ತಮ್ಮ ಸಮರ್ಥಕರಿಗೆ ಹೆಲೋ ಹೇಳಲು ಸೈಕಲ್ ನಿಲ್ಲಿಸಿ ಇಳಿಯಲು ಹೋದ ಅಮೆರಿಕಾದ ಅಧ್ಯಕ್ಷ ಬೈಡನ್ ಸೈಕಲ್ ಇಳಿಯುವ ವೇಳೆ ಸೈಕಲ್ಲಿನಿಂದ ಬಿದ್ದು ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ. ಡೆಲವಾರ್ ನಲ್ಲಿರುವ ತಮ್ಮ ಬೀಚ್ ಹೋಂ ನಿಂದ ವಿಹಾರಕ್ಕೆಂದು ತಮ್ಮ ಪತ್ನಿಯೊಂದಿಗೆ ಸೈಕಲ್ ಸವಾರಿ ಮಾಡುತ್ತಾ ಹೋರಟ ಬೈಡನ್ ಒಂದಷ್ಟು ಜನ ತಮ್ಮ ಬೆಂಬಲಿಗರನ್ನು ಕಂಡು ಅವರೆಡೆಗೆ ಸೈಕಲ್ ಚಲಾಯಿಸುತ್ತಾ ಹೋಗಿ ಅವರ ಹತ್ತಿರ ತಲುಪಿದಾಗ ಸೈಕಲ್ ಇಳಿಯಲು ನೋಡಿದಾಗ ಆಯ ತಪ್ಪಿ ರಸ್ತೆಗೆ ಬಿದ್ದಿದ್ದಾರೆ. ಅದನ್ನ ನೋಡಿ ಜನ ಆತಂಕಕ್ಕೊಳಗಾದಿದ್ದರೂ ಬೈಡನ್ ಮಾತ್ರ ತಮಗೇನೂ ಆಗಿಲ್ಲ ಎಂದು ಹೇಳಿದ್ದಾರೆ. ಬೈಡನ್ ಅವರೊಂದಿಗೆ ಅವರ ಪತ್ನಿ ಜಿಲ್ ಬೈಡನ್ ಬೇರೆ ಒಂದು ಸೈಕಲ್ ನಲ್ಲಿ ಸವಾರಿ ಮಾಡುತ್ತಿದ್ದರು. ಬೈಡನ್ ಬಿದ್ದ ನಂತರ ಎಲ್ಲರೂ ಅಧ್ಯಕ್ಷರ ಆರೋಗ್ಯದ ಬಗ್ಗೆ ಚಿಂತಿತರಾಗಿದ್ದರೆ ಎನ್ನಲಾಗಿದೆ. ಬೈಡನ್ ಅವರು ಬೀಳುತ್ತಿದ್ದಂತೆಯೇ ಅವರ ಅಂಗ ರಕ್ಷಕರು ಅವರೆಡೆಗೆ ಧಾವಿಸಿ ಅವರನ್ನು ಸುರಕ್ಷಿತರನ್ನಾಗಿಸಿದರು ಎಂದು ವರದಿಯಾಗಿದೆ.
ಸೈಕಲ್ ನಿಂದ ಕೆಳಗೆ ಬಿದ್ದ ಅಮೆರಿಕಾ ಅಧ್ಯಕ್ಷ
Previous Articleಮೈಸೂರಿಗೆ ಮೋದಿ ಆಗಮನ ಹಿನ್ನೆಲೆ ಹೈ ಅಲರ್ಟ್..!
Next Article Hindi ವಿರುದ್ಧ ಆಕ್ರೋಶ