ಇತ್ತೀಚೆಗೆ BBC ಸುದ್ದಿಯಲ್ಲಿತ್ತು. ಪ್ರಧಾನಿ ಮೋದಿಯವರು ಗುಜರಾತ್ ಹಿಂಸಾಚಾರಕ್ಕೆ ನೇರ ಹೊಣೆ ಎನ್ನುವಂತೆ ನಿರೂಪಣೆ ಹೊತ್ತ ಒಂದು ಸಾಕ್ಷ್ಯಚಿತ್ರವನ್ನು ಪ್ರಕಟಿಸಿ ಬಿಬಿಸಿ ಭಾರತದಲ್ಲಿ ಬಹಳಷ್ಟು ಟೀಕೆಗೆ ಗುರಿಯಾಯಿತು. ಹಾಗೇ ಅದಾದ ನಂತರದ ಕೆಲವೇ ದಿನಗಳಲ್ಲಿ ಭಾರತದಲ್ಲಿ ಬಿಬಿಸಿ ಖಚೇರಿಗಳ ಮೇಲೆ ಆದಾಯ ತೆರಿಗೆ ಮತ್ತಿತರ ದಾಳಿಗಳೂ ನಡೆದವು. ಬಿಬಿಸಿಯನ್ನು ಬಿಜೆಪಿ ಪಕ್ಷ ಕಟುವಾಗಿ ಟೀಕಿಸಿದ್ದು ಈಗ ಹಳೆಯ ಸುದ್ದಿ.
ಈಗ ಅದೇ ಬಿಬಿಸಿ (BBC) ಬಿಜೆಪಿ ಪಕ್ಷದ ನೆರವಿಗೆ ಬಂದಂತಿದೆ. ಮೇ ಹತ್ತರಂದು ನಡೆಯುವ ಚುನಾವಣೆಯ ಬಗ್ಗೆ ಎಲ್ಲಾ ಸಮೀಕ್ಷೆಗಳೂ ಕಾಂಗ್ರೆಸ್ ಪಕ್ಷದ ಪರವಾಗಿ ಜನರ ಒಲವಿದೆ ಎಂದು ತೋರಿಸುತ್ತಿದ್ದರೆ, ಬಿಬಿಸಿ ಮಾತ್ರ ಕರ್ನಾಟಕದಲ್ಲಿ BJP ಗೆಲ್ಲುತ್ತದೆ ಮತ್ತು 140ಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆಯುತ್ತದೆ ಎಂದು ತನ್ನ ಸಮೀಕ್ಷೆಯಲ್ಲಿ ಹೇಳಿದೆ. ಈ ಸಮೀಕ್ಷೆಯನ್ನು ತೋರಿಸುತ್ತ ಅನೇಕ ಬಿಜೆಪಿ ಕಾರ್ಯಕರ್ತರು ಈಗಲೇ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಆದರೆ ಆ ಸಂತೋಷ ಬಹಳ ಸಮಯ ಉಳಿಯುವಂಥದ್ದಲ್ಲ ಎಂದು ಸ್ಪಷ್ಟವಾಗಿದೆ.

ಬಿಜೆಪಿಯವರು ಹಂಚಿಕೊಳ್ಳುತ್ತಿರುವ ಈ ಬಿಬಿಸಿ (BBC) ಸರ್ವೇ ಒಂದು ಫೇಕ್ ಸರ್ವೆಯಾಗಿದ್ದು, ಬಿಬಿಸಿ ಅಂಥಾ ಸಮೀಕ್ಷೆ ಮಾಡಿಯೇ ಇಲ್ಲ. ಮತ್ತು ಹಾಗೆ ಮಾಡಲು ಅದಕ್ಕೆ ಕಾರಣಗಳೂ ಇಲ್ಲ. ಇದು ಯಾರೋ ಬಿಬಿಸಿ ಹೆಸರು ಮತ್ತು ಲೋಗೋ ಬಳಸಿಕೊಂಡು ಹರಿಬಿಟ್ಟಿರುವ ಸುಳ್ಳು ಸುದ್ದಿ ಮತ್ತು ಆ ಸುಳ್ಳು ಸುದ್ದಿಯನ್ನು ಬಿಬಿಸಿ ಯಲ್ಲಿ ಬಂದ ಮೇಲೆ ಅದು ಸತ್ಯವೇ ಇರಬೇಕೆಂದು ನಂಬಿದವರು ಎಷ್ಟೋ ಮಂದಿ. ಅಯ್ಯೋ ಏನಪ್ಪಾ ಇದು ಎನ್ನುವ ಸ್ಥಿತಿಗೆ ತಲುಪಿದ್ದ ಕಾಂಗ್ರೆಸ್ ಈಗ ನಿಟ್ಟುಸಿರು ಬಿಡುವಂತಾಗಿದೆ.
Also read.


4 ಪ್ರತಿಕ್ರಿಯೆಗಳು
mgm app betting betmgm Florida betmgm AL
Delve into the depths of strategic card games and slot spins. crown coins casino official website provides educational resources for beginners. Turn knowledge into cash today!
Epic spins meet epic herds in slot heaven. buffalo gold collection free play brings unlimited bonuses, multiplier stacks, and jackpot herds. Stampede in!
chumbacasinox gives you the best of both worlds: free play + real cash prizes. Claim your welcome Sweeps Coins now and start winning big. Fun starts here!