ನಿರ್ದೇಶನಕ್ಕೆ ಕಾಲಿಟ್ಟ ನಿರ್ಮಾಪಕ ಕೆ ಎಂ ಶಶಿಧರ್ ಅವರ ಮೊದಲ ನಿರ್ದೇಶನದ ಚಿತ್ರ ಶುಗರ್ ಲೆಸ್ ಟ್ರೈಲರ್ ಬಿಡುಗಡೆ ಆಗಿದೆ. ಸಿನಿಮಾ ಜುಲೈ.8ಕ್ಕೆ ಬಿಡುಗಡೆಯಾಗಲಿದೆ.ಸಕ್ಕರೆ ಕಾಯಿಲೆ ಕುರಿತು ಕೆಲವರಲ್ಲಿರುವ ಕಲ್ಪನೆ, ಭಯ ಇದನ್ನೆಲ್ಲ ಇಟ್ಟುಕೊಂಡು ಕಾಮಿಡಿ ಜೊತೆಗೆ ಮೆಸೇಜ್ ಹೇಳುವ ಪ್ರಯತ್ನವೇ ಶುಗರ್‌ಲೆಸ್. ಚಿತ್ರದಲ್ಲಿ ಪೃಥ್ವಿ ಅಂಬರ್ ನಾಯಕನಾದರೆ ನಾಯಕಿಯಾಗಿ ಪ್ರಿಯಾಂಕಾ ತಿಮ್ಮೇಶ್ ಕಾಣಿಸಿಕೊಂಡಿದ್ದಾರೆ.ಶಶಿಧರ್ ಸ್ಟುಡಿಯೋಸ್ ಪ್ರೊಡಕ್ಷನ್ಸ್ ಮೂಲಕ ಶಶಿಧರ್ ಕೆ.ಎಂ. ಅವರೇ ಶುಗಲ್ ಲೆಸ್ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ಮಾಣವನ್ನೂ ಮಾಡಿದ್ದು, ಸಹ ನಿರ್ಮಾಪಕರಾಗಿ ಪ್ರಜ್ವಲ್ ಎಂ.ರಾಜ ಹಾಗೂ ವಿಜಯಲಕ್ಷ್ಮಿ ಕೃಷ್ಣೇಗೌಡ ಸಾಥ್ ನೀಡಿದ್ದಾರೆ. ಲವಿತ್ ಅವರ ಛಾಯಾಗ್ರಹಣ, ಅನೂಪ್ ಸೀಳಿನ್ ಅವರ ಸಂಗೀತ ಸಂಯೋಜನೆ ಚಿತ್ರಕ್ಕಿದ್ದು, ವಿ. ನಾಗೇಂದ್ರಪ್ರಸಾದ್ ಸಾಹಿತ್ಯ ರಚಿಸಿದ್ದಾರೆ. ಗುರು ಕಶ್ಯಪ್ ಚಿತ್ರದ ಸಂಭಾಷಣೆ ರಚಿಸಿದ್ದಾರೆ. ಚಿತ್ರದ ಸಂಕಲನ ರವಿಚಂದ್ರನ್, ನೃತ್ಯ ಸಂಯೋಜನೆ ಮುರಳಿ ಮಾಸ್ಟರ್, ಕಲೆ ವಿನ್ಯಾಸವನ್ನು ರೂಪೇಂದ್ರ ಆಚಾರ್ ಮಾಡಿದ್ದಾರೆ.
Previous Articleಮತ್ತೆ ತೆರೆ ಮೇಲೆ ರಾಜಣ್ಣ! “ಭಾಗ್ಯವಂತರು”ರೀ ರಿಲೀಸ್
Next Article ಮೊದಲ ಮಗುವಿನ ನಿರೀಕ್ಷೆಯಲ್ಲಿ ಆಲಿಯಾ ಭಟ್!