ಬೆಂಗಳೂರು,ಸೆ.18- ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸಂಚಲನ ಮೂಡಿಸಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ಕೊನೆ ಕ್ಷಣಗಳ ಫೋಟೊಗಳು ಕೃತಕ ಬುದ್ಧಿಮತ್ತೆ ( ‘ಎಐ)’ನದ್ದು ಎನ್ನುವ ಆರೋಪ ಕೇಳಿಬಂದಿದೆ.
ನಟ ದರ್ಶನ್ ಗ್ಯಾಂಗ್‌ನಿಂದ ಮಾರಣಾಂತಿಕ ಹಲ್ಲೆಗೊಳಗಾಗಿದ್ದ ರೇಣುಕಾಸ್ವಾಮಿ ಪ್ರಾಣಭಿಕ್ಷೆ ನೀಡುವಂತೆ ಕಣ್ಣೀರಿಟ್ಟು ಅಂಗಲಾಚಿದ್ದ ಸಂದರ್ಭದಲ್ಲಿ ತೆಗೆದಿತ್ತು ಎನ್ನಲಾದ ಫೋಟೊ ಎಲ್ಲೆಡೆ ವೈರಲ್ ಆಗಿತ್ತು. ಆದರೆ ಇದು ಎಐ ಫೋಟೊ ಎಂದು ಆರೋಪಿಗಳು ಹೇಳುತ್ತಿದ್ದಾರೆ.
ಪ್ರಾಣಭಿಕ್ಷೆಯ ಫೋಟೊ ‘ಎಐ’ದು ಎನ್ನುವ ಆರೋಪ ಹಿನ್ನೆಲೆಯಲ್ಲಿ ಆರೋಪಿ ವಿನಯ್ ಮೊಬೈಲ್‌ನ ಮತ್ತೆ ಎಫ್‌ಎಸ್‌ಎಲ್ ಪರೀಕ್ಷೆಗೆ ಒಳಪಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ವಿನಯ್‌ನ ಐಫೋನ್ ಮೊಬೈಲ್‌ನಲ್ಲಿ ರೇಣುಕಾಸ್ವಾಮಿ ಫೋಟೊಗಳು ಪತ್ತೆಯಾಗಿದ್ದವು.
ವಿನಯ್ ಮೊಬೈಲ್ ಎಕ್ಸ್ಟ್ರಾಕ್ಟ್ ವೇಳೆ ರೇಣುಕಾಸ್ವಾಮಿಯ ರಕ್ತಸಿಕ್ತ ಫೋಟೊಗಳು ಪತ್ತೆಯಾಗಿದ್ದವು. ಇದೀಗ ಸಿಕ್ಕಿರುವ ಫೋಟೊಗಳನ್ನ ಮತ್ತೊಮ್ಮೆ ಪರೀಕ್ಷೆಗೊಳಪಡಿಸಲು ಪೊಲೀಸರು ನಿರ್ಧಾರಿಸಿದ್ದಾರೆ.
ವಿನಯ್ ಮೊಬೈಲ್ ಮತ್ತೆ ಎಫ್‌ಎಸ್‌ಎಲ್‌ಗೆ ಕಳಿಸಲು ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ವಿನಯ್ ಮೊಬೈಲ್‌ನಲ್ಲಿ ಸಿಕ್ಕಿದ್ದ ಫೋಟೊಗಳ ಮರುಪರೀಕ್ಷೆಗೆ ತಯಾರಿ ನಡೆದಿದೆ. ಆ ಮೂಲಕ ಫೋಟೊಗಳ ಅಸಲಿಯತ್ತಿನ ಪರೀಕ್ಷೆ ನಡೆಸಿ ಮತ್ತೊಮ್ಮೆ ವರದಿ ನೀಡಲು ನಿರ್ಧಾರಿಸಲಾಗಿದೆ. ಐಫೋನ್‌ನ ರಿಪೋರ್ಟ್ ಪಡೆಯಲು ಕೋರ್ಟ್ ನಿಂದ ಪೊಲೀಸರು ಅನುಮತಿ ಪಡೆದಿದ್ದಾರೆ.
Previous Articleನಾಗಮಂಗಲ ಗಲಭೆಯ ನಷ್ಟ ಎಷ್ಟು ಗೊತ್ತೆ.
Next Article ಡ್ರಗ್ಸ್ ನಿಯಂತ್ರಣಕ್ಕೆ ಕಾರ್ಯಪಡೆ.

1 ಟಿಪ್ಪಣಿ
Mostbet te recebe com o calor que todo jogador merece – https://mostbetpt.pro/bonus/ , Descubra o Mostbet e viva noites inesquecГveis cheias de adrenalina .