ಸ್ಯಾಂಡಲ್ ವುಡ್ ಖ್ಯಾತ ನಟಿ ಪ್ರಿಯಾಮಣಿ ಗಂಡನಿಂದ ಡೈವೋರ್ಸ್ ಪಡೆಯೋಕೆ ಮುಂದಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ರನ್ನ, ರಾಮ್ ಚಿತ್ರಗಳ ನಾಯಕಿ ಪ್ರಿಯಾಮಣಿ ೨೦೧೬ರಲ್ಲಿ ಮುಸ್ತಫಾರನ್ನು ವಿವಾಹವಾಗಿದ್ದರು. ಮುಸ್ತಫಾಗೆ ಇದು ಎರಡನೇ ಮದುವೆ ಆಗಿತ್ತು. ೫ ವರ್ಷಗಳ ನಂತರವೂ ಈ ಜೋಡಿಗೆ ಮಕ್ಕಳಾಗಿಲ್ಲ. ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದೆ ಎನ್ನಲಾಗಿದೆ. ಇದೀಗ ಪ್ರಿಯಾಮಣಿ ಪತಿಯಿಂದ ವಿಚ್ಛೇದನ ಪಡೆಯೋಕೆ ಮುಂದಾಗಿದ್ದಾರೆ ಎಂದು ಹೇಳಲಾಗಿದೆ. ಆದರೆ ನಟಿ ಇನ್ನೂ ಈ ಬಗ್ಗೆ ಏನೂ ಪ್ರತಿಕ್ರಿಯೆ ನೀಡಲಿಲ್ಲ.