ಚಿತ್ರದುರ್ಗ,ನ.19 -ಮೊದಲ ಪೋಕ್ಸೋ ಪ್ರಕರಣದಲ್ಲಿ ಮುರುಘಾಶ್ರೀ (Murugha Shree) ಜೈಲಿನಿಂದ ಬಿಡುಗಡೆಯಾದರೂ ಸಹ ಅವರ ವಿರುದ್ಧ ದೂರುಗಳು ಮಾತ್ರ ಇನ್ನೂ ನಿಂತಿಲ್ಲ. ಮುರುಘಾಶ್ರೀ ವಿರುದ್ಧ ಎಸ್‍ಪಿ ಕಚೇರಿಗೆ ವಕೀಲ ಮಧುಕುಮಾರ್ ಮತ್ತೊಂದು ದೂರು ಸಲ್ಲಿಸಿದ್ದಾರೆ.
ಮೊದಲ ಕೇಸಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದ ಮುರುಘಾಶ್ರೀ ದಾವಣಗೆರೆ ವಿರಕ್ತ ಮಠದಲ್ಲಿ ವಾಸ್ತವ್ಯ ಹೂಡಿರುವುದು ಸಹ ಅಪರಾಧವಾಗಿದೆ. ಅವರು ವಿಕ್ಟಿಮ್ಸ್ ಗಳ ಮೇಲೆ ತಮ್ಮ ಪ್ರಭಾವ ಬೀರುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಮುರುಘಾಶ್ರೀಗೆ ಮಠದಲ್ಲಿರದಂತೆ ಬೇರೆಡೆಗೆ ಸ್ಥಳಾಂತರಿಸಬೇಕೆಂದು ಹೈಕೋರ್ಟಿಗೆ ವಕೀಲ ಮಧುಕುಮಾರ್ ಅವರು,
ಮನವಿ ಮಾಡಿದ್ದಾರೆ.
ಅಲ್ಲದೇ ಮುರುಘಾಶ್ರೀ ವಿರುದ್ಧ ಕಾನೂನುಬಾಹಿರ, ಅನಧಿಕೃತವಾಗಿ ಮಕ್ಕಳ ಪಾಲನೆ ಆರೋಪ ಮುರುಘಾಮಠದಲ್ಲಿ ಅಕ್ರಮವಾಗಿ ಮಕಳನ್ನು ಆರು ಜನ ಮಕ್ಕಳನ್ನು ಅನಧಿಕೃತವಾಗಿ ಸಾಕಿ, ಅಕ್ರಮ ಹಾಗೂ ಕಾನೂನುಬಾಹಿರವಾಗಿ ದತ್ತು ಕೊಟ್ಟಿದ್ದಾರೆಂಬ ಗಂಭೀರ ಆರೋಪ ಮಧುಕುಮಾರ್ ಅವರಿಂದ ಕೇಳಿಬಂದಿದೆ.
ಮುರುಘಾಮಠದಲ್ಲಿ 2001ರ ಜನವರಿ 5ರಂದು ಸಿಕ್ಕ ಮಗು, 2022ರ ಆಗಸ್ಟ್ 13 ರಂದು ಸಿಕ್ಕ ಹಸುಗೂಸು ಹಾಗೂ 2003ರ ಮೇ 21ರಂದು ಮೂರನೇ ಮಗು ಸೇರಿದಂತೆ ಮತ್ತೆ ಮೂವರು ಮಕ್ಕಳು ಮಠಕ್ಕೆ ಅನಧಿಕೃತವಾಗಿ ಧಾವಿಸಿದ್ದಾರೆಂದು ಆರೋಪಿಸಿದ್ದು, ಅವರಲ್ಲಿ ಕೆಲ ಹೆಣ್ಣು ಮಕ್ಕಳನ್ನು ಮುರುಘಾಶ್ರೀ ಆಪ್ತ ವಲಯಕ್ಕೆ ಅಕ್ರಮವಾಗಿ ದತ್ತು ನೀಡಿರುವ ವಿವರ ಹಾಗೂ ಎಲ್ಲಾ ಪ್ರಕ್ರಿಯೆ ಬಗ್ಗೆ ಮುರುಘಾಶ್ರೀ ಬರೆದಿರುವ ಅಗ್ನಿಗಾನ ಜೀವನಕಥನದಲ್ಲಿ ಉಲ್ಲೇಖವಾಗಿರುವ ದಾಖಲೆಯನ್ನು ಮಧುಕುಮಾರ್ ಬಿಡುಗಡೆ ಮಾಡಿದ್ದಾರೆ.
ಹೀಗಾಗಿ ಈ ಪ್ರಕರಣ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ, ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಹಾಗೆಯೇ ಕಳೆದ 14 ತಿಂಗಳ ಹಿಂದೆಯೂ ಚಿತ್ರದುರ್ಗ ಗ್ರಾಮಾಂತರ ಠಾಣೆ, ಜಿಲ್ಲಾಧಿಕಾರಿ, ಸಿಡಬ್ಲುಸಿ ಸಮಿತಿಗೂ ಮಧುಕುಮಾರ್ ದೂರು ಸಲ್ಲಿಸಿದ್ದರು. ಆದರೆ ಈವರೆಗೆ ಕ್ರಮವಾಗದ ಹಿನ್ನೆಲೆಯಲ್ಲಿ ಮತ್ತೆ ಚಿತ್ರದುರ್ಗ ಎಸ್ಪಿ ಧರ್ಮೇಂದ್ರಕುಮಾರ್ ಮೀನಾಗೆ ವಕೀಲ ಮಧುಕುಮಾರ್ ದೂರು ಸಲ್ಲಿಸಿದ್ದಾರೆ.