ಕೃಪೆ – CNN
America ದ ಉತ್ತರ ಭಾಗದ ಅಟ್ಲಾಂಟಿಕ್ ಮಹಾಸಾಗರ (Atlantic Ocean) ದ ಮೇಲೆ ಹಾರಾಡುತ್ತಿದ್ದ ಶಂಕಿತ ಚೀನಾದ ಕಣ್ಗಾವಲು ಬಲೂನ್ (Chinese spy balloon) ಅನ್ನು ಶನಿವಾರದಂದು US ಮಿಲಿಟರಿ ಪಡೆ ಹೊಡೆದುರುಳಿಸಿದೆ. ಈ ಕೃತ್ಯವನ್ನು ಎಸಗುವ ಮೂಲಕ ಚೀನಾ US ಸಾರ್ವಭೌಮತ್ವ ಮತ್ತು ಅಂತಾರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆ ಮಾಡಿದೆ ಎಂದು US ಕಿಡಿಕಾರುತ್ತಿದೆ. ಏತನ್ಮಧ್ಯೆ, ಎರಡೂ ದೇಶಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಜೊತೆಗೆ ಅಮೇರಿಕನ್ ಹಿರಿಯ ಅಧಿಕಾರಿ ಕಮಾಂಡರ್ ಜನರಲ್ ಆಂಥೋನಿ ಕಾಟನ್ (Gen. Anthony Cotton) ನೀಡಿದ ಪತ್ರವು ಎಚ್ಚರಿಕೆಯ ಕರೆಗಂಟೆ ಬಾರಿಸಿದೆ. ವಾಲ್ ಸ್ಟ್ರೀಟ್ ಜರ್ನಲ್ (Wall Street Journal) ಮೊದಲು ವರದಿ ಮಾಡಿದ ಈ ಪತ್ರದಲ್ಲಿ ಅಂಥದ್ದೇನಿದೆ ಎಂದು ನೋಡುವುದಾದರೆ –
ಅಕ್ಟೋಬರ್ 2022ರ ಅಂಕಿ ಅಂಶಗಳನ್ನು ಆಧರಿಸಿದ ಈ ಪತ್ರದ ಪ್ರಕಾರ, ಚೀನಾದ ಭೂ-ಆಧಾರಿತ ಸ್ಥಿರ ಮತ್ತು ಮೊಬೈಲ್ ICBM (InterContinental Ballistic Missile) ಲಾಂಚರ್ ಗಳ ದಾಸ್ತಾನು United States ನ ICBM ಲಾಂಚರ್‌ಗಳ ಸಂಖ್ಯೆಯನ್ನೂ ಮೀರಿದೆಯಂತೆ! ಅಲ್ಲದೆ, ಪರಮಾಣು ಆಧುನೀಕರಣದ ಕಾರ್ಯವನ್ನು ಚೀನಾ ಊಹೆಗೂ ಮೀರಿದ ಹೆಚ್ಚಿನ ವೇಗದಿಂದ ನಡೆಸುತ್ತಿರುವುದರಿಂದ ಅದನ್ನು ಕಡೆಗಣಿಸುವಂತಿಲ್ಲ ಎಂಬ ಎಚ್ಚರಿಕೆಯ ಜೊತೆಗೆ ತಮ್ಮ ಸೇನೆಯ ಸಾಮರ್ಥ್ಯವನ್ನು ಮತ್ತಷ್ಟು ಪ್ರಬಲಗೊಳಿಸಬೇಕೆಂಬ ಎಚ್ಚರಿಕೆಯನ್ನೂ ಈ ಪತ್ರ ನೀಡಿದೆ.
ಚೀನಾ ತನ್ನ ಪರಮಾಣು ಸಂಗ್ರಹವನ್ನು ಹೆಚ್ಚು ವೇಗದಲ್ಲಿ ನಿರ್ಮಿಸುತ್ತಿದೆ. ನವೆಂಬರ್‌ನಲ್ಲಿ ಬಿಡುಗಡೆಯಾದ ಪೆಂಟಗನ್ ವರದಿ (Pentagon report) ಯ ಪ್ರಕಾರ, ಇದೇ ವೇಗದಲ್ಲಿ ಅವರ ನಿರ್ಮಾಣ ಕಾರ್ಯ ನಡೆಯುತ್ತಿದ್ದರೆ 2035 ರ ವೇಳೆಗೆ ಸರಿಸುಮಾರು 1,500 ಪರಮಾಣು ಸಿಡಿತಲೆಗಳನ್ನು ಚೀನಾ ಹೊಂದಿರುತ್ತದೆಯಂತೆ.
ಸದ್ಯಕ್ಕೆ, ಅಮೇರಿಕಾ ಸೇನೆ ಚೀನಾ ಸೇನೆಗಿಂತ ಹೆಚ್ಚಿನ ಸಾಮರ್ಥ್ಯ ಹೊಂದಿದೆಯಾದರೂ ಚೀನಾ ತನ್ನ ಸೇನೆಯ ಸಾಮರ್ಥ್ಯಗಳನ್ನು ಮತ್ತು ಶಸ್ತ್ರಾಸ್ತ್ರಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿರುವ ಈ ಪರಿ ಮತ್ತು ವೇಗ, ‘ದೀರ್ಘಾವಧಿಯಲ್ಲಿ ಇವರ ಉದ್ದೇಶ ಏನಿರಬಹುದು’ ಎಂಬುದರ ಕುರಿತು ಕೆಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ.
3 ಪ್ರತಿಕ್ರಿಯೆಗಳು
cost cheap clomid pills clomid tablets for sale where can i get generic clomid good rx clomid where can i buy cheap clomiphene without dr prescription can you buy clomid for sale cost of cheap clomid prices
This is the compassionate of criticism I in fact appreciate.
¡Saludos, cazadores de fortuna !
Casinosextranjerosenespana.es – Entra y comienza a ganar – п»їhttps://casinosextranjerosenespana.es/ casinos extranjeros
¡Que vivas increíbles instantes inolvidables !