ಬೆಂಗಳೂರು, ಅ.13- ಮಹಾನಗರಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಐ.ಟಿ.ದಾಳಿಗೂ (IT Raid) ರಾಜಸ್ಥಾನ ಸೇರಿ ಪಂಚ ರಾಜ್ಯಗಳ ವಿಧಾನಸಭ ಚುನಾವಣೆಗೆ ನಂಟಿರುವುದು ಪತ್ತೆಯಾಗಿದೆ.
ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗೆ ರಾಜ್ಯದಿಂದ ಹಣವನ್ನು ಫಂಡಿಂಗ್ ಮಾಡಲಾಗುತ್ತಿದೆ ಎನ್ನುವ ಖಚಿತ ಮಾಹಿತಿಯ ಆಧರಿಸಿ ಆದಾಯ ತೆರಿಗೆ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ ಎಂಬ ಅಂಶ ಬಹಿರಂಗವಾಗಿದೆ.
ರಾಜ್ಯದಲ್ಲಿ ನಡೆದ ಐ.ಟಿ.ದಾಳಿಗಳ ಇತಿಹಾಸದಲ್ಲಿಯೇ ಅತೀ ದೊಡ್ಡ ಪ್ರಮಾಣದ ನಗದು ಪತ್ತೆಯಾಗಿದೆ ಐಟಿ ಅಧಿಕಾರಿಗಳು ಯಾವುದೇ ದಾಖಲೆಗಳಿಲ್ಲದ ಬರೋಬ್ಬರಿ 42 ಕೋಟಿ ರೂಪಾಯಿ ವಶಕ್ಕೆ ತೆಗೆದುಕೊಂಡರು.
ದಾಳಿಯ ವೇಳೆ ಫ್ಲ್ಯಾಟ್ ಒಂದರ ಲಾಕ್ ಮಾಡಿದ್ದ ರೂಮಿನಲ್ಲಿದ್ದ ಮಂಚದ ಅಡಿಯಲ್ಲಿ 42 ಕೋಟಿ ರೂಪಾಯಿ ಪತ್ತೆಯಾಗಿದ್ದು, ಇದನ್ನು ರಾಜಸ್ಥಾನ ವಿಧಾನಸಭೆ ಚುನಾವಣೆಗೆ ಬಳಸಲು ಇಡಲಾಗಿತ್ತು ಎಂಬ ಸಂಶಯ ವ್ಯಕ್ತವಾಗಿದೆ.
ಮಂಚದ ಅಡಿಯಲ್ಲಿ 23 ರಟ್ಟಿನ ಬಾಕ್ಸ್‌ಗಳಲ್ಲಿ ಕಂತೆ ಕಂತೆ ಹಣ ಲಭ್ಯವಾಗಿತ್ತು. ಎಲ್ಲವೂ ಐನೂರು ಮುಖಬೆಲೆಯ ನೋಟಿನ ಕಂತೆಗಳಾಗಿದ್ದು, ಕಾರಿನಲ್ಲಿ ಇದನ್ನು ಸಾಗಿಸಲು ಸಿದ್ದಪಡಿಸಲಾಗಿತ್ತು.
ಖಾಲಿಯಿದ್ದ ಫ್ಲ್ಯಾಟ್:
ಕೋಟಿಗಟ್ಟಲೇ ಹಣ ದೊರೆತ ಖಾಲಿಯಿದ್ದ ಫ್ಲ್ಯಾಟ್ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷರಾಗಿರುವ ಅಂಬಿಕಾಪತಿ ಅವರ ಪತ್ನಿ, ಮಾಜಿ ಕಾರ್ಪೊರೇಟರ್ ಅಶ್ವಥಮ್ಮ ಅವರ ಸಂಬಂಧಿಯೊಬ್ಬರಿಗೆ ಸೇರಿದ್ದು ಎಂದು ತಿಳಿದುಬಂದಿದ್ದು,ಈ ಸಂಬಂಧಿಸಿದಂತೆ ಹಲವರ ವಿಚಾರಣೆ ನಡೆಸಲಾಗಿದೆ.
ಕೀ ಕೊಡದೆ ಆಟ:
ಹಣ ಇದ್ದ ಈ ಮನೆಯ ಬಿಲ್ಡರ್ ಮನೆಯ ಕೀ ಕೊಡದೆ ಅಧಿಕಾರಿಗಳಿಗೆ ಆಟವಾಡಿಸಿದ್ದ. ಡ್ರೈವರ್ ಬಳಿಯಲ್ಲಿ ಕೀ ಕೊಟ್ಟು ಬೆಂಗಳೂರು ಬಿಡಲು ಹೇಳಿದ್ದ. ಕೊನೆಗೆ ಬಿಲ್ಡರ್ ಡ್ರೈವರ್ ಅನ್ನು ವಶಕ್ಕೆ ಪಡೆದು ಅಧಿಕಾರಿಗಳು ಕೀ ತೆಗೆದುಕೊಂಡಿದ್ದಾರೆ. ಸಂಜೆ 7 ಗಂಟೆಗೆ ಮನೆಯ ಬೀಗ ತೆಗೆದು ಹಣವನ್ನು ಜಪ್ತಿ ಮಾಡಿದ್ದಾರೆ. 42 ಕೋಟಿ ರೂ. ಹಣವನ್ನು ಜಪ್ತಿ ಮಾಡಿದ ಐಟಿ ಅಧಿಕಾರಿಗಳು ಹಣದ ದೃಶ್ಯಾವಳಿಯನ್ನು ಚಿತ್ರೀಕರಣ ಮಾಡಿಸಿ ಈಗಾಗಲೇ ಇಡಿ ಅಧಿಕಾರಿಗಳಿಗೂ ಮಾಹಿತಿ ನೀಡಿದ್ದಾರೆ.
ಅಕ್ರಮ ಹಣದ ವರ್ಗಾವಣೆ ಕೇಸ್‌ನಲ್ಲಿ ಪ್ರಕರಣ ದಾಖಲು ಮಾಡಲು ಇಡಿ ತಯಾರಿ ಮಾಡಿಕೊಳ್ಳುತ್ತಿದೆ. ಇದು ಯಾರಿಗೆ ಸೇರಿದ ಮನೆ ಎಂಬ ವಿವರ ಅಧಿಕಾರಿಗಳು ನೀಡಿಲ್ಲ. ಆದರೆ ಅನುಮಾನಗಳು ಅಧಿಕಾರದಲ್ಲಿರುವವರ ಆಪ್ತರ, ಗುತ್ತಿಗೆದಾರರ ಕಡೆಗೆ ಬೊಟ್ಟು ಮಾಡಿವೆ.
ಆರ್‌ಟಿ ನಗರದಲ್ಲಿ ಪತ್ತೆ:
ನಿನ್ನೆ ಸಂಜೆ 6 ಗಂಟೆಗೆ ಪೊಲೀಸ್ ಸಿಬ್ಬಂದಿಗಳ ಭದ್ರತೆಯಲ್ಲಿ ಐಟಿ ಅಧಿಕಾರಿಗಳು ಏಕಕಾಲದಲ್ಲಿ ಆರ್‌ಟಿ ನಗರದ ಎರಡು ಸ್ಥಳಗಳಲ್ಲಿ ಹಾಗೂ ಆತ್ಮಾನಂದ ಕಾಲೋನಿಯ ಒಂದು ಫ್ಲ್ಯಾಟ್ ಮೇಲೆ ದಾಳಿ ಮಾಡಿದ್ದರು.
ದಾಳಿಯ ವೇಳೆ ದೊರೆತ ಹಣ ಹಾಗೂ ಕೆಲವರ ವಿಚಾರಣೆ ನಡೆಸುತ್ತಿರುವ ದೃಶ್ಯಾವಳಿಗಳನ್ನು ಅಧಿಕಾರಿಗಳು ಇಂಚಿಂಚೂ ರೆಕಾರ್ಡ್ ಮಾಡಿಕೊಂಡಿದ್ದಾರೆ. ಇದೇ ವೇಳೆ ವಾರ್ಡ್ ನಂ 95ರ ಮಾಜಿ ಕಾರ್ಪೊರೇಟರ್ ನಿವಾಸದ ಮೇಲೂ ಐಟಿ ದಾಳಿ ನಡೆದಿದೆ. ಗಣೇಶ ಬ್ಲಾಕ್‌ನ ಅಶ್ವತಮ್ಮ ಹಾಗೂ ಆರ್.ಅಂಬಿಕಾಪತಿ ದಂಪತಿಗಳ ನಿವಾಸದ ಮೇಲೂ ದಾಳಿಯಾಗಿದೆ.
ಸಿಎಂ ಆಪ್ತ:
ಅಂಬಿಕಾಪತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಎನ್ನಲಾಗಿದೆಹಿಂದೆ ಆರ್‌ಆರ್ ನಗರ ಶಾಸಕ ಮುನಿರತ್ನ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದು ಕಳೆದ ಆ. 8ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದ ಅಂಬಿಕಾಪತಿ, ಗುತ್ತಿಗೆ ಕೆಲಸದ ಬಿಲ್ ಅನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರು.
ಅಂಬಿಕಾಪತಿ ವಿರುದ್ಧ ಆರ್‌ಆರ್ ನಗರ ಶಾಸಕ ಮುನಿರತ್ನ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಅಂಬಿಕಾಪತಿ, ಕೆಂಪಣ್ಣ ತಂಡದಲ್ಲಿದ್ದು, ಇಬ್ಬರ ಮೇಲೂ ಮಾನನಷ್ಟ ಮೊಕದ್ದಮೆ ಹೂಡಲಾಗಿತ್ತು.
ಹೇಮಂತ್ ಗೂ ಶಾಕ್ :
ನಿನ್ನೆ ಬಿಬಿಎಂಪಿ ಗುತ್ತಿಗೆದಾರ ಹೇಮಂತ್ ಮನೆ ಮೇಲೂ ಐಟಿ ದಾಳಿ ನಡೆದಿದೆ. ಬಿಲ್ ಪಾವತಿಗೆ ಸರ್ಕಾರ ಪರ್ಸೆಂಟೇಜ್ ಪಡೆಯುತ್ತಿದೆ ಎಂದು ಹೇಮಂತ್ ಆರೋಪ ಮಾಡಿದ್ದರು. ಇಂದು ಅಂಬಿಕಾಪತಿ ಮನೆ ಮೇಲೆ ಐಟಿ ದಾಳಿ ನಡೆದಿದೆ. ಅಂಬಿಕಾಪತಿ ಹಾಗೂ ಗುತ್ತಿಗೆದಾರರ ಹೇಮಂತ್ ಒಂದೇ ತಂಡದವರಾಗಿದ್ದಾರೆ.


7 ಪ್ರತಿಕ್ರಿಯೆಗಳು
mgm betting lines https://betmgm-play.com/ betmgm Rhode Island
Discover a haven for gamblers seeking variety and excitement. crowns coin casino provides secure banking and round-the-clock customer service. Register today for instant access to premium games!
Sweet Bonanza is where luck meets candy-coated chaos for unforgettable gaming sessions. Pay sweet bonanza online, multiply everywhere, win everywhere. Start spinning sweet!
Thunder to the top of the leaderboards. buffalo grand unleashes scatters, wild herds, and progressive thunder. Spin today!
Join chumba casino big wins today and unlock free Sweeps Coins instantly. Play hundreds of exciting slots and redeem real cash prizes. The thrill is real!
Big streamers. Bigger stake online casino real money multipliers. Biggest community. Stake.
Join DraftKings online casino Casino for epic value. Play $5 to unlock 500 spins on hot games plus up to $1K back if the first day dips. Win like never before!