ಬೆಂಗಳೂರು – ಕನ್ನಡ ಸಿನಿಮಾ ರಂಗದ ರೆಬೆಲ್ ಸ್ಟಾರ್ ಕೇಂದ್ರದ ಮಾಜಿ ಮಂತ್ರಿ ದಿವಂಗತ ಅಂಬರೀಶ್ ಅವರ ಪುತ್ರ ಅಭಿಷೇಕ್ ಗೌಡ ಹಾಗೂ ಖ್ಯಾತ ವಸ್ತ್ರ ವಿನ್ಯಾಸಕ ಪ್ರಸಾದ್ ಬಿದ್ದಪ ಅವರ ಪುತ್ರಿ ಅವಿವಾ ಬಿದ್ದಪ ಅದ್ದೂರಿಯಾಗಿ ಮದುವೆ ನೆರವೇರಿದೆ.
ಕುಟುಂಬ ಸದಸ್ಯರು ಆಹ್ವಾನಿತ ಗಣ್ಯರನ್ನು ಸಮ್ಮುಖದಲ್ಲಿ ಗೌಡ ಸಂಪ್ರದಾಯದಂತೆ ಮದುವೆ ನೆರವೇರಿದ್ದು ಆನಂತರ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ಆರತಕ್ಷತೆ ನೆರವೇರಿತು.
ಇದೀಗ ಮಂಡ್ಯದಲ್ಲಿ ಅದ್ದೂರಿಯಾಗಿ ಬೀಗರ ಔತಣಕೂಟ ಏರ್ಪಡಿಸಲು ಅಭಿಷೇಕ್ ಅವರ ತಾಯಿ ಮಂಡ್ಯ ಲೋಕಸಭಾ ಕ್ಷೇತ್ರದ ಸಂಸದೆ ಸುಮಲತಾ ಅಂಬರೀಶ್ ತೀರ್ಮಾನಿಸಿದ್ದಾರೆ ಈ ಮೂಲಕ ತಮ್ಮನ್ನು ಸಂಸತ್ ಸದಸ್ಯರನ್ನಾಗಿ ಆಯ್ಕೆ ಮಾಡಿದ ಜಿಲ್ಲೆಯ ಜನರಿಗೆ ಕೃತಜ್ಞತೆ ಸಲ್ಲಿಸುವ ಜೊತೆಗೆ ಅಭಿಷೇಕ್ ಗೌಡ ಅವರನ್ನು ರಾಜಕೀಯವಾಗಿ ಬೆಳೆಸುವಂತೆ ಮನವಿ ಮಾಡುವ ದೃಷ್ಟಿಯಿಂದ ಈ ಸಮಾರಂಭ ಆಯೋಜಿಸಲಾಗಿದೆ.
ಇದೆಲ್ಲದರ ನಡುವೆ ಅಂಬರೀಷ್ ಮದುವೆಯಾಗಿರುವ ಅವಿವಾ ಈಗಾಗಲೇ ಮದುವೆಯಾಗಿ ವಿಚ್ಛೇದನ ಪಡೆದಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ ಈ ಮೂಲಕ ಅವಿವಾ ಅವರಿಗೆ ಅಭಿಷೇಕ್ ಎರಡನೇ ಪತಿಯಾಗಿದ್ದಾರೆ
ಅವಿವಾ ಅವರು ಉದ್ಯಮಿ ವಿಕ್ರಂ ಮೆಹ್ತಾ ಅವರನ್ನು 2016 ರಲ್ಲಿ ಮದುವೆ ಆಗಿದ್ದರು. ಆದರೆ ಕೆಲವು ಕಾರಣಗಳಿಂದ ಅವಿವಾ ಪತಿಯಿಂದ ಡಿವೋರ್ಸ್ ಪಡೆದಿದ್ದರು. ಇದು ಈಗಾಗಲೇ ಅನೇಕ ಇಂಗ್ಲಿಷ್ ಪತ್ರಿಕೆಗಳಲ್ಲಿ ಪ್ರಕಟವಾಗಿದೆ.
ಈ ಮಧ್ಯೆ ಅವಿವಾ ಅವರನ್ನು ಸ್ನೇಹಿತರ ಪಾರ್ಟಿಯಲ್ಲಿ ಅಭಿಷೇಕ್ ಗೆ ಪರಿಚಯವಾಗಿದ್ದರು. ಆ ಪರಿಚಯ ಪ್ರೀತಿಗೆ ತಿರುಗಿತ್ತು. ಅವಿವಾ ವಯಸ್ಸಿನಲ್ಲಿ ತನಗಿಂತ ದೊಡ್ಡವರು ಎಂದು ತಿಳಿದರೂ ಅಭಿಷೇಕ್ ಪ್ರೀತಿ ಮಾಡಿದ್ದರು. ಈ ಪ್ರೀತಿ ಇದೀಗ ವೈವಾಹಿಕ ಸಂಬಂಧಕ್ಕೆ ವೇದಿಕೆ ಸೃಷ್ಟಿಸಿದೆ.
Previous Articleಮಂತ್ರಿ ಬೈರತಿ ಸುರೇಶ್ ಸುದ್ದಿಯಲ್ಲಿದ್ದಾರೆ ಯಾಕೆ ಗೊತ್ತಾ?
Next Article CM ಅಲ್ಲ ಕಂಡಕ್ಟರ್ ಸಿದ್ದರಾಮಯ್ಯ?