ರಾಜ್ಯದಲ್ಲಿ ಮಿನಿ ಮಹಾ ಸಮರಕ್ಕೆ ರಣಕಹಳೆ ಮೊಳಗಿಸಲು ವೇದಿಕೆ ಸಜ್ಜುಗೊಂಡಿದೆ. ಮೀಸಲಾತಿ ಸೇರಿದಂತೆ ಹಲವು ಕಾರಣಗಳಿಂದಾಗಿ ಮುಂದೂಡಲ್ಪಟ್ಟ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ತಕ್ಷಣವೇ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗ ಒಂದೆರಡು ದಿನಗಳಲ್ಲೇ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ. ಮಧ್ಯ ಪ್ರದೇಶದ ನಗರ ಸ್ಥಳೀಯ ಸಮಸ್ಥೆಗಳಿಗೆ ಹಲವಾರು ಕಾರಣಗಳಿಂದ ಚುನಾವಣೆ ನಡೆದಿಲ್ಲ. ಈ ಸಂಬಂಧ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಚುನಾವಣೆ ಬಾಕಿ ಇರುವ ದೇಶದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಿಗೆ ತಕ್ಷಣವೇ ಚುನಾವಣೆ ನಡೆಸುವಂತೆ ಆದೇಶಿದೆ. ಇದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಿಗೂ ಅನ್ವಯವಾಗಲಿದೆ ಎಂದು ಹೇಳಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ೧೯೮ ವಾರ್ಡಗಳನ್ನು ೨೪೩ ವಾರ್ಡಗಳಾಗಿ ಮೇಲ್ದರ್ಜೆಗೆ ಏರಿಸಿದ ರಾಜ್ಯ ಸರ್ಕಾರ ಇದರ ಅನ್ವಯ ವಾರ್ಡಗಳ ಪುನರ್ವಿಂಗಡಣೆ ಮಾತು ಮೀಸಲಾತಿ ನಿಗದಿಪಡಿಸಬೇಕಾಗಿದೆ ಇದಕ್ಕಾಗಿ ಹೆಚ್ಚಿನ ಸಮಯಾವಕಾಶ ಬೇಕು ಎಂದು ಹೇಳಿ ಚುನಾವಣೆಯನ್ನು ಮುಂದೂಡಿತ್ತು. ಇದನ್ನ ಪ್ರಶ್ನಿಸಿ ರಾಜ್ಯ ಚುನಾವಣಾ ಆಯೋಗ ಮತ್ತು ಕಾಂಗ್ರೆಸ್ ನಾಯಕ ಅಬ್ದುಲ್ ವಾಜಿದ್ ನೇತೃತ್ವದ ತಂಡ ಹೈ ಕೋರ್ಟ್ಗೆ ರಿಟ್ ಸಲ್ಲಿಸಿದರು. ಈ ಅರ್ಜಿ ವಿಚಾರಣೆ ನಡೆಸಿದ ಹೈ ಕೋರ್ಟ್ ೨೦೨೦ರ ಡಿಸೆಂಬರ್ ೪ರಂದು ತೀರ್ಪು ನೀಡಿ ೬ ವಾರಗಳಲ್ಲಿ ೧೯೮ ವಾರ್ಡ್ಗಳಿಗೆ ಚುನಾವಣಾ ನಡೆಸಲು ಆದೇಶ ನೀಡಿತ್ತು . ಈ ತೀರ್ಪು ಪ್ರಶ್ನಿಸಿ ಸರ್ಕಾರ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ಬಾಕಿ ಇರುವ ಬೆನ್ನಲ್ಲೇ ಮುಖ್ಯ ನ್ಯಾಯಮೂರ್ತಿ ನೇತೃತ್ವದ ತ್ರಿಸದಸ್ಯ ಪೀಠ ಮಧ್ಯ ಪ್ರದೇಶದ ಅರ್ಜಿ ವಿಚಾರಣೆ ನಡೆಸಿ ಎಲ್ಲ ನಗರ ಸಂಸ್ಥೆಗಳಿಗೆ ತಕ್ಷಣವೇ ಚುನಾವಣಾ ನಡೆಸಲು ಆದೇಶಿಸಿದೆ.
Previous Articleಪ್ರೀತಿಗಾಗಿ ಬಿತ್ತು ಹೆಣ
Next Article ಕೆಲಸಕ್ಕೆ ಚಕ್ಕರ್ 38 ಇನ್ಸ್‌ಪೆಕ್ಟರ್ ಗಳಿಗೆ notice