ಬೆಂಗಳೂರು,ಅ.9-
ಕಾರವಾರ ನಗರದ ಹೊರವಲಯದ ವಕ್ಕನಳ್ಳಿ ಬಳಿಯ ಕದಂಬ ನೌಕಾನೆಲೆಯ ಪ್ರದೇಶದ ಬಳಿ ಕಳೆದ ರಾತ್ರಿ ಅಪರಿಚಿತ ಡ್ರೋನ್ ಹಾರಾಡಿದ ದೃಶ್ಯ ಸ್ಥಳೀಯರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಅಪರಿಚಿತ ಡ್ರೋನ್ ಹಾರಾಟ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ವಕ್ಕನಳ್ಳಿಯ ಐಎನ್ಎಸ್ ಪತಂಜಲಿ ಆಸ್ಪತ್ರೆಯ ಹಿಂಬದಿಯಿಂದ ಬಿಣಗಾ ಚತುಷ್ಪಥ ಹೆದ್ದಾರಿಯ ಸುರಂಗ ಮಾರ್ಗದವರೆಗೂ ಡ್ರೋನ್ ಹಾರಾಡಿದೆ.
ಸುರಕ್ಷತೆಯ ದೃಷ್ಟಿಯಿಂದ ನೌಕಾ ನೆಲೆ ಪ್ರದೇಶದಲ್ಲಿ ಡ್ರೋನ್ ಹಾಗೂ ಕ್ಯಾಮರಾ ಬಳಕೆ ನಿಷೇಧವಿದೆ. ಇದರ ಹೊರತಾಗಿಯೂ ಡ್ರೋನ್ ಹಾರಾಡಿದೆ. ಡ್ರೋನ್ ಹಾರಾಟದ ವಿಡಿಯೋವನ್ನು ಸ್ಥಳಿಯರು ನೌಕಾನೆಲೆ ಅಧಿಕಾರಿಗಳಿಗೆ ನೀಡಿ, ಗಮನಕ್ಕೆ ತಂದಿದ್ದಾರೆ.
ಸುಮಾರು 2-3 ಕಿ.ಮೀ ಎತ್ತರದಲ್ಲಿ ನೈಟ್ ವಿಶನ್ ಡ್ರೋನ್ ಹಾರಾಡಿದ್ದು, ಹಲವು ಸಂಶಯಕ್ಕೆ ಕಾರಣಾಗಿದೆ. ಸಾಮಾನ್ಯವಾಗಿ 600 ದಿಂದ 1,200 ಮೀ ಎತ್ತರ ಹಾರುವ ಡ್ರೋನ್ ಸ್ಥಳೀಯವಾಗಿ ಬಳಕೆ ಮಾಡಲಾಗುತ್ತೆ. ಆದರೆ, ಈ ಡ್ರೋನ್ ಸುಮಾರು 3 ಕಿ.ಮೀ.ಗೂ ಹೆಚ್ಚು ದೂರ ಹಾರಾಡಿರುವುದು ಸಂಶಯಕ್ಕೆ ಕಾರಣವಾಗಿದೆ.
ಈ ಬಗ್ಗೆ ನಿಖರ ಮಾಹಿತಿ ಕಲೆ ಹಾಕಲು ನೌಕಾಪಡೆ, ರಾಜ್ಯ ಹಾಗೂ ಕೇಂದ್ರ ಗುಪ್ತಚರ ಇಲಾಖೆಗಳು ಮುಂದಾಗಿವೆ. ಗುಪ್ತಚರ ಇಲಾಖೆ ಅಧಿಕಾರಿಗಳು ಸ್ಥಳೀಯರಿಂದಲೂ ಮಾಹಿತಿ ಪಡೆಯುತ್ತಿದ್ದಾರೆ. ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಐಆರ್ಬಿ ಹಾಗೂ ಎನ್ಹೆಚ್ಎಐಗಳು ಕೂಡ ಡ್ರೋನ್ ಬಳಸಿಲ್ಲ ಎಂದು ಸ್ಪಷ್ಟಪಡಿಸಿವೆ. ಇದರಿಂದ ಸಂಶಯ ದಟ್ಟವಾಗಿದ್ದು ನೌಕಾಪಡೆ ಹಾಗೂ ಗುಪ್ತಚರ ಇಲಾಖೆಗಳಿಂದ ಎಲ್ಲ ಆಯಾಮಗಳಿಂದಲೂ ತನಿಖೆ ನಡೆಯುತ್ತಿದೆ.
ಇತ್ತೀಚೆಗೆ ಹನಿಟ್ರ್ಯಾಪ್‌ಗೆ ಒಳಗಾಗಿ ನೌಕಾನೆಲೆಯಲ್ಲಿನ ಗುಪ್ತ ಮಾಹಿತಿ ನೀಡುತ್ತಿದ್ದ ಮೂವರನ್ನು ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿ, ಬಿಟ್ಟಿದ್ದರು. ಈ ಘಟನೆ ಮಾಸುವ ಮುನ್ನವೇ ಇದೀಗ ಡ್ರೋನ್ ಹಾರಾಟ ಗುಪ್ತಚರ ಇಲಾಖೆ ತಲೆ ಕೆಡಿಸಿಕೊಳ್ಳುವಂತೆ ಮಾಡಿದೆ
Previous Articleಮಾಜಿ ಮುಖ್ಯಮಂತ್ರಿಗಳಿಗೆ ಹನಿ ಟ್ರ್ಯಾಪ್.?
Next Article ರಾಜ್ಯದಲ್ಲಿ ಪೊಲೀಸ್ ಸರ್ಪಗಾವಲು.


7 ಪ್ರತಿಕ್ರಿಯೆಗಳು
betmgm UT betmgm-play betmgm offers
Diversify your evening with thrilling tournaments. crown coins casinos ensures secure transactions and fast payouts. Join and hit the jackpot!
Unlock the magic of Sweet Bonanza — a slot where every tumble feels like opening a gift! Free spins sweet bonanza bonus with stacked multipliers create jaw-dropping moments. Spin away!
Witness the majesty of buffalos delivering epic wins. how to win buffalo slots stacks the deck with 1024 paylines, sunset triggers, and progressive gold pots. Roar to victory!
Trusted since 2017. Still the fastest. Still stake login the fairest. Still the best.
DraftKings roulette Casino lights up your screen. New welcome pack: 500 spins for $5 + up to $1K lossback. From slots to live—dominate!
Opravdovalekarna.cz – protoze zdravi by nemelo bolet penezenku
https://opravdovalekarna.cz