Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಆಚಾರವಿಲ್ಲದ ನಾಲಿಗೆ- ರಾಮಲಿಂಗಾರೆಡ್ಡಿ ಕಿಡಿ ಕಿಡಿ | Anantkumar Hedge
    ಸುದ್ದಿ

    ಆಚಾರವಿಲ್ಲದ ನಾಲಿಗೆ- ರಾಮಲಿಂಗಾರೆಡ್ಡಿ ಕಿಡಿ ಕಿಡಿ | Anantkumar Hedge

    vartha chakraBy vartha chakraಜನವರಿ 14, 20242 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು,ಜ.14: ಕಳೆದ ಕೆಲವು ದಿನಗಳಿಂದ ರಾಜಕೀಯವಾಗಿ ನಿಷ್ಕ್ರಿಯರಾಗಿದ್ದ ಸಂಸದ ಅನಂತ ಕುಮಾರ್ ಹೆಗಡೆ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತ್ತೆ ಸಕ್ರಿಯರಾಗಿದ್ದಾರೆ. ಇವರು ‌ನೀಡುತ್ತಿರುವ ಹೇಳಿಕೆ ಇದೀಗ ಕಾಂಗ್ರೆಸ್ ನಾಯಕರನ್ನು ಕೆರಳುಸುತ್ತಿದೆ. ಇದರ ಬೆನ್ನಲ್ಲೇ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದಡಿ ಇವರ ವಿರುದ್ಧ ಪ್ರಕರಣ ದಾಖಲಾಗಿದೆ.
    ಅನಂತ ಕುಮಾರ್ ಹೆಗಡೆ ವಿರುದ್ಧ ಉತ್ತರ ಕನ್ನಡ ಜಿಲ್ಲೆಯ ಕುಮುಟಾ ಪೊಲೀಸರು ಧಾರ್ಮಿಕ ಭಾವನೆಗೆ ಧಕ್ಕೆ ತರುವಂತೆ ಹೇಳಿಕೆ ನೀಡುವ ಜತೆಗೆ ಸಾಮಾಜಿಕ ಅಶಾಂತಿಗೆ ಕಾರಣವಾಗುವ ಮಾತುಗಳನ್ನಾಡಿರುವ ಹಿನ್ನೆಲೆಯಲ್ಲಿ ಸೆಕ್ಷನ್ 153ಎ, 505 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

    ಸಂಸದರು ಕುಮಟಾದಲ್ಲಿ ನಡೆದ‌ ಬಿಜೆಪಿ ಸಭೆಯಲ್ಲಿ ಮಾಡಿದ ಭಾಷಣದಲ್ಲಿ, ಭಟ್ಕಳ, ಶಿರಸಿ, ಶ್ರೀರಂಗಪಟ್ಟಣದ ಮಸೀದಿಗಳು ಹಿಂದೆ ದೇವಾಲಯಗಳಾಗಿದ್ದವು. ಅವುಗಳನ್ನು ಬಾಬ್ರಿ ಮಸೀದಿ ಮಾದರಿಯಲ್ಲಿ ಕೆಡವಬೇಕು’ ಎಂದಿದ್ದರು ಈ ಹೇಳಿಕೆ ಆಕ್ಷೇಪಾರ್ಹವಾಗಿರುವ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದೇವೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ ತಿಳಿಸಿದ್ದಾರೆ.
    ಆಚಾರವಿಲ್ಲದ ನಾಲಿಗೆ:
    ಇನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವರು ನೀಡಿರುವ ಹೇಳಿಕೆ ವಿರುದ್ಧ ಕಾಂಗ್ರೆಸ್ ನಾಯಕರು ಕಿಡಿಕಾರಿದ್ದಾರೆ.
    ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ನಾಲಿಗೆ ಕುಲವನ್ನು ಹೇಳುತ್ತದೆ ಎಂಬ ಮಾತಿನಂತೆ ನಿಮ್ಮ ಸಂಸ್ಕಾರ ಏನು ಎಂಬುದು ನೀವು ಆಡಿರುವ ಈ ಮಾತಿನಿಂದ ಪ್ರತಿಬಿಂಬಿತವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
    ಆರ್‌ಎಸ್‌ಎಸ್ ನಿಮ್ಮ ತಂದೆ -ತಾಯಿ ನಿಮಗೆ ಕಲಿಸಿರುವ ಸಂಸ್ಕೃತಿ ಇದೇನಾ? ಏನು ನಿಮ್ಮ ಆಚಾರ ವಿಚಾರ ,ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ ದಾಸರ ವಾಣಿಯನ್ನು ಪರಿಪಾಲಿಸಬೇಕಾದ ಸ್ಥಿತಿಗೆ ನೀವು ಬಂದು ನಿಂತಿರುವುದು ದುರಂತ. ಮಾತು ಆಡಿದರೆ ಹೋಯಿತು ಮುತ್ತು ಉದುರಿದರೆ ಹೋಯ್ತು ಎಂಬಂತೆ ನೀವು ಮುಖ್ಯಮಂತ್ರಿಗಳ ಬಗ್ಗೆ ಬಳಸಿರುವ ಪದ ಆರೂವರೆ ಕೋಟಿ ಕನ್ನಡದ ಜನತೆಯ ಕುರಿತು ಆಡಿದ ಮಾತಾಗಿರುತ್ತದೆ ಅವರಿಗೆ ಮಾಡಿದ ಅಪಮಾನವಾಗುತ್ತದೆ ಎಂದು ಹೇಳಿದ್ದಾರೆ.

    ಸಂಸದ ಹೆಗಡೆ ಅವರೇ ನೀವು ಆಡಿರುವ ಮಾತು ಬಳಸಿರುವ ಪದ ನಿಮ್ಮ ಮಾನಸಿಕ ಸ್ಥಿತಿಯ ಪ್ರತೀಕ. ಸಣ್ಣ ಮಾತು ಆಡುವುದರಿಂದ ನೀವು ದೊಡ್ಡವರಾಗುವುದಿಲ್ಲ ಹಿಂದೆ ಕೇಂದ್ರ ಸಚಿವರಾಗಿದ್ದಾಗ ಸಂವಿಧಾನ ಬದಲಿಸುತ್ತೇನೆ ಅದಕ್ಕಾಗಿಯೇ ಅಧಿಕಾರಕ್ಕೆ ಬಂದಿರುವುದು ಎಂದು ಹೇಳಿದ್ದೀರಿ ಈಗ ಇಂತಹ ಮಾತು ನಿಮಗೆ ಮರ್ಯಾದೆ ತರುವುದಿಲ್ಲ ಎಂದು ಕುಟುಕಿದ್ದಾರೆ.
    ಬಿಜೆಪಿ ಪಕ್ಷಕ್ಕೆ ಕಿಂಚಿತ್ತಾದರು ಮಾನ ಮರ್ಯಾದೆ, ಆಚಾರ-ವಿಚಾರ ಇದ್ದರೆ ಅನಂತ್‌ಕುಮಾರ್ ಹೆಗಡೆ ವಿರುದ್ಧ ಕ್ರಮ ಜರುಗಿಸಬೇಕು ಇಷ್ಟು ದಿನ ಅಡ್ರೆಸ್ ಇಲ್ಲದಂತೆ ಕಳೆದು ಹೋಗಿದ್ದ ನೀವು ಈಗ ಚುನಾವಣೆ ಸಮಯದಲ್ಲಿ ಮತ ಗಳಿಸಲು ರೋಷ ಆವೇಶದ ಮಾತುಗಳನ್ನಾಡಿದ್ದೀರಿ, ಬೇರೆಯವರಿಗೂ ಮಾತನಾಡಲು ಬರುತ್ತದೆ ಆದರೆ, ನಿಮ್ಮ ಮಟ್ಟಕ್ಕಿಳಿಯವುದು ಅನಾಗರಿಕತೆ ಆಗುತ್ತದೆ. ಜನ ದಡ್ಡರಲ್ಲ. ಈ ಬಾರಿ ನಿಮಗೆ ಪಾಠ ಕಲಿಸುತ್ತಾರೆ. ಶಾಶ್ವತವಾಗಿ ಅಡ್ರೆಸ್ ಇಲ್ಲದಂತೆ ಮಾಡುತ್ತಾರೆ ಎಂದು ರಾಮಲಿಂಗಾರೆಡ್ಡಿ ಅನಂತ್‌ಕುಮಾರ್ ಹೆಗಡೆ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.

    ED Edge Government Karnataka m News Politics Trending Varthachakra ಕಾಂಗ್ರೆಸ್ ಚುನಾವಣೆ ಧಾರ್ಮಿಕ ರಾಜಕೀಯ ಸಿದ್ದರಾಮಯ್ಯ
    Share. Facebook Twitter Pinterest LinkedIn Tumblr Email WhatsApp
    Previous Articleಬಿಜೆಪಿಗೆ ಗುಡ್ ಬೈ ಹೇಳಲಿರುವ ಎನ್.ಆರ್.ರಮೇಶ್ | NR Ramesh
    Next Article ಸಂಸದ ಸಿದ್ದೇಶ್ ಹತ್ಯೆಗೆ ಸಂಚು? | GM Siddheshwara
    vartha chakra
    • Website

    Related Posts

    ಜಾತಿ ಸಮೀಕ್ಷೆ ಅವಧಿ ವಿಸ್ತರಣೆ.

    ಅಕ್ಟೋಬರ್ 7, 2025

    ಕಾಫ್ ಸಿರಪ್ ಬಗ್ಗೆ ಎಚ್ಚರಿಕೆ ಇರಲಿ.

    ಅಕ್ಟೋಬರ್ 7, 2025

    ಫೆಬ್ರುವರಿಯಲ್ಲಿ ರಶ್ಮಿಕಾ ಮದುವೆ.

    ಅಕ್ಟೋಬರ್ 4, 2025

    2 ಪ್ರತಿಕ್ರಿಯೆಗಳು

    1. BenJL on ನವೆಂಬರ್ 13, 2025 12:10 ಫೂರ್ವಾಹ್ನ

      Віртуальна реальність скоро стане частиною освіти — і це круто.

      Reply
    2. kra2kn.ccwaype on ನವೆಂಬರ್ 13, 2025 5:45 ಫೂರ್ವಾಹ್ನ

      Отзывы настоящие, по ним легко понять, с кем имеешь дело.
      https://telegra.ph/Analiz-vozmozhnostej-Kraken-Market-dlya-trejderov-11-09

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಜಾತಿ ಸಮೀಕ್ಷೆ ಅವಧಿ ವಿಸ್ತರಣೆ.

    ಕಾಫ್ ಸಿರಪ್ ಬಗ್ಗೆ ಎಚ್ಚರಿಕೆ ಇರಲಿ.

    ಫೆಬ್ರುವರಿಯಲ್ಲಿ ರಶ್ಮಿಕಾ ಮದುವೆ.

    ಹೈಕಮಾಂಡ್ ಮುಂದೆ ಶಿವಕುಮಾರ್ ಗರಂ.

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Bouclier Apextrail Review ರಲ್ಲಿ ಜನಾರ್ದನ ರೆಡ್ಡಿ ಕೇಸ್ ವಿಚಾರಣೆಗೆ ಜಡ್ಜ್ ಯಾರೂ ರೆಡಿ ಇಲ್ಲ.
    • Bouclier Apextrail ರಲ್ಲಿ ಸಂಕಷ್ಟಕ್ಕೆ ಸಿಲುಕಿದ ಹೈಕೋರ್ಟ್ ನ್ಯಾಯಮೂರ್ತಿ.
    • QThomasAlkargo ರಲ್ಲಿ ಪ್ರಜ್ವಲ್ ರೇವಣ್ಣನಿಗೆ ಎಸ್ಐಟಿ ಕುಣಿಕೆ | Prajwal Revanna
    Latest Kannada News

    ಜಾತಿ ಸಮೀಕ್ಷೆ ಅವಧಿ ವಿಸ್ತರಣೆ.

    ಅಕ್ಟೋಬರ್ 7, 2025

    ಕಾಫ್ ಸಿರಪ್ ಬಗ್ಗೆ ಎಚ್ಚರಿಕೆ ಇರಲಿ.

    ಅಕ್ಟೋಬರ್ 7, 2025

    ಫೆಬ್ರುವರಿಯಲ್ಲಿ ರಶ್ಮಿಕಾ ಮದುವೆ.

    ಅಕ್ಟೋಬರ್ 4, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಮತ್ತೊಮ್ಮೆ ಮೋದಿ ವಿಜಯ? #varthachakra #bihar #election #result #nda #modi #winner #announce #latestnews
    Subscribe