ಬೆಂಗಳೂರು, ಮಾ.14- ಪ್ರಾದೇಶಿಕ ಅಸ್ಮಿತೆ ಮೂಲಕ ರಾಷ್ಟ್ರೀಯ ವಾದಿ ಬಿಜೆಪಿಗೆ ಸೆಡ್ಡು ಹೊಡಯಲು ರಾಜ್ಯದ ಆಡಳಿತ ರೂಡ ಕಾಂಗ್ರೆಸ್ ತೀರ್ಮಾನಿಸಿದೆ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮೊದಲ ಅವಧಿಯಲ್ಲಿ ಕರ್ನಾಟಕಕ್ಕೆ ಪ್ರತ್ಯೇಕ ಧ್ವಜ ಸಿದ್ಧಪಡಿಸುವ ಮೂಲಕ ಪ್ರಾದೇಶಿಕತೆಯ ಮಂತ್ರ ಜಪಿಸಲಾಗಿತ್ತು ಇದೀಗ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ವಿಧಾನಸೌಧದ ಮುಂದೆ ನಾಡದೇವತೆ ಭುವನೇಶ್ವರಿ (Bhuvaneshwari) ಪ್ರತಿಮೆ ಹಾಕಲು ತೀರ್ಮಾನಿಸಲಾಗಿದೆ.
ಇಂದು ನಡೆದ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿಧಾನಸೌಧದ ಪಶ್ಚಿಮ ದ್ವಾರದ ಮುಂಭಾಗದ ರಸ್ತೆಯ ಎಡಭಾಗದಲ್ಲಿ ಭುವನೇಶ್ವರಿ ಪ್ರತಿಮೆ ಹಾಕಲು ನಿರ್ಧರಿಸಲಾಗಿದೆ ಎಂದು ಹೇಳಿದರು ನಾಡದೇವತೆ ಭುನೇಶ್ವರಿ ಕೈಯಲ್ಲಿ ಹಳದಿ-ಕೆಂಪು ಧ್ವಜ ಹಿಡಿದಿರುವ ಪ್ರತಿಮೆ ನಿರ್ಮಾಣ ಮಾಡಲಾಗುವುದು. ಇದಕ್ಕೆ 23 ಕೋಟಿ ರೂಪಾಯಿ ವೆಚ್ಚವಾಗಲಿದೆ. ತಕ್ಷಣಕ್ಕೆ ಕಾಮಗಾರಿ ಆರಂಭಿಸಲು ತೀರ್ಮಾನಿಸಲಾಗಿದೆ ಎಂದರು.
ಕೆಂಗಲ್ ಹನುಮಂತಯ್ಯ ಅವರ ಪ್ರತಿಮೆಯ ಎಡಭಾಗದಲ್ಲಿ ಭುವನೇಶ್ವರಿ ಪ್ರತಿಮೆ ಸ್ಥಾಪನೆಯಾಗಲಿದೆ ಲೋಹದ ಈ ಪ್ರತಿಮೆ ನಿರ್ಮಾಣಕ್ಕೆ 23 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಅಂದಾಜು ಮಾಡಿರುವುದಾಗಿ ವಿವರಿಸಿದರು.
1 ಟಿಪ್ಪಣಿ
Айтек http://multimedijnyj-integrator.ru/ .