯಮಗಳು ವರದಿ ಮಾಡಿವೆ.
Previous Articleಡಿ.ಕೆ ಶಿವಕುಮಾರ್-ಸತೀಶ್ ಜಾರಕಿಹೊಳಿ ರಹಸ್ಯ ಭೇಟಿ!
Next Article ಹೀಗೂ ಒಂದು ಆರತಕ್ಷತೆ.

