ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಆಷಾಢ ಶುಕ್ರವಾರಕ್ಕೆ ಸಿಹಿತಿಂಡಿ ಸಿದ್ಧವಾಗಿದ್ದು ಬರೋಬ್ಬರಿ 35 ಸಾವಿರ ಹಾರ್ಲಿಕ್ಸ್ ಮೈಸೂರು ಪಾಕ್ ತಯಾರಿಸಲಾಗುತ್ತಿದೆ.
ಶ್ರೀ ಚಾಮುಂಡೇಶ್ವರಿ ಸೇವಾ ಸಮಿತಿ ನೂರಡಿ ರಸ್ತೆಯ ಸ್ನೇಹಿತರು ಕಳೆದ 17 ವರ್ಷಗಳಿಂದ ಸತತವಾಗಿ ಆಷಾಡ ಶುಕ್ರವಾರದಂದು ಸಿಹಿ ಹಂಚುತ್ತಾ ಬಂದಿದ್ದಾರೆ. ಈ ಹಿಂದೆ ಎರಡು ವರ್ಷಗಳು ಕೋವಿಡ್ ಸೋಂಕು ಇದ್ದ ಹಿನ್ನಲೆ ಪ್ರಸಾದ ವಿತರಣೆ ಸ್ಥಗಿತವಾಗಿತ್ತು. ಮತ್ತೆ ಪ್ರತಿವರ್ಷದಂತೆ ಈ ವರ್ಷವೂ ನಿತ್ಯಾನಂದ ಕಲ್ಯಾಣ ಮಂಟಪದಲ್ಲಿ ಲಡ್ಡು ಬದಲಾಗಿ 35 ಸಾವಿರ ಆರ್ಲಿಕ್ಸ್ ಮೈಸೂರ್ ಪಾಕ್ ವಿತರಿಸಲೂ ಮುಂದಾಗಿದ್ದಾರೆ.
ಆತಿಥ್ಯ ಕ್ಯಾರ್ಟ್ರೀನ್ ನಿಂದ 30 ಜನ ಬಾಣಸಿಗರು 3 ದಿನಗಳಿಂದ ಸಿಹಿ ತಯಾರಿ ಮಾಡುತ್ತಿದ್ದಾರೆ. 600 ಕೆಜಿ ಸಕ್ಕೆರೆ,
175 kg ಕಡಲೆಇಟ್ಟು, 30 ಟಿನ್ ಆಯಲ್, 16 ಟಿನ್ ನಂದಿನಿ ತುಪ್ಪ, 3 ಕೆಜಿ ಏಲಕ್ಕಿ, 30 ಕೆಜಿ ಆರ್ಲಿಕ್ಸ್ ಬಳಕೆ ಮಾಡಲಾಗಿದೆ
ಸುಮಾರು 35 ಸಾವಿರ ಮಂದಿ ಭಕ್ತರಿಗೆ ಮೈಸೂರು ಪಾಕ್ ವಿತರಣೆಗೆ ಸೇವಾ ಸಮಿತಿ ಮುಂದಾಗಿರುವುದು ವಿಶೇಷ.
ಚಾಮುಂಡಿ ಭಕ್ತರಿಗೆ ನೀಡಲು ಹಾರ್ಲಿಕ್ಸ್ ಮೈಸೂರು ಪಾಕ್ ರೆಡಿ..!
Previous Articleಜುಲೈ ನಲ್ಲಿ ಪದ್ಮಾವತಿ
Next Article ಅಪಹರಣ ನಾಟಕವಾಡಿ ಹೆತ್ತವರಿಗೇ ಬೇಡಿಕೆ ಇಟ್ಟ ಖತರ್ನಾಕ್ ಮಗ!