ಅಮೆರಿಕ: ಯಾವುದೇ ವೈದ್ಯರ ಸಹಾಯವಿಲ್ಲದೇ ಸಮುದ್ರದ ಅಲೆಗಳ ಮಧ್ಯೆಯೇ ಗರ್ಭಿಣಿಯೊಬ್ಬರು ಮಗುವಿಗೆ ಜನ್ಮ ನೀಡಿದ್ದಾರೆ.
ಈ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗಿದೆ.
37 ವರ್ಷದ ಜೋಸಿ ಪ್ಯೂಕರ್ಟ್ ಎಂಬುವರು ತಮ್ಮ ಪತಿಯೊಂದಿಗೆ ಅಮೆರಿಕದ ನಿಕರಾಗುವಾದಲ್ಲಿರುವ ಪ್ಲಾಯಾ ಮಜಗುವಲ್ ತೀರಕ್ಕೆ ತೆರಳಿದ್ದಾಗ ಮಗುವಿಗೆ ಜನ್ಮ ನೀಡಿದ್ದಾರೆ. ಫೆಬ್ರವರಿ 27ರಂದು ಪ್ಯೂಕರ್ಟ್ ಈ ಮಗುವಿಗೆ ಜನ್ಮ ನೀಡಿದ್ದು ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.