ಬೆಂಗಳೂರು ,ಜೂ.5- ಕನ್ನಡ ಸಿನಿಮಾ ರಂಗದ ರೆಬಲ್ ಸ್ಟಾರ್ ದಿವಂಗತ ಅಂಬರೀಶ್ ಅವರ ಪುತ್ರ ಅಭಿಷೇಕ್ ಅಂಬರೀಶ್ ಮತ್ತು ಪ್ಯಾಷನ್ ಡಿಸೈನರ್ ಪ್ರಸಾದ್ ಬಿಡಪ್ಪ ಮಗಳು ಅವಿವಾ ಬಿಡಪ್ಪ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ
ಉಭಯ ಕುಟುಂಬಗಳ ಪ್ರಮುಖ ಸದಸ್ಯರು ನಟ ರಜನಿಕಾಂತ್ ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸೇರಿದಂತೆ ಕೆಲವೇ ಮಂದಿ ಆಹ್ವಾನಿತ ಗಣ್ಯರ ಸಮ್ಮುಖದಲ್ಲಿ ಸಂಪ್ರದಾಯದಂತೆ ಬೆಂಗಳೂರು ಪ್ಯಾಲೇಸ್ ಗ್ರೌಂಡ್ ನಲ್ಲಿ ಮದುವೆ ನಡೆಯಿತು.
ಬೆಳಗ್ಗೆ 9ರಿಂದ 10 ಗಂಟೆಯ ಒಳಗಿನ ಮುಹೂರ್ತದಲ್ಲಿ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ನವಜೀವನಕ್ಕೆ ಕಾಲಿಟ್ಟಿದ್ದಾರೆ.ಹಲವು ವರ್ಷಗಳ ಇಬ್ಬರ ಪ್ರೀತಿಗೆ ಇಂದು ಮದುವೆ ಎಂಬ ಮುದ್ರೆ ಬಿದ್ದಿದೆ. ಜೂನ್ 7 ರಂದು ಪ್ಯಾಲೇಸ್ ಗ್ರೌಂಡ್ ನಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.ಆರತಕ್ಷತೆಗೆ ಚಿತ್ರರಂಗ, ರಾಜಕೀಯ ರಂಗದ ಎಲ್ಲರನ್ನು ಆಹ್ವಾನ ಮಾಡಲಾಗಿದೆ. ಇನ್ನು ಮಂಡ್ಯದಲ್ಲಿ ದೊಡ್ಡ ಮಟ್ಟದಲ್ಲಿ ಬೀಗರ ಔತಣಕೂಟವನ್ನು ಏರ್ಪಡಿಸಲಾಗಿದೆ.
ಗೌಡ ಸಂಪ್ರದಾಯದಂತೆ ಅಭಿಷೇಕ್-ಅವೀವಾ ಮದುವೆ
Previous Article41ನೇ ವಯಸ್ಸಿಗೇ ಮೃತರಾದ ಇನ್ಸ್ಪೆಕ್ಟರ್ ಮಂಜುನಾಥ್
Next Article BL ಸಂತೋಷ್ ಅಂದರೆ ಯಾರು ಅದು?