ಬೆಂಗಳೂರು ಕೇಂದ್ರ (Bengaluru Central) ಲೋಕಸಭಾ ಕ್ಷೇತ್ರ. ನಿಜ ಅರ್ಥದಲ್ಲಿ ಕಾಸ್ಮೋ ಪಾಲಿಟಿನ್ ಸಂಸ್ಕೃತಿಯ ಕ್ಷೇತ್ರ. ಅಲ್ಪಸಂಖ್ಯಾತರು, ಬಹು ಸಂಖ್ಯಾತರು ಸಮಸಮ ಪ್ರಮಾಣದಲ್ಲಿ ಇರುವ ಈ ಕ್ಷೇತ್ರದಲ್ಲಿ ಸಿರಿವಂತರು ಮಧ್ಯಮ ವರ್ಗದವರು, ಕೊಳಗೇರಿ ನಿವಾಸಿಗಳು ಇದ್ದಾರೆ ವಿದ್ಯಾವಂತರು ಇದ್ದಾರೆ ನಿರಕ್ಷರ ಕುಕ್ಷಿಗಳು ಇದ್ದಾರೆ.
ಮಾಹಿತಿ ತಂತ್ರಜ್ಞಾನದ ದಿಗ್ಗಜ ಸಂಸ್ಥೆಗಳು ಇಲ್ಲಿವೆ ಹಾಗೆಯೇ ತಳ್ಳುಗಾಡಿ ವ್ಯಾಪಾರಿಗಳು ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ ಹೀಗಾಗಿ ಇದನ್ನು ಒಂದು ಮಿನಿ ಭಾರತ ಎಂದು ಕರೆಯಬಹುದು.
ಇಂತಹ ಕ್ಷೇತ್ರದಲ್ಲಿ ಸಮಸ್ಯೆಗಳು ನೂರಾರು. ಇವುಗಳಿಗೆ ಪರಿಹಾರ ಮರೀಚಿಕೆ.ಹೀಗಾಗಿ ಇಲ್ಲಿನ ಮತದಾರರು ತಮ್ಮ ಅಹವಾಲು ಕೇಳುವ ಜನಪ್ರತಿನಿಧಿಗಾಗಿ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಇವರ ನಿಜ ಅರ್ಥದಲ್ಲಿ ಪ್ರತಿನಿಧಿಯಾಗುವ ಕನಸಿನೊಂದಿಗೆ ಚುನಾವಣೆಗೆ ತು ಧುಮುಕಿದ್ದಾರೆ ಮನ್ಸೂರ್ ಅಲಿಖಾನ್.
ಸಂಘಟಕ ಶಿಕ್ಷಣ ಪ್ರೇಮಿ ಯಶಸ್ವಿ ಉದ್ಯಮಿ ಹೇಗೆ ಹಲವಾರು ವಿಶೇಷಣಗಳನ್ನು ತಮ್ಮೊಂದಿಗೆ ಹೊತ್ತು ತರುತ್ತಿರುವ ಈ ನಾಯಕ ಶಿಕ್ಷಣವೇ ದೇಶದ ಸಮಗ್ರ ಅಭಿವೃದ್ಧಿಗೆ ಸುಭದ್ರ ತಳಪಾಯ ಎಂದು ನಂಬಿರುವ ಕನಸುಗಾರ.
ರಾಜಕೀಯ ಹಿನ್ನೆಲೆಯುಳ್ಳ ಕುಟುಂಬದಿಂದ ಬಂದಿರುವ ಮನ್ಸೂರ್ ಅವರಿಗೆ ನಾಯಕತ್ವ ಎನ್ನುವುದು ಕುಟುಂಬದ ಬಳುವಳಿ. ಅಷ್ಟೇ ಅಲ್ಲ ಸಾಮಾಜಿಕ ಸೇವೆ, ಶೋಷಿತರ ಪರ ಕಳಕಳಿ, ತುಳಿತುಕೊಳ್ಳಗಾದವರನ್ನು ಮುಖ್ಯ ವಾಹಿನಿಗೆ ತರುವ ಮನಸ್ಸು ಇವೆಲ್ಲ ಅವರಿಗೆ ಹುಟ್ಟಿನಿಂದಲೇ ಬಂದ ಗುಣ.
ಇದರ ಪರಿಣಾಮವಾಗಿಯೇ ವಿದ್ಯಾರ್ಥಿ ದಿಸೆಯಿಂದಲೇ ರಾಜಕೀಯದ ಆಸಕ್ತರಾಗಿ ತಳಮಟ್ಟದ ಸಂಘಟನೆಯ ಮೂಲಕ ಕಾಂಗ್ರೆಸ್ ಪಕ್ಷದಲ್ಲಿ ಉನ್ನತ ಮಟ್ಟದ ಹುದ್ದೆಗೆರಿದ್ದಾರೆ.
ಅತ್ಯುತ್ತಮ ಶೈಕ್ಷಣಿಕ ಹಿನ್ನೆಲೆ, ಪ್ರಬಲ ಆರ್ಥಿಕ ಬಲ, ಸಮಾಜ ಸೇವೆಯ ಛಲದೊಂದಿಗೆ ಮುನ್ನುಗ್ಗುತ್ತಿರುವ ಮನ್ಸೂರ್ ತೆಲಂಗಾಣ ರಾಜ್ಯದ ಕಾಂಗ್ರೆಸ್ ಉಸ್ತುವಾರಿಯಾಗಿ ತೋರಿದ ಚಾತುರ್ಯ ಕಾಂಗ್ರೆಸ್ ಹೈಕಮಾಂಡ್ ಗಮನ ಸೆಳೆದಿದೆ.
ಇಂತಹ ಪ್ರಬಲ ಹಿನ್ನೆಲೆ ಹೊಂದಿರುವ ಮನ್ಸೂರ್ ಇದೀಗ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಜನ ಸೇವೆಯ ಮಹತ್ವಕಾಂಕ್ಷೆ ಹೊತ್ತು ಮತಯಾಚನೆಗೆ ಮುಂದಾಗಿದ್ದಾರೆ.
ಕ್ಷೇತ್ರದ ಪ್ರಜ್ಞಾವಂತ ಮತದಾರರು ಮನ್ಸೂರ್ ಅವರ ಸಾಮಾಜಿಕ ಶೈಕ್ಷಣಿಕ ಮತ್ತು ಆರ್ಥಿಕ ಹಿನ್ನೆಲೆಯನ್ನು ಗಮನಿಸಿ ತಮಗೊಬ್ಬ ಕನಸುಗಾರ ನಾಯಕ ಸಿಕ್ಕಿದ್ದಾನೆ ಆತನನ್ನು ನಮ್ಮ ಪ್ರತಿನಿಧಿಯಾಗಿ ಆಯ್ಕೆ ಮಾಡಿಕೊಳ್ಳುವ ಮೂಲಕ ಸಂಸತ್ತಿನಲ್ಲಿ ನಮ್ಮ ಧ್ವನಿಯಾಗಿ ಪ್ರತಿನಿಧಿಸುವಂತೆ ಮಾಡಬಹುದು ಎಂದು ಅವರನ್ನು ಬೆಂಬಲಿಸುತ್ತಿದ್ದಾರೆ.
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಶಾಂತಿನಗರ ಚಾಮರಾಜಪೇಟೆ ಗಾಂಧಿನಗರ ಮಹದೇವಪುರ ಪುಲಿಕೇಶಿ ನಗರ ಸಿ ವಿ ರಾಮನ್ ನಗರ ಶಿವಾಜಿನಗರ ಮುತ್ತು ಸರ್ವಜ್ಞನಗರ ಕ್ಷೇತ್ರದ ಮತದಾರರು ಹೊಸ ಭರವಸೆಯೊಂದಿಗೆ ಮನ್ಸೂರ್ ಅವರ ಪರ ನಿಂತಿದ್ದಾರೆ.
ಕಳೆದ ಮೂರು ಅವಧಿಯಲ್ಲಿ ಈ ಕ್ಷೇತ್ರದಲ್ಲಿ ನಡೆದ ಚುನಾವಣೆಯನ್ನು ಗಮನಿಸಿದಾಗ ರಾಜಕೀಯ ಹಿತಾಸಕ್ತಿಗಳೇ ಪ್ರಮುಖ ಪಾತ್ರ ವಹಿಸುತ್ತಿದ್ದವು ಮತದಾರರು ಅಲ್ಪಸಂಖ್ಯಾತ ಮತ್ತು ಬಹು ಸಂಖ್ಯಾತ ಎಂದು ವಿಭಜನೆಗೊಂಡು ಫಲಿತಾಂಶದ ದಿಕ್ಕು ಬದಲಾಗುತ್ತಿತ್ತು ಇದರ ಪರಿಣಾಮ ಕ್ಷೇತ್ರದ ಯಾವುದೇ ಸಮಸ್ಯೆಗಳಿಗೆ ಪರಿಹಾರ ಸಿಗದೇ ಹನುಮಂತನ ಬಾಲದಂತೆ ಸಮಸ್ಯೆಗಳು ಬೆಳೆಯುತ್ತಾ ಸಾಗಿದವು.
ಇದೀಗ ಕ್ಷೇತ್ರದ ಮತದಾರರಿಗೆ ತಮ್ಮ ತಪ್ಪಿನ ಅರಿವಾಗಿದೆ ಅಷ್ಟೇ ಅಲ್ಲ ಕ್ಷೇತ್ರಕೊಬ್ಬ ಅತ್ಯಂತ ಸುಶಿಕ್ಷಿತ ಸಾಮಾಜಿಕಳಿಯ ನಾಯಕ ಬಂದಿದ್ದಾನೆ ಎಂದು ಭಾವಿಸಿ ಎಲ್ಲರೂ ಮನ್ಸೂರ್ ಅವರ ಪರವಾಗಿ ನಿಂತಿದ್ದಾರೆ ಪಕ್ಷ ಭೇದವಿಲ್ಲದೆ ಮತದಾರರು ಇವರಿಗೆ ತೋರಿಸುತ್ತಿರುವ ಪ್ರೀತಿ ನಿಜವಾದ ಅರ್ಥದಲ್ಲಿ ಇವರು ಮತದಾರರ ಮನಸೂರೆಗೊಂಡಿದ್ದಾರೆ ಎಂದು ಗೊತ್ತಾಗುತ್ತದೆ.
4 ಪ್ರತಿಕ್ರಿಯೆಗಳು
ремонт стиральных машин на дому http://centr-remonta-stiralnyh-mashin.ru/ .
Айтек http://www.multimedijnyj-integrator.ru .
озвучивание http://www.ozvuchivanie-pomeshhenij.ru/ .
Экономьте с нашими проверенными промокодами. Экономьте с нашими проверенными промокодами. .