ಬೆಳಗಾವಿ: ಇಲ್ಲಿನ ವಿಮಾನ ನಿಲ್ದಾಣದಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಬಂದು ಇಳಿಯುತ್ತಿದ್ದಂತೆಯೇ ಅವರ ಬೆಂಬಲಿಗರು ಡಿಕೆ, ಡಿಕೆ ಎಂದು ಕೂಗಿ ಡಿಕೆಶಿಗೆ ಜಯಘೋಷ ಮೊಳಗಿಸಿದರು.
ತಮ್ಮ ನಾಯಕ ಮುಂದಿನ ಮುಖ್ಯಮಂತ್ರಿಯಾಗಲಿ ಎಂದು ಬೆಂಬಲಿಗರು ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಡಿ.ಕೆ ಶಿವಕುಮಾರ್ ಬೆಂಬಲಿಗರತ್ತ ಕೈ ಬೀಸಿ ಅಲ್ಲಿಂದ ಅಧಿವೇಶನಕ್ಕೆ ತೆರಳಿದರು.
ಈ ಹಿಂದೆ ಮಂಗಳೂರು ವಿಮಾನ ನಿಲ್ದಾಣದಲ್ಲೂ ಡಿ.ಕೆ.ಶಿ ಅವರ ಪರ ಬೆಂಬಲಿಗರು ಇದೇ ರೀತಿ ಘೋಷಣೆ ಕೂಗಿದ್ದರು. ಈಗ ಬೆಳಗಾವಿಯಲ್ಲೂ ಘೋಷಣೆಗಳನ್ನು ಕೂಗಲಾಗಿದ್ದು, ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲಿ ಎಂದು ಒತ್ತಾಯಿಸಿದರು.
ಡಿ.ಕೆ ಶಿವಕುಮಾರ್ ಸಿಎಂ ಆಗಲಿ ಎಂದು ಘೋಷಣೆ ಮೊಳಗಿಸಿದ ಬೆಂಬಲಿಗರು
Previous Articleಎಂಇಎಸ್ ಪುಂಡಾಟಿಕೆ ಯತ್ನ
Next Article ಜಗತ್ತಿನ ಅತಿ ದೊಡ್ಡ ರಾಷ್ಟ್ರಧ್ವಜ ಅನಾವರಣ

